ಸಿಂದಗಿ: ತಾಲೂಕಿನ ಆಹೇರಿ ಗ್ರಾಮದಲ್ಲಿರುವ ಗಂಗಾಧರೇಶ್ವರರ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ಸಂಕ್ರಮಣದ ದಿನವೇ ಸೋಮವಾರ ಭಕ್ತರ ದರ್ಶನದಿಂದ ಜಾತ್ರೆ ವಿಜೃಂಭಣೆಯಿಂದ ನಡೆಯಿತು.
ತಾಲೂಕಿನ ಆಹೇರಿ ಗ್ರಾಮದಲ್ಲಿರುವ ಗಂಗಾಧರೇಶ್ವರ ದೇವಸ್ಥಾನಕ್ಕೆ ಪಲ್ಲಕ್ಕಿಯನ್ನು ಜಯಘೋಷಗಳನ್ನು ಕೂಗುತ್ತಾ ಸ್ವಾಗತಿಸಲಾಯಿತು. ಬಳಿಕ ಅಗ್ಗಿ ಹಾಯುವ ಕಾರ್ಯ ಜಗುಗಿತು. ದೇವಸ್ಥಾನದ ಆವರಣದಲ್ಲಿ ಚರಗ ಚೆಲ್ಲಿ ರೈತನ ಸಿರಿ ಸಮೃದ್ಧಿಗೆ ಪ್ರಾರ್ಥಿನೆ ಸಲ್ಲಿಸಲಾಯಿತು. ಈ ಬಾರಿ 150 ಹಂಡೆಯ ಬಜ್ಜಿ ಪಲ್ಯೆ ಮಾಡಲಾಯಿತು.
ಗುರು ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿಯಾದ ಭಕ್ತರು. ಈ ಜಾತ್ರೆಯ ವಿಶೇಷವೆನೆಂದರೆ ವಿವಿಧ ಧಾನ್ಯಗಳಿಂದ ತಯಾರಿಸಿದ ಭಜ್ಜಿ ಪಲ್ಯೆ ಮತ್ತು ರೊಟ್ಟಿಗೆ ಭಕ್ತರೆಲ್ಲರೂ ಬಾಯಿ ಚಪ್ಪರಿಸಿ ಪ್ರಸಾದ ರೂಪದಲ್ಲಿ ಸ್ವೀಕರಿಸಿ ಮಲ್ಲಯ್ಯನ ಏಳ ಕೋಟೆ ಏಳು ಕೋಟೆಯ ಉಘೆ ಎಂದು ಗಂಗಾಧರೇಶ್ವರ ಕೃಪೆಗೆ ಪಾತ್ರರಾಗುತ್ತಾರೆ.
ಕಮಿಟಿಯ ಭಾಗಪ್ಪಗೌಡ ಪಾಟೀಲ, ಶಾಂತಗೌಡ ಬಿರಾದಾರ, ಗಂಗಾಧರ ಚಿಂಚೊಳ್ಳಿ, ರಮಜಾನಸಾಬ ದುಮ್ಮದ್ರಿ, ಗೌಡಪ್ಪಗೌಡ ಪಾಟೀಲ, ಸಿದ್ದು ಕಡಗಂಚಿ, ಬಸಣ್ಣಸಾಹು ಕಡಗಂಚಿ, ಶಿವಾನಂದ ಪೀರಶೆಟ್ಟಿ, ಗಂಗಣ್ಣ ಸೇರಿದಂತೆ ಇತರರು ಜಾತ್ರೆಯ ನೇತೃತ್ವವನ್ನು ವಹಿಸಿಕೊಂಡಿದ್ದರು.
ಜಾತ್ರಾ ಮಹೋತ್ಸವದಲ್ಲಿ ಶಾಸಕ ಅಶೊಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಯಶವಂತ್ರಾಯಗೌಡ ರೋಗಿ, ಲಿಂಬೆ ಅಬಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಎಂ.ಎಂ.ಹಂಗರಗಿ, ಪಂಡಿತ ಯಂಪುರೆ, ವಾಯ್.ಸಿ. ಮಯೂರ, ಮಹಾಂತಗೌಡ ಬಿರಾದಾರ, ಸಿದ್ದಲಿಂಗ ಚೌಧರಿ ಸೇರಿದಂತೆ ವಿವಿಧ ತಾಲೂಕಿನ, ಜಿಲ್ಲೆಯ ಮತ್ತು ರಾಜ್ಯದ ಭಕ್ತರು ಭಾಗವಹಿಸಿ ಗುರುವಿನ ದರುಶನ ಪಡೆದು ಕೃತಾರ್ಥರಾದರು.