ಮೂಡಲಗಿ -ಶಿಕ್ಷಣ ಸಂಸ್ಥೆಯನ್ನು ಉಳಿಸಿ ಬೆಳೆಸಿ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಕಾರಣೀಭೂತರ ಸ್ಮರಣೆಯ ದಿನಾಚರಣೆಯನ್ನು ಆಚರಿಸುವುದು ಹೆಮ್ಮೆಯ ಸಂಗತಿಯಾಗಿದೆ. ಸೋನವಾಲ್ಕರ ಹಾಗೂ ಹೊಸೂರ ಕುಟುಂಬಗಳು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರವಾದದೆಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಹೇಳಿದರು.
ಮೂಡಲಗಿ ಪಟ್ಟಣದ ಬಿ ವಿ ಸೋನವಾಲ್ಕರ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ಸಂಸ್ಥಾಪಕರ ದಿನದ ಸಂಭ್ರಮಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಸಂಸ್ಥಾಪಕರ ಜೀವನ ಸಾಧನೆ ಮತ್ತು ಅವರ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಮುಖ್ಯ ಅತಿಥಿಗಳಾದ ಈರಪ್ಪ ಡವಳೇಶ್ವರ ಮಾತನಾಡಿ, ಸಂಸ್ಥಾಪಕರ ದಾರ್ಶನಿಕತೆ ಮತ್ತು ಸಂಸ್ಥಾಪಕರುಗಳ ಶಿಕ್ಷಣ, ಸಾಮಾಜಿಕ ಸೇವೆ ಶ್ಲಾಘನೀಯ ಈ ದಿನವೂ ಪ್ರೇರಣಾದಾಯಕ ಮತ್ತು ಸ್ಮರಣೀಯ ದಿನವೆಂದು ಹೇಳಿದರು.
ಲಯನ್ಸ್ ಎಜುಕೇಶನ್ ಸಂಸ್ಥೆಯ ವಿ ಬಿ ಸೋನ್ವಾಲಕರ ಇಂಗ್ಲಿಷ್ ಮೀಡಿಯಂ ಸ್ಕೂಲ್, ಬಿ ವಿ ಸೋನ್ವಾಲಕರ ಪಬ್ಲಿಕ್ ಸ್ಕೂಲ್ ಹಾಗೂ ಶಿವರಾಮದಾದಾ ಕನ್ನಡ ಮಾಧ್ಯಮ ಶಾಲೆ ಮೂಡಲಗಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವೆಂಕಪ್ಪ ಬಾಳಪ್ಪ ಸೋನ್ವಾಲ್ಕರ, ಬಸಪ್ಪ ಬಾಳಪ್ಪ ಸೋನ್ವಾಲ್ಕರ, ಶ್ರೀಮತಿ ರುಕ್ಕವ್ವ ವೆಂಕಪ್ಪ ಸೋನ್ವಾಲಕರ ಹಾಗೂ ವೀರಣ್ಣ ಆಯ್ ಹೊಸೂರು ಅವರ ಸ್ಮರಣಾರ್ಥವಾಗಿ ಪ್ರತಿವರ್ಷ ಆಚರಿಸುವ ಸಂಸ್ಥಾಪಕರ ದಿನವನ್ನು ಈ ವರ್ಷವೂ ಅದ್ದೂರಿಯಾಗಿ ಆಚರಿಸಲಾಯಿತು.
2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸೌಜನ್ಯ ವಿಠ್ಠಪ್ಪನವರ, ಸ್ನೇಹಾ ಫಿರೋಜಿ, ಸಾಯಿನಾಥ ಫಿರೋಜಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುನೀತಾ ಹೊಸೂರ, ಶಿವು ಹೊಸೂರ ಅವರು ನೆರವೇರಿಸಿದರು.
ವಿಶೇಷ ಅಹ್ವಾನಿತರಾದ ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಶ್ವೇತಾ ಶೆರೆಗಾರ, ಎ ಎ ಕುರುಬೇಟ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಶಂಕ್ರಯ್ಯ ಹಿರೇಮಠ, ಬಿ ಎಚ್ ಸೊನವಾಲ್ಕರ, ಬಸವರಾಜ ಪಾಟೀಲ, ತಮ್ಮಣ್ಣ ಗಡಾದ, ಬಿ ವಾಯ ಶಿವಾಪುರ, ನೇಮಿನಾಥ ಬೇವಿನಕಟ್ಟಿ, ಪ್ರಾಚಾರ್ಯರಾದ ಆರ್ ಆರ್ ಮೆದುಗೊಪ್ಪ, ಕಿರಣ ಉಪಾಧ್ಯೆ, ರಾಜು ತಳವಾರ, ಶಿಕ್ಷಕರಾದ ಬಿ ಕೆ ಡಾಂಗೆ, ಶೇಖರ ಹೆಬ್ಬಳ್ಳಿ, ವಿವೇಕ ರೊಳ್ಳಿ, ಪ್ರಸನ್ನ ಆರ್.ಗಿರೀಶ, ದುಂಡಪ್ಪ ವಡೆಯರ, ಕವಿತಾ ಪಾಟೀಲ, ಅರುಣಾ ಬಡಿಗೇರ, ನೀಲಾ ಬೆನ್ನಳ್ಳಿ, ಅರ್ಚನಾ ಅಮಾಟೆ, ಭಾರತಿ, ಸಾದಿಯಾ ಮುಲ್ಲಾ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸತ್ಸಂಗದ ಸದಸ್ಯರು ಉಪಸ್ಥಿತರಿದ್ದರು.
ಎಂಟನೇ ವರ್ಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಈರಣ್ಣ ಬೆಳಗಲಿ ಸ್ವಾಗತಿಸಿದರು. ಸುಶೀಲಾ ಹಾಗೂ ಸಂಕೇತ ನಿರೂಪಿಸಿದರು ಪ್ರಸನ್ನ ಆರ್. ವಂದಿಸಿದರು.