ಮಹಾತ್ಮ ಫುಲೆಯವರ ಕೊಡುಗೆ ಪ್ರತಿ ಪೀಳಿಗೆಗೂ ಸ್ಪೂರ್ತಿ ನೀಡುತ್ತದೆ – ಈರಣ್ಣ ಕಡಾಡಿ

Must Read

ಮೂಡಲಗಿ: ಸಮಾಜದ ಶೋಷಿತ ಮತ್ತು ವಂಚಿತ ವರ್ಗಗಳ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಾತ್ಮ ಜ್ಯೋತಿರಾವ್ ಫುಲೆ ಅವರು ನೀಡಿದ ಅಮೂಲ್ಯ ಕೊಡುಗೆ ಪ್ರತಿ ಪೀಳಿಗೆಗೂ ಸ್ಫೂರ್ತಿ ನೀಡುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಮೂಡಲಗಿ ಪಟ್ಟಣದ ವಿದ್ಯಾನಗರ ಜ್ಯೋರ್ತಿಲಿಂಗ ಬ್ಯಾಂಕ್‌ ಹತ್ತಿರ ನಡೆದ ಮಹಾತ್ಮ ಶ್ರೀ ಜ್ಯೋತಿಬಾ ಫುಲೆಯವರ 198ನೇ ಜಯಂತೋತ್ಸವದ ಮೆರವಣಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಭಾರತದಲ್ಲಿ ಮಹಿಳಾ ಶಿಕ್ಷಣವನ್ನು ಉತ್ತೇಜಿಸಲು ಮತ್ತು ತುಳಿತಕ್ಕೊಳಗಾದವರನ್ನು ಸಬಲೀಕರಣಗೊಳಿಸಲು ಮಾಡಿದ ಅವಿರತ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದರು. ‘ಸತ್ಯಶೋಧಕ ಸಮಾಜ’ ಸ್ಥಾಪನೆಯ ಮೂಲಕ, ಸಮಾಜವನ್ನು ದುಷ್ಕೃತ್ಯಗಳಿಂದ ಮುಕ್ತಗೊಳಿಸುವಲ್ಲಿ ಅವರು ಗಮನಾರ್ಹ ಕೆಲಸ ಮಾಡಿದರು. ಶಿಕ್ಷಣ, ಸಮಾನತೆ ಮತ್ತು ನ್ಯಾಯದ ಮೂಲಕ ಸಾಮಾಜಿಕ ಬದಲಾವಣೆಗೆ ಅಡಿಪಾಯ ಹಾಕಿದ ಮಹಾತ್ಮರ ಜೀವನವು ಅನುಕರಣೀಯವಾಗಿದೆ ಅವರು ಮಾನವೀಯತೆಯ ನಿಜವಾದ ಸೇವಕ ಎಂದು ಬಣ್ಣಿಸಿದರು.

ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ,ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಳಿ ಸಮಾಜದ ಮುಖಂಡ ಈರಪ್ಪ ಬನ್ನೂರ, ಲಕ್ಷ್ಮಣ ಮಾಲಗಾರ, ಭೀಮಪ್ಪ ಅವರಾದಿ, ಮಲ್ಲಪ್ಪ ಮುತಾರಿ, ಶಂಕರ ಕೊತ್ತಂಬರಿ, ನಾಗಪ್ಪ ಮಾಲಗಾರ, ಯಲ್ಲಪ್ಪ ಖಾನಾಪುಗೋಳ, ಸಂಜು ಕಮತೆ, ಮಹಾದೇವ ಬಡ್ಡಿ, ಶಿವಬಸು ಹಂದಿಗುಂದ, ಚಂದ್ರು ಗಾಣಿಗ, ಈರಪ್ಪ ಢವಳೇಶ್ವರ, ಕುಮಾರ ಗಿರೆಡ್ಡಿ, ಗುರು ಗಂಗಣ್ಣವರ, ಬಸವರಾಜ ಪಾಲಭಾವಿ, ಮಲ್ಲಪ್ಪ ಮಧುಗುಣಕಿ ಸೇರಿದಂತೆ ಅನೇಕ ಗಣ್ಯರು ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group