spot_img
spot_img

ಸರ್ಕಾರಕ್ಕೆ ಜನರ ಹಿತ ಬೇಡವಾಗಿದೆ, ಜನ ನಶೆಯಲ್ಲಿರುವುದೇ ಬೇಕಾಗಿದೆ – ವೈ ಸಿ ಮಯೂರ

Must Read

- Advertisement -

ಸಿಂದಗಿ; ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಎಂಎಸ್‍ಐಎಲ್ ಮದ್ಯದ ಅಂಗಡಿ ಪರವಾನಗಿ ರದ್ದು ಪಡಿಸುವಂತೆ ಆಗ್ರಹಿಸಿ ಮಹಿಳೆಯರು ದೇವರಹಿಪ್ಪರಗಿ ಪಟ್ಟಣದ ಡಾ. ಅಂಬೇಡ್ಕರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ 50ರ ಮೇಲೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.

ತಾಲೂಕಿನ ಮುಳಸಾವಳಗಿ ಗ್ರಾಮದ ಮಹಿಳೆಯರು ಶುಕ್ರವಾರ ಬೆಳಿಗ್ಗೆಯಿಂದಲೇ ಜಮಾಯಿಸಿ ಧರಣಿ ಪ್ರಾರಂಭಿಸಿ ಸಂಜೆಯವರೆಗೂ ಪ್ರತಿಭಟನೆ ಮುಂದುವರೆಯಿತು ಆದ್ದರಿಂದ ಜಿಲ್ಲಾ ಅಬಕಾರಿ ಉಪನೀರಿಕ್ಷಕ ಎಚ್ ಎಸ್ ವಜ್ರಮಟ್ಟಿ, ಹಾಗೂ ಅಬಕಾರಿ ಅಧಿಕಾರಿ ಆರತಿ ಖೈನೂರ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸ ಪಟ್ಟರು ಕೂಡಾ ಎಂಎಸ್‍ಐಎಲ್ ಮದ್ಯದ ಅಂಗಡಿ ಬಂದ್ ಆಗುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಸ್ಥಳದಲ್ಲಿಯೇ ಅಡುಗೆ ಮಾಡಲು ಮುಂದಾದರು.

ಈ ಸಂದರ್ಭದಲ್ಲಿ ಮಹಾದೇವಿ ಬಾಗೇವಾಡಿ, ಭೋರಮ್ಮ ರೂಗಿ ಮಾತನಾಡಿ, ಗ್ರಾಮದಲ್ಲಿನ ಎಂಎಸ್‍ಐಎಲ್ ಮದ್ಯದ ಅಂಗಡಿ ಪರವಾನಗಿ ರದ್ದು ಪಡಿಸುವಂತೆ ಕಳೆದ ಮೂರು ತಿಂಗಳುಗಳಿಂದ ಅವಿರತ ಹೋರಾಟ ಮಾಡುತ್ತ ಜಿಲ್ಲಾಧಿಕಾರಿಗಳು, ಅಬಕಾರಿ ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಮನವಿ ಮಾಡಲಾಗಿದೆ ಜೊತೆಗೆ ಗ್ರಾಮ ಪಂಚಾಯಿತಿಯಲ್ಲಿ ಒಮ್ಮತದಿಂದ ಠರಾವು ಪಾಸು ಮಾಡಲಾಗಿದೆ. ಆದರೂ ಗ್ರಾಮದ ಎಂಎಸ್‍ಐಎಲ್ ಬಂದಾಗಿಲ್ಲ. ಸರ್ಕಾರ ಹಾಗೂ ಅಬಕಾರಿ ಅಧಿಕಾರಿಗಳಿಗೆ ಗ್ರಾಮಸ್ಥರ ಹಿತಕ್ಕಿಂತ ಸಾರಾಯಿ ಮಾರಾಟಗಾರರ ಹಿತವೇ ಮುಖ್ಯವಾಗಿದೆ. ಅದಕ್ಕಾಗಿ ಸತ್ತರೂ ಇಲ್ಲಿಂದ ಕದಲುವುದಿಲ್ಲ ಅದಕ್ಕಾಗಿ ಜೀವ ಗಟ್ಟಿ ಮಾಡಿ ಧರಣಿ ಕುಳಿತಿದ್ದೇವೆ. ಗ್ರಾಮದ ಎಂ.ಎಸ್.ಐ.ಎಲ್ ಮುಚ್ಚುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿದರು.

- Advertisement -

ನಂತರ ಸ್ಥಳಕ್ಕಾಗಮಿಸಿದ ಸಿಂದಗಿ ಸಿಪಿಐ ಎಚ್ ಎಂ ಪಾಟೀಲ ಮಹಿಳೆಯರ ಮನವೊಲಿಸಿ ತಕ್ಷಣವೇ ಮದ್ಯದ ಅಂಗಡಿ ಬಂದ್ ಮಾಡಿಸಲಾಗುವುದು ಎಂದು ಹೇಳಿ ಸಿಬ್ಬಂದಿ ಕಳುಹಿಸಿ ಲಾಕ್ ಮಾಡಿಸಿದ ಬಳಿಕವೇ ಧರಣಿ ಹಿಂಪಡೆದರು.

ಶಾಸಕ ದೇವಾನಂದ ಚವ್ಹಾಣ ಬೆಂಬಲ:

ನಾಗಠಾಣ ಶಾಸಕ ಡಾ, ದೇವಾನಂದ ಚವ್ಹಾಣ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ವ್ಯಕ್ತ ಪಡಿಸಿ ಮಾತನಾಡಿ, ಸರಕಾರ ಮದ್ಯದಂಗಡಿಗಳಿಗೆ ಪರವಾನಿಗೆ ನೀಡಿ ಜನಸಾಮಾನ್ಯರ ಬಾಳಿಗೆ ಕೊಳ್ಳಿ ಇಡುತ್ತಿದೆ. ತಕ್ಷಣವೇ ಮದ್ಯದಂಗಡಿಯನ್ನು ಬಂದ್ ಮಾಡಬೇಕು. ಇಲ್ಲದಿದ್ದರೆ ಅಧಿವೇಶನದಲ್ಲಿ ಈ ಕುರಿತು ದ್ವನಿ ಎತ್ತುವೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಬೆಂಬಲ ವ್ಯಕ್ತ ಪಡಿಸಿ ಮಾತನಾಡಿ, ಸಾರಾಯಿ ಮಾರಾಟದಿಂದ ಸರಕಾರ ನಡೆಸುತ್ತಿದ್ದಾರೆ. ಇವರಿಗೆ ಜನರ ಆರಾಮಾಗಿರುವುದು ಬೇಡವಾಗಿದೆ ನಶೆಯಲ್ಲಿದ್ದರೆ ಮಾತ್ರ ನಮ್ಮ ಬೇಳೆ ಬೇಯುತ್ತದೆ ಎನ್ನುವ ಭ್ರಮೆಯಲ್ಲಿ ಸರಕಾರ ಮುಳುಗಿದೆ. ಇದರಿಂದ ಬಡವರ ಸಂಸಾರಗಳು ಬೀದಿಗೆ ಬರುತ್ತದೆ ಎನ್ನುವುದು ಗೊತ್ತಿಲ್ಲದೇ ಪರವಾನಿಗೆ ನೀಡುತ್ತಿವೆ ಮಹಿಳೆಯರು ಎಚ್ಚೆತ್ತುಕೊಂಡು ಸರಕಾರಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಲೇ ಬೇಕು ಎಂದು ಮನವಿ ಮಾಡಿಕೊಂಡರು.

- Advertisement -

ಪ್ರತಿಭಟನೆಯಲ್ಲಿ ಮುಳಸಾವಳಗಿ ಗ್ರಾಮದ ಹಿರಿಯರಾದ ಯಮನವ್ವ ತಳವಾರ, ಶಾರದಾ ಸುಣಗಾರ, ಮಹಾದೇವಿ ತಳವಾರ, ಶಾರದಾ ಬಾಗೇವಾಡಿ, ಚನ್ನಮ್ಮ ಬೂದಿಹಾಳ, ಗೀತಾ ಶಿವಣಗಿ, ಕಮಲಾಬಾಯಿ ತಳವಾರ, ಜಯಶ್ರೀ ಸಿಂದಗಿ, ಶೋಭಾ ತಳವಾರ, ಮರಲಿಂಗವ್ವ ಮಾದರ, ಪಾರ್ವತಿ ಹಿಟ್ನಳ್ಳಿ, ಸಾಬವ್ವ ಗೊಬ್ಬೂರ, ನೀಲಮ್ಮ ತಳವಾರ, ಶೋಭಾ ತಳವಾರ, ಪಾರ್ವತಿ ಹಿಟ್ನಳ್ಳಿ, ಕಮಲಾಬಾಯಿ ದ್ಯಾಬೇರಿ, ಶಾರದಾ ಮಾದರ, ಬಾಳವ್ವ ನಾಗಠಾಣ, ದಾನಮ್ಮ ಗುಡ್ನಳ್ಳಿ, ಭೌರಮ್ಮ ನಾಯ್ಕೋಡಿ, ಲಕ್ಷ್ಮೀಬಾಯಿ ದ್ಯಾಬೇರಿ, ಮಲ್ಲಮ್ಮ ತಳವಾರ, ನಾಗಮ್ಮ ನಾಟೀಕಾರ ಸೇರಿದಂತೆ ಹಲವು ಮಹಿಳೆಯರು ಇದ್ದರು.

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group