ಕಲಬುರ್ಗಿ: ಕಾಳಸಂತೆಯಲ್ಲಿ ರೆಮಿಡಿಸಿವಿಯರ್ ಇಂಜೇಕ್ಷನ್‌ಗಳನ್ನ ಮಾರಾಟ ಮಾಡ್ತಿದ್ದ ಖದೀಮರನ್ನ ರೌಡಿ ನಿಗ್ರಹ ದಳ ಪೊಲೀಸರು ಬಂಧಿಸಿದ್ದಾರೆ.. ಭೀಮಾಶಂಕರ್ ಆರಬೋಳ (27), ಲಕ್ಷ್ಮೀಕಾಂತ್ ಮುಲಗೆ (20), ಜಿಲಾನಿಖಾನ್ (35) ಸೇರಿದಂತೆ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಭೀಮಾಶಂಕರ್ ಅಥರ್ವ ಚೆಸ್ಟ್ ಕ್ಲಿನಿಕ್‌ನಲ್ಲಿ ಎಕ್ಸರೇ ಟೆಕ್ನಿಷಿಯನ್ ಆಗಿ ಕೆಲಸ ಮಾಡ್ತಿದ್ದ, ಲಕ್ಷ್ಮೀಕಾಂತ್ ಸಿದ್ದಗಂಗಾ ಮೆಡಿಕಲ್‌ನಲ್ಲಿ ಕೆಲಸ ಮಾಡ್ತಿದ್ದ , ಜಿಲಾನಿಖಾನ್ ಸ್ಟಾಫ್ ನರ್ಸ್ ಕೆಲ್ಸಾ ಮಾಡ್ತಿದ್ದ, . ಇವರೆಲ್ಲ ನಗರದ ವಿವಿಧ ಮೆಡಿಕಲ್ ಮತ್ತು ಆಸ್ಪತ್ರೆಯಲ್ಲಿ ಕೆಲ್ಸಾ ಮಾಡ್ತಾ ಇದ್ರು.
ಬಂಧಿತ ಆರೋಪಿಗಳಿಂದ 14 ರೆಮಿಡಿಸಿವಿಯರ್ ಇಂಜೇಕ್ಷನ್‌ಗಳ ಮತ್ತು 3 ಮೊಬೈಲ್ ವಶ ಪಡಿಸಿಕೊಂಡಿದ್ದಾರೆ. ಇವರು ಬೆಂಗಳೂರಿನಲ್ಲಿ ಪರಿಚಯಸ್ಥರಿಂದ ರೆಮಿಡಿಸಿವಿಯರ್ ಇಂಜೇಕ್ಷನ್ ಖರೀಧಿ ಮಾಡುತ್ತಿದ್ದರು.ಬೆಂಗಳೂರಿನಲ್ಲಿ ಖರೀಧಿಸಿ ಕಲಬುರಗಿ ಜಿಲ್ಲೆಯಲ್ಲಿ ಒಂದು ಇಂಜೇಕ್ಷನ್ 25 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರ ಎಸಿಪಿ ಅನ್ಷು ಕುಮಾರ್ ನೇತೃತ್ವದಲ್ಲಿ ರೌಡಿನಿಗ್ರಹ ದಳ ಪಿಎಸ್‌ಐ ವಾಹಿದ್ ಕೋತ್ವಾಲ್, ಎ ಎಸ್ ಐ ಹುಸ್ಸೇನ್ ಬಾಷಾ, ಪೇದೆಗಳಾದ ರಾಜಕುಮಾರ್, ತೌಸಿಫ್, ರಾಜು ಪಾಟೀಲ್ ಶಿವಾನಂದ ಈರಣ್ಣ ಅವರ ನೆತೃತ್ವ ದಲ್ಲಿ ಕಾರ್ಯಾಚರಣೆ ಮಾಡಿ 14 ರಿಮಿಡಿಸಿವಿರ್ ಇಂಜೆಕ್ಷನ್ ಮತ್ತು 3 ಮೊಬೈಲ್ ವಶಕ್ಕೆ ಪಡಿಸಿಕೊಂಡು ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.
ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ