ದಿ. ೧೩ ರಂದು ಕಾಂಗ್ರೆಸ್ ಮೇಲೆ ಹನುಮಂತನ ಗದಾ ಪ್ರಹಾರ ಬೀಳಲಿದೆ – ಭಗವಂತ ಖೂಬಾ

ಬೀದರ – ಬರುವ ೧೩ ನೇ ತಾರೀಖಿನಂದು ಕಾಂಗ್ರೆಸ್ ಪಕ್ಷದ ಮೇಲೆ ಹನುಮಂತನ ಗದಾ ಪ್ರಹಾರ ಬೀಳಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್ ವಿಚಾರವನ್ನು ಬೀದರ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿ ತೀವ್ರ ವಾಗ್ದಾಳಿ ನಡೆಸಿದ ಅವರು, ಹನುಮಾನ್ ಗದೆಯ ಪ್ರಹಾರ ದಿ. ೧೩  ರಂದು ಕಾಂಗ್ರೆಸ್ ಮೇಲೆ ಬೀಳುತ್ತದೆ ನೋಡುತ್ತಿರಿ ಎಂದರು.

ಇದಲ್ಲದೆ ಕಾಂಗ್ರೆಸ್ ಗೆ ಟಾಂಗ್ ನೀಡಲು ನಾಳೆ ಐತಿಹಾಸಿಕ ಉತ್ತರಾಭಿಮುಖಿ ಹನುಮಾನ್ ದೇವಸ್ಥಾನ ದಲ್ಲಿ ಖೂಬಾ ಹನುಮಾನ್ ಚಾಲೀಸಾ ಓದುವ  ಮೂಲಕ ಪರೋಕ್ಷವಾಗಿ ಭಜರಂಗದಳ ಬ್ಯಾನ್ ಗೆ ಕೌಂಟರ್ ಕೊಡಲಿದ್ದಾರೆ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರ್ ದಲ್ಲಿರುವ ಐತಿಹಾಸಿಕ ಹನುಮಾನ್ ದೇವಸ್ಥಾನದಲ್ಲಿ ಕಾರ್ಯಕರ್ತರ ಜೊತೆ ಪವಿತ್ರ ಸ್ಥಳದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡುತ್ತೇನೆ ಎಂದರು.

ಭಜರಂಗದಳ ಹಾಗೂ ಭಜರಂಗಿಗೆ ಸಂಬಂಧವಿಲ್ಲ ಎಂಬ  ಕಾಂಗ್ರೆಸ್ ಹೇಳಿಕೆಗೆ ಖೂಬಾ ಅವರು ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಯಾವಾಗಲೂ ಬ್ಯಾಕ್ ಪುಟ್ ಗೆ ಹೋಗುತ್ತದೆ. ಸಿದ್ದರಾಮಯ್ಯ ಕೂಡಾ ಲಿಂಗಾಯತರ ಬಗ್ಗೆ ಮಾತನಾಡಿ ಕ್ಷಮೆ ಕೇಳಿದರು ಇದೇ ಥರ ಕಾಂಗ್ರೆಸ್ ಯಾವಾಗಲೂ ಬ್ಯಾಕ್ ಫುಟ್  ಅನುಸರಿಸುತ್ತೆ ಅದೊಂದು ರಿವಸ್೯ ಗೇರ್ ನಲ್ಲಿ ನಡೆಯುವ ಪಕ್ಷ ಎಂದು ಲೇವಡಿ ಮಾಡಿದರು.

ಭಾಲ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 4 ಲಕ್ಷ ರೂಪಾಯಿ ಮೌಲ್ಯದ ಸಾರಾಯಿ ಹಂಚಲು ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿರುದ್ಧ ಆರೋಪ ಮಾಡಿದರು.

ವರದಿ : ನಂದಕುಮಾರ ಕರಂಜೆ, ಬೀದರ