ಕಣ್ಣುಗಳ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು

Must Read

ಮೂಡಲಗಿ: ‘ಮನುಷ್ಯನಿಗೆ ಕಣ್ಣುಗಳ ಅತ್ಯಂತ ಪ್ರಮುಖವಾದ ಅಂಗಗಳಾಗಿದ್ದು, ಕಣ್ಣುಗಳ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು’ ಎಂದು ಶ್ರೀಧರಬೋಧ ಸ್ವಾಮೀಜಿ ಅವರು ಹೇಳಿದರು.

ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ಬೆಳಗಾವಿ ಅಂಧತ್ವ ನಿಯಂತ್ರಣ ಕಚೇರಿ ಮತ್ತು ಡಾ. ಸಚಿನ ಮೂಡಲಗಿ ಕಣ್ಣಿನ ಆಸ್ಪತ್ರೆಯ ಸಹಕಾರದೊಂದಿಗೆ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಣ್ಣಿನ ದೋಷಗಳನ್ನು ತೀವ್ರವಾಗಿ ನಿವಾರಿಸಿಕೊಳ್ಳುವುದು ಉತ್ತಮ ಎಂದರು.

ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾದವರು ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸುವ ಮೂಲಕ ಜನರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ನೇತ್ರ ತಜ್ಞ ಡಾ. ಸಚಿನ ಟಿ. ಅವರು ಮಾತನಾಡಿ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗಳಿಂದ ಕಣ್ಣಿನ ದೃಷ್ಟಿ ದೋಷವಾಗುತ್ತಿದ್ದು ಪ್ರತಿ ವರ್ಷದಲ್ಲಿ ಎರಡು ಬಾರಿಯಾದರೂ ಕಣ್ಣುಗಳ ತಪಾಸಣೆ ಮಾಡಿಕೊಳ್ಳಬೇಕು ಎಂದರು.

ಕಣ್ಣಿನ ಕಪ್ಪು ಗುಡ್ಡೆಗೆ ಒಮ್ಮೆ ಅಪಾಯವಾದರೆ ಅದನ್ನು ಸರಿಪಡಿಸುವುದು ಕಠಿಣವಾಗುತ್ತದೆ. ರೈತರು, ಕಾರ್ಖಾನೆ ಕಾರ್ಮಿಕರು, ವೆಲ್ಡಿಂಗ್ ಕೆಲಸ ಸೇರಿದಂತೆ ವಿವಿಧ ಕೆಲಸಗಳು ಕಣ್ಣುಗಳ ಮೇಲೆ ಹೆಚ್ಚು ಒತ್ತಡ ತರುವಂತವು. ಅದಕ್ಕಾಗಿ ಕಣ್ಣುಗಳ ಬಗ್ಗೆ ಕಾಳಜಿವಹಿಸುವುದು ಅವಶ್ಯವಿದೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ಉಚಿತ ಆರೋಗ್ಯ ತಪಾಸಣೆಗಳು ಲಯನ್ಸ ಕ್ಲಬ್‍ದ ಪ್ರಮುಖ ಸಮಾಜ ಕಾರ್ಯವಾಗಿದ್ದು, ಪ್ರಸಕ್ತ ವರ್ಷ ಎರಡು ಬಾರಿ ಕಣ್ಣು ತಪಾಸಣೆ ಶಿಬಿರಗಳನ್ನು ಏರ್ಪಡಿಸಿರುವೆವು ಎಂದರು.

ಡಾ. ಪ್ರಕಾಶ ನಿಡಗುಂದಿ, ಡಾ. ಪ್ರಶಾಂತ ಬಾಬನ್ನವರ, ಡಾ. ಪಾಲಬಾಂವಿ, ಡಾ. ಎಸ್.ಎಸ್. ಪಾಟೀಲ, ಡಾ. ಅನಿಲ ಪಾಟೀಲ, ಡಾ. ಮುಳವಾಡ, ವೆಂಕಟೇಶ ಸೋನವಾಲಕರ, ಎನ್.ಟಿ. ಪಿರೋಜಿ, ಸುರೇಶ ನಾವಿ, ಶ್ರೀಶೈಲ ಲೋಕನ್ನವರ, ಸಂಜಯ ಮೋಕಾಸಿ, ಮಹಾಂತೇಶ ಹೊಸೂರ, ಶಿವಾನಂದ ಗಾಡವಿ, ಶಿವಾನಂದ ಕಿತ್ತೂರ, ಸಂಗಮೇಶ ಕೌಜಲಗಿ, ಶಿವಬೋಧ ಯರಝರವಿ, ಕೃಷ್ಣಾ ಕೆಂಪಸತ್ತಿ, ಸಂತೋಷ ಪತ್ತಾರ ಇದ್ದರು.

ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಶಿಬಿರದಲ್ಲಿ ಜನರು ಭಾಗವಹಿಸಿದ್ದರು. ರೂ. 15 ಸಾವಿರಕ್ಕೂ ಮೌಲ್ಯದ ಕಣ್ಣಿನ ಡ್ರಾಪ್ಸ್ ಮತ್ತು ಸಂಬಂಧಿಸಿದ ಔಷಧಿಗಳನ್ನು ಉಚಿತವಾಗಿ ಶಿಬಿರದಲ್ಲಿ ಜನರಿಗೆ ನೀಡಿದರು.

ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಸ್ವಾಗತಿಸಿದರು, ಮಹಾವೀರ ಸಲ್ಲಾಗೋಳ, ಖಜಾಂಚಿ ಸುಪ್ರೀತ ಸೋನವಾಲಕರ ನಿರೂಪಿಸಿದರು, ಸಂಜಯ ಮೋಕಾಸಿ ವಂದಿಸಿದರು.

Latest News

ಮನುಕುಲದ ಉದ್ಧಾರಕ್ಕಾಗಿ ವಚನಗಳು ಇವೆ – ಶಾಸಕ ಮನಗೂಳಿ

ಸಿಂದಗಿ; ೧೨ ನೇ ಶತಮಾನದಲ್ಲಿ ಶರಣರು ಸಂತರು ಜನಜಾಗೃತಿ ಮಾಡುವ ಮೂಲಕ ಮನಕುಲವನ್ನು ಉದ್ದಾರ ಮಾಡಲು ವಚನಗಳನ್ನು ಬರೆದಿದ್ದಾರೆ ಅವುಗಳನ್ನು ಓದುವ ಪ್ರವೃತ್ತಿಯನ್ನು ಬೆಳೆಸುವ ಕಾರ್ಯಕ್ಕೆ...

More Articles Like This

error: Content is protected !!
Join WhatsApp Group