ಹುಕ್ಕೇರಿ ಕಸಾಪ ಸಮಿತಿಯ ಸದಸ್ಯರ ಪದಗ್ರಹಣ ಸಮಾರಂಭ

Must Read

ಹುಕ್ಕೇರಿ – ಕನ್ನಡ ಸಾಹಿತ್ಯ ಪರಿಷತ್ತು ಹುಕ್ಕೇರಿ ಘಟಕದ ಕಾಯ೯ಕಾರಿ ಸಮಿತಿಯ ಪದಗ್ರಹಣದ ಉದ್ಘಾಟನೆ ಸಮಾರಂಭ ದಿ. ೨೬ ರಂದು ಮಧ್ಯಾಹ್ನ ೩-೦೦ ಗಂಟೆಗೆ ಎಸ್ ಕೆ ಹೈಸ್ಕೂಲಿನಲ್ಲಿ ನಡೆಯಲಿದೆ.

ಸಮಾರಂಭದ ಸಾನ್ನಿಧ್ಯವನ್ನು ಪೂಜ್ಯ ಷ ಬ್ರ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಹಿರೇಮಠ,ಹುಕ್ಕೇರಿ ಇವರು ವಹಿಸಲಿದ್ದು ಸಮ್ಮುಖ ಮ ನಿ ಪ್ರ ಸ್ವ ಶ್ರೀ ಶಿವಾನಂದ ಮಹಾಸ್ವಾಮಿಗಳು ವಿರಕ್ತಮಠ,ಹುಕ್ಕೇರಿ ವಹಿಸಲಿದ್ದಾರೆ.

ಸಮಾರಂಭದ ಉದ್ಘಾಟನೆಯನ್ನು ಹುಕ್ಕೇರಿಯ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ನೆರವೇರಿಸಲಿದ್ದಾರೆ. ಹಿರಿಯ ಸಂಶೋಧಕ ಡಾ. ಶಿ ಬಾ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರಂಭಕ್ಕೆ ಅತಿಥಿಗಳಾಗಿ ಎಲ್ ವಿ ಪಾಟೀಲ ಮಾಜಿ ಅಧ್ಯಕ್ಷರು ಕ ಸಾ ಪ ಹುಕ್ಕೇರಿ, ಚನ್ನಬಸಪ್ಪ ರವಿಂದ್ರ ಶೆಟ್ಟಿ ಅಧ್ಯಕ್ಷರು ಸಿ ಬಿ ಎಸ್ ಸಿ ಶಾಲೆ ಹುಕ್ಕೇರಿ, ಬಿ ವ್ಹಿ ಶಿರೂರ ಹಿರಿಯ ಸಾಹಿತಿಗಳು ಹಿಡಕಲ ಡ್ಯಾಮ, ಎಂ ವೈ ಮೆಣಸಿನಕಾಯಿ ಗೌರವ ಕಾರ್ಯದರ್ಶಿ ಜಿಲ್ಲಾ ಘಟಕ ಬೆಳಗಾವಿ, ಡಾ ರಾಜಶೇಖರ ಇಚ್ಚಂಗಿ ಹಿರಿಯ ಸಾಹಿತಿಗಳು ಹುಕ್ಕೇರಿ, ಸಿ ಜೆ ಪಾಟೀಲ ಸಮಿತಿ ಸದ್ಯಸರು,ಕ ಸಾ ಪ ಬೆಳಗಾವಿ, ಬಾಬು ನಾಯಿಕ ಹಿರಿಯ ಪತ್ರಕರ್ತರು ಹುಕ್ಕೇರಿ ಆಗಮಿಸಲಿದ್ದಾರೆ.

ಸ್ವಾಗತ ಬಯಸುವವರು ನಾಡೋಜ ಡಾ. ಮಹೇಶ ಜೋಶಿ ರಾಜ್ಯಾಧ್ಯಕ್ಷರು ಕ ಸಾ ಪ ಬೆಂಗಳೂರು ಮತ್ತು ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಜಿಲ್ಲಾಧ್ಯಕ್ಷರು, ಕಸಾಪ ಬೆಳಗಾವಿ, ಪ್ರಕಾಶ ಬ ಅವಲಕ್ಕಿ ಅಧ್ಯಕ್ಷರು ಕಸಾಪ ತಾಲೂಕ ಘಟಕ,ಹುಕ್ಕೇರಿ ಹಾಗೂ ಸಮಿತಿ ಸವ೯ ಸದಸ್ಯರು ಕ ಸಾ ಪ ಘಟಕ ಹುಕ್ಕೇರಿ ಹಾಗೂ ಸವ೯ ಕ ಸಾ ಪ ಸದ್ಯಸರು ಹುಕ್ಕೇರಿ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group