ಕಲೆಗೆ ವಿಶ್ವಕರ್ಮ ಸಮುದಾಯದ ಮಹತ್ವದ ಕೊಡುಗೆ ಇದೆ

Must Read

ಸಿಂದಗಿ; ಇತಿಹಾಸ ಹಾಗೂ ಪುರಾಣ ಪುರುಷರಿಂದ ಗುರುತಿಸಲ್ಪಟ್ಟ ಈ ವಿಶ್ವಕರ್ಮ ಸಮುದಾಯವು ಈ ನಾಡಿನ ಹಾಗೂ ದೇಶದ ಸುಂದರ ಕಲೆಗಳ ನಿರ್ಮಾಣದ ಮೂಲಕ ಮಹತ್ವವಾದ ಕೊಡುಗೆ ಕೊಟ್ಟಿದ್ದಾರೆ ಎಂದು ಬಿಜೆಪಿಯ ಮುಖಂಡರಾದ ಶ್ರೀಶೈಲಗೌಡ ಬಿರಾದಾರ(ಮಾಗಣಗೇರಾ) ಹೇಳಿದರು.

ನಗರದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಆಗಮಿಸಿದ ಭಗವಾನ ಶ್ರೀ ವಿಶ್ವಕರ್ಮ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಭಗವಾನ ಶ್ರೀ ವಿಶ್ವಕರ್ಮರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, ಎಲ್ಲಿಯವರೆಗೆ ಕೌಶಲ್ಯ ಆಧಾರಿತ ವೃತ್ತಿಗಳು ಭೂಮಿಯ ಮೇಲೆ ಅಸ್ಥಿತ್ವದಲ್ಲಿರುತ್ತವೆಯೋ ಅಲ್ಲಿಯವರೆಗೆ ವಿಶ್ವಕರ್ಮರು ಅಜರಾಮರರಾಗಿರುತ್ತಾರೆ. ಇವರು ಅತ್ಯಂತ ಹೃದಯವಂತರು. ದೇವಾನುದೇವತೆಗಳ ಮೂರ್ತಿಗಳು, ಆಭರಣಗಳ ತಯಾರಿಕೆಯಲ್ಲಿ ತಮ್ಮ ಅಮೂಲ್ಯವಾದ ಕಲಾ ಕೌಶಲ್ಯದಿಂದ ಗುರುತಿಸಲ್ಪಡುವ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.

ವಿಶ್ವಕರ್ಮ ಸಮಾಜದ ಪರಮ ಪೂಜ್ಜರಾದ ರಾಮಚಂದ್ರ ಮಹಾಸ್ವಾಮಿಗಳ ಆರ್ಶಿವಾದ ಪಡೆದರು.
ಈ ಕಾರ್ಯಕ್ರಮದಲ್ಲಿ ಸಮಾಜದ ಅದ್ಯಕ್ಷ ಶಿವು ಬಡಿಗೇರ ಸೇರಿದಂತೆ ಗಾಯತ್ರಿ ಮಹಿಳಾ ಮಂಡಳಿಯ ಸಧ್ಯಸರು ಸೇರಿದಂತೆ. ಕುಲಬಾಂದವರು ಪಾಲ್ಗೊಂಡಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group