ಪ್ರತಿ ಘಟನೆಗೆ ಸಾಕ್ಷಿಯಾಗುತ್ತಿದ್ದ ಪತ್ರಕರ್ತ ಪ್ರಕಾಶ. :ನೆನಪು ಮೆಲಕು ಹಾಕಿದ ಸಾಹಿತಿ ಡಾ ಸರಜೂ ಕಾಟ್ಕರ್
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ವತಿಯಿಂದ ಶುಕ್ರವಾರ ದಿ.17 ರಂದು ದಿ. ಲೀಲಾ ತಾಯಿ ದೇಶಪಾಂಡೆ ಮತ್ತು ದಿ. ಪ್ರಕಾಶ ದೇಶಪಾಂಡೆ ರವರ ಸ್ಮರಣಾರ್ಥ ‘ದತ್ತಿನಿಧಿ ಕಾರ್ಯಕ್ರಮ’ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೊನೋಳ್ಳಿ ಮಾತನಾಡಿ ಹಿರಿಯರ ಆದರ್ಶಗಳು ಮತ್ತು ಅವರ ಪ್ರೇರಣೆ ದಾರಿದೀಪ. ಸಾರ್ವಜನಿಕ ಕ್ಷೇತ್ರಕ್ಕೆ ದಾನಿಗಳು ಆಧಾರವಾಗಿರುತ್ತಾರೆ ಅಲ್ಲದೆ ಅವರ ಇಚ್ಛೆಯ ಕೆಲವು ಕೆಲಸಗಳು ದತ್ತಿ ಕಾರ್ಯಕ್ರಮಗಳಿಂದ ಸಾಕಾರವಾಗುತ್ತ ಹೋಗುತ್ತವೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಸಾಹಿತಿ ಡಾ. ಸರಜೂ ಕಾಟ್ಕರ್ ರವರು ಮಾತನಾಡಿ ಪತ್ರಕರ್ತರು ಘಟನೆಗಳಿಗೆ ಸಾಕ್ಷಿಯಾಗುವದರ ಜೊತೆಗೆ ಪ್ರಸಂಗಗಳು ಇತರರಿಗೆ ಕಣ್ಕಟ್ಟು ವಂತಿರಬೇಕು ಎನ್ನುತ್ತಾ ಪತ್ರಕರ್ತರಾದ ಪ್ರಕಾಶ್ ದೇಶಪಾಂಡೆ ಪತ್ರಕರ್ತರಾಗಿ, ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ, ಸೇವಾದಳದ ಸೇವಕರಾಗಿ ತಾವು ಬೆಳೆದು ಇತರರಿಗೆ ಮಾದರಿಯಾಗಿ ಬದುಕು ಸಾಗಿಸಿದ್ದರು ಎಂದು ನೆನೆಯುತ್ತಾ ಅವರ ಮನೆತನ ಸಂಸ್ಕಾರ ಮತ್ತು ದಾನಕ್ಕೆ ಮಾದರಿಯಾಗಿತ್ತು. ಸರ್ವ ಜನಾಂಗದವರನ್ನು ಪ್ರೀತಿಸುತ್ತಿದ್ದ ದೇಶಪಾಂಡೆ ಮನೆತನ ಅನೇಕರನ್ನು ಬೆಳೆಸಿದ್ದು, ಹುಕ್ಕೇರಿಯ ಹೆಸರನ್ನು ಬೆಳೆಸುವ ತುಡಿತ ಸದಾ ಅವರಲ್ಲಿತ್ತು ಎಂದು ಅವರ ಒಡನಾಟದ ಕುರಿತು ನೆನೆದರು.
ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಆಶಾ ಕಡಪಟ್ಟಿ ಹೊಸದನ್ನು ಕಟ್ಟಬೇಕೆಂಬ ಉದ್ದೇಶ ಮತ್ತು ಹೊಸಮುಖಗಳನ್ನು ಬೆಳೆಸುವ ಕುರಿತ ಭಾವನೆ ಪ್ರಕಾಶ ದೇಶಪಾಂಡೆಯವರಲ್ಲಿತ್ತು ಎಂದು ಅವರನ್ನು ನೆನೆದರು. ದತ್ತಿ ದಾನಿಗಳ ನೆನಪಿನಲ್ಲಿ ಅವರ ಆಶಯದಂತೆ ಸ್ವರಚಿತ ಕಾವ್ಯ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸಾಹಿತಿಗಳಾದ ರಜನಿ ಜಿರಗ್ಯಾಳ,ಆಶಾ ಯಮಕನಮರಡಿ, ಶೈಲಜಾ ಕುಲಕರ್ಣಿ, ಇಂದಿರಾ ಮೋಟೆಬೆನ್ನೂರ, ವಿಜಯಲಕ್ಷ್ಮಿ ಪುಟ್ಟಿ, ಲಲಿತಾ ಕ್ಯಾಸನ್ನವರ, ಹಮೀದಾ ದೇಸಾಯಿ, ಮಂಗಲಾ ಮಠದ ರವರು ಜನಪದ,ಮಾತು,ಭಗವದ್ಗೀತೆ, ಭಾವಗೀತೆ ಮತ್ತು ಬಸವಗೀತೆ ಗಳನ್ನು ಸುಶ್ರಾವ್ಯವಾಗಿ ಹಾಡಿದರು. ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಸಂತೋಷ ದೇಶಪಾಂಡೆ, ಸಾಹಿತಿಗಳಾದ ಸುನಂದಾ ಎಮ್ಮಿ , ವಾಸಂತಿ ಮೇಳೆದ, ಸುಮಿತ್ರಾ ಮಲ್ಲಾಪುರ, ಶಾಂತಾ ಮಸೂತಿ, ಪ್ರೇಮಾ ತಾಸಿಲ್ದಾರ್, ಸುಮಾ ಕಿತ್ತೂರ, ಅನ್ನಪೂರ್ಣ ಹಿರೇಮಠ, ಎಂ ವೈ ಮೆಣಸಿನಕಾಯಿ ಶಿವಾನಂದ ತಲ್ಲೂರ, ಬಿ.ಜಿ.ನೇಸರಗಿ, ಆರ್. ಬಿ. ಕಟ್ಟಿ, ಅಶೋಕ ಅಂಕಲಗಿ ಗಿರೀಶ್ ಪಾಟೀಲ, ಸಲೀಮ ಕಶವಂತ, ಪ್ರವೀಣ ದೇಶಪಾಂಡೆ, ಬಸವರಾಜ ನಾಯಿಕ,ಅಜಿತ ಗೋರಕನಾಥ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು ಕಾರ್ಯಕ್ರಮದ ಆರಂಭದಲ್ಲಿ ರಂಜನಾ ಪಾಟೀಲ ಪ್ರಾರ್ಥಿಸಿದರು. ಹಮೀದಾ ಬೇಗಂ ದೇಸಾಯಿ ಸ್ವಾಗತಿಸಿದರು. ಇಂದಿರಾ ಮೋಟೆಬೆನ್ನೂರು ಅತಿಥಿಗಳನ್ನು ಪರಿಚಯಿಸಿ ಕೊನೆಯಲ್ಲಿ ವಂದಿಸಿದರು. ಕಾರ್ಯದರ್ಶಿ ರಾಜನಂದಾ ಘಾರ್ಗಿ ನಿರೂಪಿಸಿದರು.