ವೇಮನರ ಸಾಹಿತ್ಯ ಚಿರಕಾಲ – ಎಸ್.ಆರ್.ಪಾಟೀಲ

Must Read

ಸವದತ್ತಿ: ಮಹಾಯೋಗಿ ವೇಮನರ ಜಯಂತಿಯನ್ನು ಇಂದು ಸವದತ್ತಿಯ ತಹಶೀಲ್ದಾರ ಕಚೇರಿಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಎಸ್.ಆರ್.ಪಾಟೀಲ ಮಾತನಾಡಿ, “ಮಹಾಯೋಗಿ ವೇಮನರು ಸರಳತೆಯಿಂದ ಬದುಕಿ ಸಂತ ಜೀವನಕ್ಕೆ ಮಾದರಿ ಎನಿಸಿದ್ದರು. ವೇಮನರಿಂದ ಉತ್ಕೃಷ್ಟ ಸಾಹಿತ್ಯ ರಚನೆ ಯಾಯಿತು.ವೇಮನರ ಸಾಹಿತ್ಯ ವು ಜನರ ಮನಸ್ಸಿಗೆ ಪರಿಪೋಷಣೆ ನೀಡುವುದಲ್ಲದೆ ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿ ಬಂದಾಗ ಸಾಂತ್ವನ ಹೇಳುತ್ತದೆ. “ಎಂದು ವೇಮನರ ಬದುಕಿನ ಆದರ್ಶಗಳನ್ನು ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ಮಾನ್ಯ ತಹಶೀಲ್ದಾರರಾದ ಪ್ರಶಾಂತ.ಪಾಟೀಲ, ಗ್ರೇಡ್2 ವೃಂದದ ತಹಶಿಲ್ದಾರರಾದ ಎಮ್.ವಿ. ಗುಂಡಪ್ಪಗೋಳ, ಸಮಾಜದ ಹಿರಿಯರಾದ ಸಂಜು ಜಾಲಿಕೊಪ್ಪ, ಹೆಚ್.ಪಿ.ಗಣಿ, ಆರ್.ಎಫ್. ಮಾಡೊಳ್ಳಿ, ಎಸ್.ಹೆಚ್. ಹೊಸಮನಿ, ವೆಂಕಟೇಶ ವಂಟಗೋಡಿ, ಹೆಚ್.ಆರ್.ಪೆಟ್ಲೂರ ಹಾಗೂ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಹಾಜರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ವಕೀಲರಾದ ಸಂಜು ಜಾಲಿಕೊಪ್ಪ ಸ್ವಾಗತಿಸಿದರು ತಹಶೀಲ್ದಾರ್ ಪ್ರಶಾಂತ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ. ಉದಗಟ್ಟಿ, ನಿರೂಪಿಸಿದರು. ಬಿ. ಎನ್. ಹೊಸೂರ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group