ಸಿಂದಗಿ: ನನ್ನನ್ನು ಇಲ್ಲಿ ಕರೆಯಿಸಿ ಸುಂದರ ವಾತಾವರಣದಲ್ಲಿ ಸನ್ಮಾನಿಸಿದ್ದು ನನ್ನ ಸೌಭಾಗ್ಯ ಇಲ್ಲಿ ಜಾತಿ ಪಂಥಗಳ ಭೇದವಿಲ್ಲದೆ ಎಲ್ಲರೂ ಸ್ನೇಹದಿಂದ ಕೂಡಿಬಾಳುವ ಸಂದೇಶ ನನಗೆ ಸಂತಸ ತಂದಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪ್ರಜಾಪಿತಾ ಬ್ರಹ್ಮಾಕುಮಾರಿಯ ವಿಶ್ವವಿದ್ಯಾಲಯದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ತಂದೆ ದಿ.ಎಮ್.ಸಿ.ಮನಗೂಳಿಯವರು ಆಧುನಿಕ ಭಗಿರಥ ಎಂದು ಬದುಕಿನಂತೆ ಸಿಂದಗಿ ಹಾಗೂ ತಾಲೂಕಿನ ಎಲ್ಲ ಹಳ್ಳಿಗಳನ್ನು ನೀರಾವರಿ ಸೌಲಭ್ಯವನ್ನು ಕಲ್ಪಿಸುವಲ್ಲಿ ಜೀವನ ಪೂರ್ತಿ ಶ್ರಮಿಸಿದ್ದಾರೆ. ಹಾಗೆಯೇ ನಾ ಕೂಡಾ ನಮ್ಮ ತಂದೆಯ ಸನ್ಮಾರ್ಗದಲ್ಲಿ ನಡೆಯುತ್ತೇನೆ ಎಂದರು.
ಪಾವನ ಸಾನ್ನಿಧ್ಯವನ್ನು ಪ್ರಜಾಪಿತಾದ ವಿವಿಯ ಮುಖ್ಯ ಸಂಚಾಲಕ ಪವಿತ್ರಜಿ ಅಕ್ಕನವರು ವಹಿಸಿ ಲ, ನೂತನವಾಗಿ ಆಯ್ಕೆಯಾದ ಅಶೋಕ ಅಣ್ಣನವರು ಇನ್ನು ಅವರ ತಂದೆ ಹೇಳಿದ ಹಾಗೆ ಅನೇಕ ಅಭಿವೃಧ್ಧಿಕಾರ್ಯಗಳನ್ನು ಮಾಡಲೆಂದು ಶುಭ ಹಾರೈಸಿದರು.
ಬಳಿಕ ರಾಜಯೋಗಿ ಬಿ.ಜಿ.ಪಾಟೀಲ ಅಣ್ಣನವರು ನಿರೂಪಿಸಿ ವಂದಿಸಿದರು.
ಈ ಕಾಯಕ್ರಮದಲ್ಲಿ ಅನೇಕ ಪರಿವಾರದವರು ಪಾಲ್ಗೊಂಡಿದ್ದರು.