ಎಂದೂ ಮರೆಯಲಾಗದ ಮುತ್ತು ಅಂಬಿಗರ ಚೌಡಯ್ಯ – ಅಶೋಕ ಅಲ್ಲಾಪುರ

Must Read

ಸಿಂದಗಿ: ಜಾತಿಯಿಂದ ಸಮಾಜಗಳು ಹಾಳಾಗಿವೆ. ಅಂಬಿಗರ ಚೌಡಯ್ಯನವರು ಇದ್ದುದ್ದನ್ನು ಇದ್ದಂತೆ ಹೇಳುತ್ತ ಶೋಷಿತರನ್ನು, ದಲಿತರನ್ನು, ಬಡವರನ್ನು, ಶೂದ್ರರನ್ನು ಸಮಾಜದಲ್ಲಿ ಸಮನಾಗಿ ಕಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರು. ಅವರು ಎಂದೂ ಮರೆಯಲಾಗದ ಮುತ್ತು ಇದ್ದಂತೆ ಎಂದು ಲಿಂಬೆ ಅಭಿವೃದ್ಧಿ ಮಂಡಳಿ ಅದ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.

ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಆವರಣದಲ್ಲಿ ತಾಲೂಕಾ ಆಡಳಿತ ಹಮ್ಮಿಕೊಂಡ ನಿಜಶರಣ ಶ್ರೀ ಅಂಬಿಗರಚೌಡಯ್ಯನವರ ಜಯಂತ್ಯುತ್ಸವ ಸಮಾರಂಭದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ತಹಶೀಲ್ದಾರ ಸಂಜೀವಕುಮಾರ ದಾಸರ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರ ಮಹಾಕ್ರಾಂತಿಯಲ್ಲಿ ಹೊರಹೊಮ್ಮಿದ ತನ್ನ ದಿಟ್ಟ ನಡೆ, ನುಡಿಯಿಂದ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಶ್ರಮಿಸಿದ ಅಪರೂಪದ ಶರಣ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ನಿಷ್ಠುರ ವಚನಗಳ ಮೂಲಕ ಶಿವಶರಣರಿಂದಲೇ ವೀರಗಣಾಚಾರಿ ಎಂದು ಕರೆಯಿಸಿಕೊಂಡವರು ಚೌಡಯ್ಯನವರು ಒಬ್ಬ ಮನೋವಿಜ್ಞಾನಿ ಎಂದರು.

ಈ ಸಂದರ್ಭದಲ್ಲಿ ಗುರುದೇವಾಶ್ರಮದ ಶಾಂತಗಂಗಾಧರ ಸ್ವಾಮಿಗಳು, ಶಿರಸ್ತೇದಾರರಾದ ಸುರೇಶ್ ಮ್ಯಾಗೇರಿ, ಸಮಾಜದ ಅಧ್ಯಕ್ಷ ಶ್ರೀಶೈಲ ಬುಯ್ಯಾರ, ಈರಣ್ಣ ಕುರಿ, ಮಡಿವಾಳ ತಳವಾರ, ನಾಗೇಶ ತಳವಾರ, ಬೋಗಪ್ಪ ನರಗೋದಿ, ಮಡಿವಾಳ ನಾಯ್ಕೋಡಿ, ಕಂದಾಯ ಇಲಾಖೆ ಜಿ.ಎಸ್.ಸೋಮನಾಯಕ, ಮಲ್ಲು ಮಾಲಗಾರ, ಗುರುನಾಥ ರಡ್ಡಿ ಸೇರಿದಂತೆ ತಹಸೀಲ್ದಾರ ಕಚೇರಿಯ ಸಿಬ್ಭಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group