Homeಸುದ್ದಿಗಳುಸ್ಥಿತಪ್ರಜ್ಞೆ ಮತ್ತು ಆತ್ಮಜ್ಞಾನ ಹೊಂದುವುದೇ ಅಧ್ಯಾತ್ಮ ಕಾರ್ಯಕ್ರಮಗಳ ಮುಖ್ಯ ಉದ್ದೇಶ-ಶ್ರೀ ರೇವಣಸಿದ್ದೇಶ್ವರ ಮಹಾರಾಜರು

ಸ್ಥಿತಪ್ರಜ್ಞೆ ಮತ್ತು ಆತ್ಮಜ್ಞಾನ ಹೊಂದುವುದೇ ಅಧ್ಯಾತ್ಮ ಕಾರ್ಯಕ್ರಮಗಳ ಮುಖ್ಯ ಉದ್ದೇಶ-ಶ್ರೀ ರೇವಣಸಿದ್ದೇಶ್ವರ ಮಹಾರಾಜರು

ಮೂಡಲಗಿ: -ಸ್ಥಿತಪ್ರಜ್ಞೆ ಮತ್ತು ಆತ್ಮಜ್ಞಾನ ಹೊಂದುವುದೇ ಅಧ್ಯಾತ್ಮ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ ಎಂದು ಸದ್ಗುರು ಶ್ರೀ ರೇವಣಸಿದ್ದೇಶ್ವರ ಮಹಾರಾಜರು ಹೇಳಿದರು.

ತಾಲೂಕಿನ ಮುನ್ಯಾಳ ಗ್ರಾಮದಲ್ಲಿರುವ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ ಆಶ್ರಮದಲ್ಲಿ ಜರುಗಿದ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತ ಶ್ರೀಕ್ಷೇತ್ರ ಇಂಚಗೇರಿ ಮಠದ ಸದ್ಗುರುಗಳ ಹಾಗೂ ಕ್ರಾಂತಿಯೋಗಿ ಸದ್ಗುರು ಮಾಧವಾನಂದ ಪ್ರಭೂಜಿಯವರ ಸ್ಮರಣಾರ್ಥ ಅಧ್ಯಾತ್ಮ ಸಪ್ತಾಹ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ಮಾಯಾ ಪ್ರಪಂಚದ ಜಂಜಾಟದಿಂದ ಮುಕ್ತ ಆಗಬೇಕೆಂದು ಸಂತ ಮಹಾತ್ಮರ ಆಶಯ ,ಸಮಾಧಾನ,ಶಾಂತಿ ಅಧ್ಯಾತ್ಮ ಕಾರ್ಯಕ್ರಮದಲ್ಲಿ ಬಾಗಿಯಾಗುವುದರಿಂದ ಸಿಗುತ್ತದೆ ಹೊರತು ಅದು ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರ್ವೋತ್ತಮ ಜಾರಕಿಹೊಳಿ, ಅತಿಥಿಗಳಾಗಿ ಶಂಕರಪ್ಪ ಮಹಾರಾಜರು , ರಾಮಣ್ಣ ಮಹಾರಾಜರು,ವಸಂತ ಮಹಾರಾಜರು, ತಮ್ಮಣ್ಣಪ್ಪ ಮಹಾರಾಜರು,ಭೀಮಣ್ಣ ಮಹಾರಾಜರು ಸೇರಿದಂತೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಉಪಸ್ಥಿತರಿದ್ದರು.

ಮಂಗಳಾರತಿ, ಪುಷ್ಪವೃಷ್ಟಿ ಹಾಗೂ ಮಹಾ ಪ್ರಸಾದದೊಂದಿಗೆ ಸಪ್ತಾಹ ಮಂಗಲಗೊಂಡಿತ್ತು.

RELATED ARTICLES

Most Popular

error: Content is protected !!
Join WhatsApp Group