ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ

Must Read

ಶಾಂತಿಯಿಂದ ಹಬ್ಬ ಆಚರಿಸೋಣ – ಸಂಗಮೇಶ ಹೊಸಮನಿ

ಸಿಂದಗಿ – ಸರಕಾರದ ಆದೇಶದ ಪ್ರಕಾರ ನಾವು ನೀವು ನಿಯಮಗಳನ್ನು ಪಾಲಿಸೋಣ,ನಿಯಮ ಉಲ್ಲಂಘನೆ ಮಾಡದಂತೆ ನಾವೆಲ್ಲರೂ ಶಾಂತ ರೀತಿಯಿಂದ ಹಬ್ಬವನ್ನು ಆಚರಿಸೋಣ ಎಂದು ಸಿಂದಗಿ ಠಾಣಾ ಅಧಿಕಾರಿ ಸಂಗಮೇಶ ಹೊಸಮನಿ ಹೇಳಿದರು.

ಬಕ್ರೀದ್ ಹಬ್ಬದ ನಿಮಿತ್ತ ನಗರದ ಪೊಲೀಸ್ ಠಾಣಾ ಆವರಣದಲ್ಲಿ ಕರೆಯಲಾದ ಶಾಂತಿ ಸಭೆಯಲ್ಲಿ ಅವರು ಅವರು ಮಾತನಾಡಿದರು.

ಈದ್ಗಾ ಮೈದಾನದಲ್ಲಿ ನಮಾಜ್ ಮಾಡುವುದು ನಿಷೇಧಿಸಲಾಗಿದೆ ಪ್ರತಿವೊಂದು ಮಸೀದಿಗಳಲ್ಲಿ 50 ಜನರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಪಾರ್ಥನೆ ಮಾಡಬೇಕು ಮಕ್ಕಳನ್ನು ಪ್ರಾರ್ಥನೆಗೆ ಕರೆದುಕೊಂಡು ಹೋಗಬಾರದು ಎಂದು ಸಿ.ಪಿ.ಐ ಎಚ್.ಎಂ.ಪಟೇಲ್ ಹೇಳಿದರು.

ಇದೆ ಸಂದರ್ಭದಲ್ಲಿ ಮಹಮ್ಮದ್ ಪಟೇಲ ಬಿರಾದಾರ, ಬಶೀರ್ ಮರ್ತುರ ಸೇರಿದಂತೆ ಅನೇಕರು ಶಾಂತಿ ಸಭೆ ಕುರಿತು ಮಾತನಾಡಿದರು.ಪುರಸಭೆ ಉಪಾಧ್ಯಕ್ಷ ಹಾಶಿಮ್ ಆಳಂದ ಸೈಪನ್ ನಾಟಿಕಾರ, ಗಫಾರ್ ಇಂಡೀಕರ,ಅನುಸೂಯಾ ಪಾರಗೊಂಡ ಹಾಗೂ ಸಿಂದಗಿ ಹೆಚ್ಚುವರಿ ಪಿ.ಎಸ್.ಐ ಬಸವರಾಜ ಬಿಸನಕೊಪ್ಪ. ಪೊಲೀಸ್ ಸಿಬ್ಬಂದಿಗಳಾದ ರಮೇಶ ಹಡಪದ, ಭಗವಂತ ಮುಸಾವಳಗಿ, ಸುರೇಶ್ ಉಪಸ್ಥಿತರಿದ್ದರು.

ವರದಿ: ಪಂಡಿತ್ ಯಂಪೂರೆ, ಸಿಂದಗಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group