ಮೋದಿ ನಾಯಕತ್ವವನ್ನು ಅಕ್ಷರಶಃ ಸ್ವೀಕಾರ ಮಾಡಿದ ಜನತೆ – ಈರಣ್ಣ ಕಡಾಡಿ

Must Read

ಮೂಡಲಗಿ: ಸತತ 7 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿಯ ಸರ್ಕಾರ ದೇಶದಲ್ಲಿ ಮಾಡಿದಂತಹ ಅದ್ವೀತಿಯ ಸಾಧನೆ ಮತ್ತು ಅಭಿವೃದ್ಧಿ ಪರ ರಾಜಕಾರಣವನ್ನು ಜನ ಮೆಚ್ಚಿ ಪಂಚರಾಜ್ಯ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಆರ್ಶಿವಾದ ಮಾಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಸಂತಸ ವ್ಯಕ್ತಪಡಿಸಿದರು.

ಗುರುವಾರ ಮಾ.10 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ಕರೋನಾ ಕಾಲಘಟ್ಟದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಕಠಿಣವಾಗಿದ್ದರೂ ಕೂಡ ಮತ್ತು ವಿರೋಧಿಗಳ ಅಪಪ್ರಚಾರದ ಮಧ್ಯೆಯು ಜನರನ್ನು ಒಂದು ಸುರಕ್ಷಿತ ದಡಕ್ಕೆ ತರುವಲ್ಲಿ ನರೇಂದ್ರ ಮೋದಿ ಸಫಲರಾಗಿದ್ದಾರೆ. ಅವರ ಹೇಳಿಕೆಯಾಗಿರುವ “ಸಬ್ ಕಾ ಸಾಥ್, ಸಬ್ ಕಾ ವಿಕಾಸ, ಸಬ್ ಕಾ ವಿಶ್ವಾಸ, ಸಬ್ ಕಾ ಪ್ರಯಾಸ್” ಅನ್ನುವಂತಹ ಅವರ ಮಾತನ್ನು ಜನ ಅಕ್ಷರಶಃ ಸ್ವೀಕಾರ ಮಾಡಿದ್ದಾರೆ ಎಂದರು.

ದೇಶದ ಜನ ಕಾಂಗ್ರೇಸ್ ಹಾಗೂ ಸಮಾಜವಾದಿ ಪಾರ್ಟಿಗಳ ಕುಟುಂಬ ರಾಜಕಾರಣವನ್ನು ಧಿಕ್ಕರಿಸಿ, ಒಂದು ಗುಲಗಂಜಿಯಷ್ಟು ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತಹ ಮತ್ತು ಸ್ವಹಿತಾಸಕ್ತಿ ಇಲ್ಲದಂತಹ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವವನ್ನು ದೇಶದ ಜನ ಒಪ್ಪಿಕೊಂಡಿದ್ದಾರೆ, ಅದರ ಪರಿಣಾಮ ಇಷ್ಟು ದೊಡ್ಡ ಪ್ರಮಾಣದ ಗೆಲುವು ಸಾಧ್ಯವಾಗಿದೆ ಎಂದರು.

ಒಂದು ವಿಶಿಷ್ಟ ಪರಿಸ್ಥಿತಿ ಕಾರಣದಿಂದ ಪಂಜಾಬ್‍ನಲ್ಲಿ ನಾವು ಹಿಂದುಳಿದಿರಬಹುದು, ಮುಂದಿನ ದಿನಗಳಲ್ಲಿ ಪಂಜಾಬ್ ಗೆಲ್ಲುವಂತಹ ದಿಶೆಯಲ್ಲಿ ಬಿಜೆಪಿ ಮುನ್ನುಗುತ್ತದೆ ಮತ್ತು ಮುಂಬರುವ 2023ರ ರಾಜ್ಯ ವಿಧಾನಸಭೆ ಚುನಾವಣೆ 2024ರ ಲೋಕಸಭಾ ಚುನಾವಣೆ ಈ ಎರಡು ಚುನಾವಣೆಗಳಲ್ಲೂ ಕೂಡಾ ನಿಶ್ಚಿತವಾಗಿ ಮತ್ತೊಂದು ಸಲ ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವಂತಹ ಎಲ್ಲ ಲಕ್ಷಣಗಳೂ ಈ ಚುನಾವಣೆ ಮೂಲಕ ಕಂಡುಬರುತ್ತದೆ ಎಂದರು. ಈ ಗೆಲುವಿಗೆ ಕಾರಣಿಭೂತರಾದ ಮತದಾರ ಬಂಧುಗಳಿಗೆ ಹೃದಯಪೂರ್ವಕ ಅಭಿನಂಧನೆ ತಿಳಿಸುವುದಾಗಿ ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group