ಸಿಂದಗಿ: ಮನೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲುಗುರು ಎನ್ನುವಂತೆ ತಾಯಿಯಿಂದ ಉಸಿರು ಬಂದರೆ ತಂದೆಯಿಂದ ಹೆಸರು ಬರುತ್ತದೆ ಆದರೆ ಗುರುವಿನಿಂದ ಪಡೆದ ಶಿಕ್ಷಣ ಜ್ಞಾನದ ಉಸಿರು ಇರುವವರೆಗೆ ತಮ್ಮ ಹೆಸರು ಬರಲು ಶಿಕ್ಷಣದ ಅವಶ್ಯಕಯಿದೆ ಎಂದು ಬಂಥನಾಳ ಶ್ರೀಮಠದ ಶ್ರೀ ವೃಷಭಲಿಂಗೇಶ್ವರ ಮಹಾ ಶಿವಯೋಗಿಗಳು ಹೇಳಿದರು.
ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಜರುಗಿದ ಎನ್ ಕೆ ಚೌಧರಿ ಹಿರಿಯ ಮುಖ್ಯ ಗುರುಗಳು ವಯೋ ನಿವೃತ್ತಿ ಪ್ರಯುಕ್ತ ಎನ್ ಕೆ ಚೌಧರಿ ಸ್ನೇಹ ಬಳಗ ಹಮ್ಮಿಕೊಂಡ ಅಭಿನಂದನಾ ಸಮಾರಂಭದ ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಶ್ರೀ ಸಂಗನಬಸವ ಶಿವಯೋಗಿಗಳು ಬಂಥನಾಳ ಮಠದ ಪ್ರಮುಖ ಯತಿಗಳು ಆಗಿದ್ದರು ಸಮಾಜ ಸುಧಾರಕರು ಅವರು ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಅವರು ತಾಲೂಕಿನ ಬೂದಿಹಾಳ ಪಿ ಎಚ್ ಗ್ರಾಮದ ಸರಕಾರಿ ಶಾಲೆಗೆ ಗ್ರಾಮದ ಭಕ್ತ ಸಂಗನಬಸವ ಶಿವಯೋಗಿಗಳ ಜೋಳಗಿಗೆ ದಾನ ರೂಪವಾಗಿ ನೀಡಿರುವ ಜಾಗ ಮರಳಿ ಪಡೆಯುವದು ಸರಿಯಾದ ಮಾರ್ಗವಲ್ಲ ಆ ಜಾಗದಲ್ಲಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು. ನಿವೃತ ಹಿರಿಯ ಮುಖ್ಯಗುರು ಎನ್ ಕೆ ಚೌಧರಿ ಅವರು ಎರಡು ಲಕ್ಷ ರೂಪಾಯಿ ಕಾಣಿಕೆ ನೀಡಿರುವದು ಹೆಮ್ಮೆಯ ವಿಷಯವಾಗಿದೆ ಎಂದರು.
ಕನ್ನೊಳ್ಳಿ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಅಜ್ಞಾನದ ಅಂಧಕಾರ ತೊಲಗಿಸಲು ಜ್ಞಾನದ ಬೆಳಕನ್ನು ನೀಡಲು ಗುರುವಿನ ಮಾರ್ಗದರ್ಶನ ಅವರ ಜವಾಬ್ದಾರಿ ಸಮಾಜದ ಮೇಲೆ ಇದೆ .ಶಿಕ್ಷಕರು ವೃತ್ತಿಯಲ್ಲಿ ಎನ್ ಕೆ ಚೌಧರಿ ಅವರು ಯಶಸ್ಸು ಕಂಡೆದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧನೆಯ ಮೂಲಕ ಅರಿವು ತಿಳುವಳಿಕೆ ಜ್ಞಾನದ ಮೂಲಕ ಮಕ್ಕಳಿಗೆ ಆಸಕ್ತಿ ಮೂಡಿಸಬೇಕು .ಗ್ರಾಮದ ಸರಕಾರಿ ಶಾಲೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಪಾತ್ರ ಮೇಲು ಕಾಣಬೇಕು ಎಂದರು.
ವಿಶ್ರಾಂತ ಮುಖ್ಯಗುರು ಎನ್ ಕೆ ಚೌಧರಿ ಅವರು ಗ್ರಾಮದ ಶಾಲಾ ಅಭಿವೃದ್ಧಿಗಾಗಿ ಎರಡು ಲಕ್ಷ ರೂಪಾಯಿಗಳು ಶಾಲಾ ಮುಖ್ಯಗುರು ನಿರ್ಮಾಲ ಉಕ್ಕಲಿ ಹಾಗೂ ಶಿಕ್ಷಣ ಸಂಯೋಜಕ ಬಿ ಬಿ ಪಾಟೀಲರಿಗೆ ಶ್ರೀಗಳು ಹತ್ತಾಂತರ ಮಾಡಿದರು.
ಮುಖ್ಯಗುರು ಎಸ್ ಕೆ ಚೌಧರಿ ಸಿ ಆರ್ ಪಿ ಚಂದ್ರಶೇಖರ ಶಿರಕನಳ್ಳಿ ಹಾಗೂ ಎನ್ ಕೆ ಚೌಧರಿ ಮಾತನಾಡಿದರು.
ಗ್ರಾಮದ ಹಿರೇಮಠದ ಅಪ್ಪಯ್ಯ ಹಿರೇಮಠ, ಕ ರಾ ಪ್ರಾ ಶಾ ಶಿ ಸಂ ಅಧ್ಯಕ್ಷ ಆನಂದ ಭೂಸನೂರ.ಸ ನೌ ಸಂ ಗೌರವ ಅಧ್ಯಕ್ಷ ಎಸ್ ಆಯ್ ರಾಂಪೂರ .ಕಾಶಿರಾಯ ಚೌಧರಿ .ವಿಶ್ರಾಂತ ಉಪ ತಹಶೀಲ್ದಾರ ಸಿ ಎಸ್ ಪಾಟೀಲ. ಮಾಜಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ ಕೆ ಕೊಣ್ಣೂರು .ಎನ್ ಕೆ ಚೌಧರಿ ದಂಪತಿಗಳು ವೇದಿಕೆ ಮೇಲೆ ಇದ್ದರು.
ರಾಗ ರಂಜನಿ ಸಂಗೀತ ನಿರ್ದೇಶಕ ಡಾ.ಪ್ರಕಾಶ ಪ್ರಾರ್ಥನೆ ಗೀತ ಹೇಳಿದರು. ಮುಖ್ಯ ಶಿಕ್ಷಕ ಸಿದ್ದಲಿಂಗ ಚೌಧರಿ ಸ್ವಾಗತಿಸಿ ವಂದಿಸಿದರು. ಉಪನ್ಯಾಸಕ ಶಿವುಕುಮಾರ ಗುಗ್ಗರಿ ನಿರೂಪಿಸಿದರು.