ಮುನವಳ್ಳಿ: ಪಟ್ಟಣದ ಗಾಂಧಿನಗರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೇವಾಸಿಂಧು ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್‌ದ ಉದ್ಘಾಟನೆಯನ್ನು ಅಜ್ಜಪ್ಪ ಗಡಮಿ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಬಿ.ಬಾಗೇವಾಡಿ ನೆರವೇರಿಸಿ ಮಾತನಾಡಿ “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಯೋಜನೆಯ ವತಿಯಿಂದ ವಾತ್ಸಲ್ಯ ಕಾರ್ಯಕ್ರಮ,ಜ್ಞಾನತಾಣ ಕಾರ್ಯಕ್ರಮ.ಜನಸಂಘಟನೆ ಮತ್ತು ಸ್ವ ಸಹಾಯ ಸಂಘ ರಚನೆ.ಮಾನವ ಸಂಪನ್ಮೂಲ ಅಭಿವೃದ್ಧಿ. ಕೃಷಿ ಕಾರ್ಯಕ್ರಮಗಳು ಹೀಗೆ ವಿವಿಧ ಕಾರ್ಯಕ್ರಮಗಳು ಜನಹಿತವಾಗಿವೆ.ಈ ದಿಸೆಯಲ್ಲಿ ಕಂಪ್ಯೂಟರ್ ನೀಡುತ್ತಿರುವ ಮೂಲಕ ಸೇವಾ ಸಿಂಧು ಯೋಜನೆ ಜಾರಿಗೊಳಿಸುತ್ತಿರುವುದು ಶ್ಲಾಘನೀಯ ಕಾರ್ಯ”ಎಂದರು.
ಸವದತ್ತಿ ತಾಲೂಕಾ ಯೋಜನಾಧಿಕಾರಿ ಆಶಾ, ಅಧಿಕಾರಿಗಳಾದ ಆನಂದ, ಬೆನಕಟ್ಟಿ ವಲಯದ ಮೇಲ್ವಿಚಾರಕರಾದ ಸಂಬಾಜಿ, ಅನ್ನಪೂರ್ಣ ಕಮಲಾಪೂರ, ಪ್ರಕಾಶ ಕಮಲಾಪೂರ, ಸೇರಿದಂತೆ ಇತರರು ಇದ್ದರು.