spot_img
spot_img

ಸಮವಸ್ತ್ರದ ಉದ್ದೇಶ ಎಲ್ಲ ಮಕ್ಕಳೂ ಸಮಾನರು ಎನ್ನುವುದಾಗಿದೆ

Must Read

spot_img
- Advertisement -

ಸಮವಸ್ತ್ರ ದ ಬಗ್ಗೆ ಸಾಕಷ್ಟು ಚರ್ಚೆಗಳಾಗಿ, ಹೋರಾಟಗಳಾಗಿ ಕೊನೆಗೂ ಒಂದು ಉತ್ತಮವಾದ ತೀರ್ಪು ಬಂದಿದೆ.ಆದರೂ ಅಸಮಾಧಾನದ ಹೊಗೆಯಿದೆ.ಇಲ್ಲಿ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ದ ಉದ್ದೇಶ ಎಲ್ಲಾ ಮಕ್ಕಳೂ ಸಮಾನವೆನ್ನುವುದಾಗಿದೆ.

ಆದರೆ ನಾವೀಗ ದೇಶದೊಳಗಿರುವ ಪ್ರತಿಯೊಂದು ರಾಜ್ಯದೊಳಗಿನ ಎಲ್ಲಾ ಶಾಲೆಯ ಮಕ್ಕಳಿಗೂ ಒಂದೇ ರೀತಿಯ ಸಮವಸ್ತ್ರ ಅಳವಡಿಸಿಲ್ಲ. ಅವರವರದೇ ಆದ ರೀತಿ, ನೀತಿ ರಾಜಕೀಯದಲ್ಲಿ ಮಕ್ಕಳಿಗೆ ಸಮವಸ್ತ್ರ ಕೊಟ್ಟು ನಮ್ಮ ಶಾಲೆ ಬೇರೆ ನಿಮ್ಮದೇ ಬೇರೆ ಎನ್ನುವಂತೆ ನಡೆಯುತ್ತಿದೆ.

ಭಾರತದಂತಹ  ಪವಿತ್ರ ದೇಶದ ಹಿಂದಿನ ವಸ್ತ್ರ ಸಂಹಿತೆಗೂ ಈಗಿರುವ ಸಮವಸ್ತ್ರ ಕ್ಕೂ ವ್ಯತ್ಯಾಸವಿಷ್ಟೆ.ಅಂದು ಮಕ್ಕಳ ಮನಸ್ಸಿಗೆ ಹಾಗು ಮಾನ ಮರ್ಯಾದೆ ಗೆ ಕುಂದುಬರದಂತೆ ಏಕರೀತಿಯಲ್ಲಿ ಸರ್ಕಾರದ ಶಾಲೆಗಳಲ್ಲಿ ಸಮವಸ್ತ್ರ ವಿತ್ತು.

- Advertisement -

ಇಂದು ಖಾಸಗಿ ಶಾಲೆಗಳ ಆಧುನಿಕ ಶೈಲಿಯಲ್ಲಿ ಮಕ್ಕಳಿಗೂ ಮುಜುಗರ ತರಿಸುವಂತಹ ಕಡಿಮೆ ಬಟ್ಟೆ ಹೆಚ್ಚು ಬೆಲೆ, ಗಿಡ್ಡದಾದ ಸಮವಸ್ತ್ರ ವನ್ನು ಉದ್ದವಾಗಿರುವ ಮಕ್ಕಳಿಗೆ ಕೊಟ್ಟು ಪೋಷಕರಿಗೆ ಇಷ್ಟವಿಲ್ಲದಿದ್ದರೂ ಹಾಕಿಸುವ ಹಲವು ಶಾಲೆಗಳಿವೆ.

ಇದರಿಂದ ಯಾವ ಧರ್ಮ ರಕ್ಷಣೆಯಾಗುತ್ತಿದೆ? ಕೆಲವರಿಗೆ ಇದೊಂದು ಫ್ಯಾಷನ್ ಯುಗ ಆದರೆ ಮಕ್ಕಳು ಆಟದ ವಸ್ತುಗಳೆ? ಅವರಿಗೂ ಗೌರವ,ಘನತೆ ಒಳಗಿನಿಂದ ಬೆಳೆಸುವ ಶಿಕ್ಷಣವೇ ನೀಡದೆ ಹೊರಗಿನಿಂದ ಶೃಂಗಾರ ಮಾಡಿ ಬೇಡವಾದ ವಿಷಯಗಳನ್ನು ಒತ್ತಾಯಪೂರ್ವಕವಾಗಿ ತುಂಬುತ್ತಿರುವ ಇಂದಿನ ಪಠ್ಯ ಪುಸ್ತಕಗಳಲ್ಲಿ ನಮ್ಮ ಹಿಂದಿನ ಮಹಾತ್ಮರನ್ನು ಕಾಣಬಹುದೆ?

ಮಾಧ್ಯಮಗಳು ಒಳ್ಳೆಯ ವಿಚಾರಗಳಿಗೆ ಹೆಚ್ಚು ಸ್ಪಂದಿಸುವ ಕೆಲಸ ಮಾಡಿದರೆ ದೇಶದೊಳಗೆ ಸಾಕಷ್ಟು ಬದಲಾವಣೆ ಆಗಿ ಪ್ರಜಾಪ್ರಭುತ್ವದಲ್ಲಿ ಶಾಂತಿ ಕಾಣಬಹುದು. ನಮ್ಮಲ್ಲಿಯೇ ತಪ್ಪು ಇದ್ದರೂ ಬೇರೆಯವರ ತಪ್ಪನ್ನು ಎತ್ತಿ ಹಿಡಿಯುತ್ತಿದ್ದರೆ ಯಾವ ನ್ಯಾಯಾಲಯದ ತೀರ್ಪು ಜಾರಿಗೆ ಬರೋದಿಲ್ಲ.

- Advertisement -

ಒಟ್ಟಿನಲ್ಲಿ ಸಮವಸ್ತ್ರ ಮಕ್ಕಳು ಮಹಿಳೆಯ ಮಾನ ಮರ್ಯಾದೆ ಉಳಿಸುವಂತಿರಬೇಕಿದೆ. ಯಾವುದೇ ಧರ್ಮದವರಾಗಲಿ ಈ ವಿಚಾರದಲ್ಲಿ ಹೆಚ್ಚು ಗಮನಹರಿಸಿದರೆ ಶಿಕ್ಷಣಕ್ಕೆ ಬೆಲೆಯಿರುತ್ತದೆ. ಹಾಗೆ ಶಿಕ್ಷಣದಲ್ಲಿ ನಮ್ಮ ಮರ್ಯಾದೆ,ನಮ್ಮ ಜ್ಞಾನ, ನಮ್ಮ ದೇಶ,ನಮ್ಮ ನೆಲ ಜಲವನ್ನು ಅರ್ಥ ಮಾಡಿಸುವ ಒಂದೇ ವಿಷಯವನ್ನು ಎಲ್ಲಾ ಒಗ್ಗಟ್ಟಿನಿಂದ ಅರ್ಥ ಮಾಡಿಕೊಂಡರೆ ದೇಶದೊಳಗೆ ನಾವು ಇದ್ದದ್ದಕ್ಕೆ ಅದರ ಋಣ ಸಂದಾಯ ಮಾಡಿದಂತಾಗುತ್ತದೆ.

ಹೊರಗಿನಿಂದ ಬಂದವರಾಗಲಿ ದೇಶ ಬಿಟ್ಟು ಹೊರಗೆ ಹೋದವರಾಗಲಿ ಇದ್ದವರನ್ನು ಆಳೋದು ಅಧರ್ಮ. ಇವರಿಗೆ ಕೊಡುವ ಗೌರವ ನಮ್ಮವರಿಗೆ ಕೊಡದೆ ಇರೋದೆ ಇಂದಿನ ಈ ಪರಿಸ್ಥಿತಿ ಗೆ ಕಾರಣ. ಇದರ ಬಗ್ಗೆ ದ್ವನಿ ಎತ್ತಲು ನಮ್ಮವರೆ ಹಿಂದುಳಿದಿರೋದೆ ದೊಡ್ಡ ಸಾಧನೆಯೆ?

ಲೈಕ್ ಮಾಡಿ ಕುಳಿತರೆ ಯಾವವಿಷವೂ ಮುಂದೆ ಹೋಗಲ್ಲ ನಾವೂ ಇದನ್ನು ಎಲ್ಲರಿಗೂ ಹಂಚಿಕೊಂಡರೆ ನಮ್ಮನ್ನು ನಾವು ಅರ್ಥ ಮಾಡಿಕೊಂಡು ಬದುಕಬಹುದು.

ಯಾಕೆ ಮಕ್ಕಳಿಗೆ ಅನಾವಶ್ಯಕ ವಿಚಾರಗಳಿಂದ ದಾರಿ ತಪ್ಪಿಸುವ ಕೆಲಸವನ್ನು ಮಧ್ಯವರ್ತಿಗಳು ಮಾಡುತ್ತಿರುವುದು? ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಗುತ್ತಿರುವುದರ ಬಗ್ಗೆ ಗಮನಹರಿಸಿದರೆ ಮಧ್ಯವರ್ತಿಗಳು ಯಾರೆಂದು ತಿಳಿಯಬಹುದಷ್ಟೆ. ಇಲ್ಲಿ ಯಾರೂ ಪರಿಪೂರ್ಣರಲ್ಲ.ಶಾಶ್ವತವೂ ಅಲ್ಲ.ಅವರವರ ಕರ್ಮಕ್ಕೆ ತಕ್ಕಂತೆ ಪ್ರತಿಫಲವನ್ನೂ ಅವರೆ ಅನುಭವಿಸಬೇಕಷ್ಟೆ ಯಾರದ್ದೋ ದೇಶ, ಯಾರದ್ದೋ ರಾಜಕೀಯ,ಯಾರದ್ದೋ ಶಿಕ್ಷಣ,ಯಾರದ್ದೋ ಮಕ್ಕಳು ಹಾಗಾದರೆ ನಮ್ಮದೇನಿದೆ? ನಾವು ಸ್ವತಂತ್ರ ಭಾರತದ ಪ್ರಜೆಗಳಾಗಿ ದೇಶಕ್ಕೆ ಏನು ಕೊಟ್ಟಿದ್ದೇವೆ? ವಿದೇಶಕ್ಕೆ ಎಷ್ಟು ಬಿಟ್ಟಿದ್ದೇವೆ? ಧರ್ಮದ ಶಿಕ್ಷಣದಲ್ಲಿಯೇ ರಾಜಕೀಯವಿದೆ.

ಜ್ಞಾನ ದೇಗುಲಗಳು ಎಲ್ಲಿದೆ? ದೇವಸ್ಥಾನಗಳಲ್ಲಿ ದೇವರಿದ್ದಾರೆಯೆ? ದೇವರು ಸರ್ವಾಂತರ್ಯಾಮಿ. ಕೇವಲ ಹಣ,ಅಧಿಕಾರ ಪಡೆದಾಕ್ಷಣ ದೇವರಂತೆ ನಾಟಕ ಮಾಡಿದರೆ ಆಗೋದಿಲ್ಲ. ಅದನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವಿರಬೇಕು. ಸತ್ಯವೇ ದೇವರು, ಜ್ಞಾನವೇ ದೇವರು,  ಭೂಮಿ, ತಾಯಿ, ಭಾರತಾಂಬೆ, ಕನ್ನಡಮ್ಮ ಹೆತ್ತತಾಯಿ ಸ್ತ್ರೀ ಯರನ್ನು ಹೇಗೆ ನಡೆಸಿಕೊಳ್ಳಬೇಕು ಹೇಗೆ ಗೌರವಿಸಬೇಕು ಎನ್ನುವ ಸಾಮಾನ್ಯಜ್ಞಾನವಿಲ್ಲವಾದರೆ ಜೀವನವೇ ವ್ಯರ್ಥ ಅದಕ್ಕೆ ಇಂದು ನಾರಿಯರು ಮಾರಿಯರಾಗಿ ಜೀವ ತೆಗೆದುಕೊಂಡು ಹೋಗುತ್ತಿರುವುದಲ್ಲವೆ? ಕೊರೊನ ಮಾರಿ ಇನ್ನೂ ಹೋಗಿಲ್ಲ.

ಈ ರೀತಿಯಲ್ಲಿ ಸ್ತ್ರೀ ಯನ್ನು ನಡೆಸಿಕೊಂಡರೆ ಮನೆಯೊಳಗಿನಿಂದ ಹೊರಬಂದು ಇನ್ನಷ್ಟು ಜೀವ ಹೋಗುತ್ತದೆ. ಮೊದಲು ಭಾರತೀಯರು ಎಚ್ಚರವಾದರೆ ವಿದೇಶಿಗಳಿಗೂ ಜ್ಞಾನಬರುತ್ತದೆ. ಜ್ಞಾನಿಗಳು ಬುದ್ದಿವಂತರ ಹಿಂದೆ ಹೋಗಿ ಹಿಂದುಳಿದವರಾಗಿರೋದೆ ಸತ್ಯ. ಸತ್ಯ ಎಷ್ಟು ಕಠೋರವೋ ಅಷ್ಟೇ ದೇವರೂ ಕಠೋರವಾಗಿ ತಿರುಗಿ ಹೊಡೆಯುವಾಗ ಅಸುರರಷ್ಟೆ ಕಾಣೋದು. ನಮ್ಮೊಳಗೇ ಅಡಗಿರುವ ಇವೆರಡೂ ಶಕ್ತಿಯಲ್ಲಿ ನಾವು ಯಾರಿಗೆ ಸಹಕರಿಸಿದ್ದೇವೆಂದು ತಿಳಿದರೆ ನಮ್ಮ ಆತ್ಮರಕ್ಷಣೆ ಸಾಧ್ಯವಿದೆ. ರಾಜಕೀಯಕ್ಕೋ ರಾಜಯೋಗಕ್ಕೋ ಹಿಂದಿನ ಮಹಾತ್ಮರಲ್ಲಿ ರಾಜಕೀಯವಿರಲಿಲ್ಲ. ರಾಜಯೋಗವಿತ್ತು.

ಪ್ರಚಾರಕರು ಪ್ರಜೆಗಳು ಗಮನಿಸಿದಾಗಲೆ ಅವರ ಜ್ಞಾನ. ಇಲ್ಲವಾದರೆ ವಿದೇಶಿಗಳ ವಿಜ್ಞಾನ.ಯಾವುದು ಬೇಕು ನಮಗೆ ಸ್ವಾತಂತ್ರ್ಯ ವಿದೆ ಶಾಶ್ವತದ ಕಡೆಗೆ ನಡೆಯಲು ಕಷ್ಟಪಡಬೇಕು. ಇಲ್ಲವಾದರೆ ಕಷ್ಟಕೊಟ್ಟು ರಾಜಕೀಯ ನಡೆಸುವವರ ಹಿಂದೆ ನಿಂತು ಕಷ್ಟ ಅನುಭವಿಸಿಯೇ ತಿಳಿಯಬೇಕು.

ಹಿಂದೂ ಧರ್ಮ ಹಿಂದಿನ ಜ್ಞಾನದ ಶಿಕ್ಷಣದಿಂದ ಬೆಳೆದಿತ್ತು. ಇಂದು ಯಾವ ಧರ್ಮದ ಪ್ರಕಾರ ನಡೆದಿದೆ ಮುಂದೆ ಹೇಗೆ ನಡೆಯಬಹುದೆನ್ನುವ ಬಗ್ಗೆ ಭವಿಷ್ಯ ಈಗಲೇ ಹೇಳಬಹುದೆ? ನಮ್ಮ ನಡಿಗೆಯ ಮೇಲೇ ಎಲ್ಲಾ ನಿಂತಿದೆ. ಮಕ್ಕಳಿಗೆ ಆತ್ಮಶಕ್ತಿ ಬೆಳೆಸಲು ಆಂತರಿಕವಾಗಿ ಶುದ್ದಿಗೊಳಿಸುವ‌ಕೆಲಸ ಪೋಷಕರೆ ಮಾಡಬೇಕು. ಹೊರಗೆ ಯಾರೋ ಕಲಿಸಿ ಬೆಳೆಸಲು ಬಿಟ್ಟರೆ ಮಕ್ಕಳು ಹೊರಗೇ ಹೋಗುತ್ತಾರೆ. ಇದು ಎಲ್ಲಾ ವಿಷಯಕ್ಕೂ ಅನ್ವಯಿಸುತ್ತದೆ. ಎಲ್ಲದ್ದಕ್ಕೂ ನಮ್ಮ. ಸಹಕಾರವೇ ಕಾರಣ ನಾವೇ ಕಾರಣ. ನಾವು ಬದಲಾಗದೆ ಪರರನ್ನು ಬದಲಾಯಿಸಲಾಗದು.

ಎಲ್ಲಾ ಮನುಷ್ಯರೆ ಆದರೆ ಜ್ಞಾನದಲ್ಲಿ ವ್ಯತ್ಯಾಸವಿದೆ.ಇದೇ ಸಮಸ್ಯೆಗೆ ಕಾರಣ. ಸಮವಸ್ತ್ರದ ವಿಚಾರದಲ್ಲಿ ನಡೆಯುತ್ತಿರುವ ಹೋರಾಟದ ಮಧ್ಯೆ ಈ ವಿಚಾರವನ್ನು ಎಲ್ಲಾ ಪೋಷಕವರ್ಗದವರೂ ಗಮನಿಸಿದರೆ ನಮಗೇ ತಿಳಿಯದೆ ನಮ್ಮ ವಸ್ತ್ರ ಸಂಹಿತೆಯನ್ನು ನಾವೇ ಸರಿಯಾಗಿ ಅರ್ಥ ಮಾಡಿಕೊಳ್ಳದಿರೋದು ಸತ್ಯ. ದೊಡ್ಡ ದೊಡ್ಡ ಖಾಸಗಿ ಶಾಲೆಯಲ್ಲಿ ಗಂಡುಮಕ್ಕಳಿಗೆ ಉದ್ದನೆಯ ಪ್ಯಾಂಟ್ ಹೆಣ್ಣು ಮಕ್ಕಳಿಗೆ ಚಿಕ್ಕದಾಗಿರುವ ಡ್ರಸ್ ಹಾಗಾದರೆ ಎಲ್ಲಿದೆ ಸಮಾನತೆ? ಭಾರತದಂತಹ ದೇಶದಲ್ಲಿ ಸರಿಯಾದ ಊಟ ವಸತಿ, ವಸ್ತ್ರ ವಿಲ್ಲದೆ ಶಿಕ್ಷಣದಿಂದ ವಂಚಿತರಾದವರಿಗೆ ಉಳ್ಳವರು ನಮ್ಮಧರ್ಮದ ಶಿಕ್ಷಣ ನೀಡಿ ಬೆಳೆಸೋದು ಪ್ರಜಾಧರ್ಮ.ಇದು ಎಷ್ಟು ಮಂದಿ ಮಾಡುತ್ತಿದ್ದಾರೆ? ನಮ್ಮವರಿಗೇ ವಿದೇಶಿ ವಸ್ತ್ರ, ಶಿಕ್ಷಣ ನೀಡಿ ವಿದೇಶದಲ್ಲಿ ವಸತಿ ನೀಡಿದರೆ ಸಾಧಕರೆನ್ನುವುದು ರಾಜಕೀಯವಾಗಿದೆ.

ಐದು ಬೆರಳುಗಳು ಒಂದೇ ಸಮನಾಗಿರೋದಿಲ್ಲ.ಅದರಲ್ಲಿ ಒಂದು ಎದ್ದು ನಿಂತು ಹೊರಗೆ ತೋರಿಸಿದರೂ ಉಳಿದವು ನಮ್ಮ ಕಡೆನೇ ಇರುತ್ತದೆ. ನಾಲ್ಕು ಬೆರಳೂ ಸತ್ಯದಲ್ಲಿದ್ದರೆ ಒಂದನ್ನು ಎಳೆದು ಒಳಗೆ ಸೇರಿಸಬಹುದು.

ಅದನ್ನು ಮಾಡದೆ ಒಂದಕ್ಕೆ ಸ್ವತಂತ್ರ ಕೊಟ್ಟು ನನಗೇನೂ ತೊಂದರೆಯಿಲ್ಲವೆಂದು ಮಲಗಿದ್ದರೆ ಕೊನೆಯಲ್ಲಿ ಅದೇ ಒಂದು ಬೆರಳು ಒಳಬಂದು ಎಲ್ಲರನ್ನೂ ಎಬ್ಬಿಸಬಹುದು ಅಥವಾ ಮುಗಿಸಲೂಬಹುದು. ಕಾರಣ ಸ್ವಾತಂತ್ರ್ಯ ವನ್ನುಸ್ವೇಚ್ಛೆಯಾಗಿ ಬಳಸಲು ಬಿಟ್ಟವರದ್ದೇ ತಪ್ಪು. ಒಟ್ಟಿನಲ್ಲಿ ನಮ್ಮ ಕೈ ಮುಖ,ಮೂಗು,ಬಾಯಿ ಸ್ವಚ್ಚವಾಗಿದ್ದರೂ ಅದನ್ನು ಸರಿಯಾಗಿ ಬೇರೆಯವರಿಗೆ ತಿಳಿಸದೆ ಸುಮ್ಮನೆ ಇದ್ದು ಇಂದು ನಾವೇ ಮುಖ, ಬಾಯಿ, ಮೂಗುಮುಚ್ಚಿಕೊಂಡು ಇರುವ ಮಾರಿಗೆ ಹೆದರಿಕೊಂಡು ಬದುಕಬೇಕಾಗಿರೋದು ನಮ್ಮ ಕರ್ಮ ಫಲ ಎಂದರೆ ತಪ್ಪಿಲ್ಲವಲ್ಲ. ಎಲ್ಲದ್ದಕ್ಕೂ ಕಾರಣದ ಜೊತೆಗೆ ಪರಿಹಾರವೂ ಇರುತ್ತದೆ. ಅದೂ ನಮ್ಮ ಹತ್ತಿರವೇ ಇದ್ದರೂ ಹೊರಗೆ ಹುಡುಕುತ್ತಿದ್ದರೆ ಸಿಗೋದೇ ಇಲ್ಲ. ಇದನ್ನು ಮನುಕುಲ ಪ್ರತಿಕ್ಷಣವೂ ಅರ್ಥ ಮಾಡಿಕೊಳ್ಳಲು ಉತ್ತಮ ಜ್ಞಾನದ ಅಗತ್ಯವಿದೆ.ವಿಜ್ಞಾನ ಹೊರಗಿದೆ ರಾಜಕೀಯವೂ ಹೊರಗಿದೆ ಜ್ಞಾನ ಒಳಗಿದೆ ರಾಜಯೋಗವೂ ಒಳಗಿದೆ. ರಾಜಯೋಗದಿಂದ ಆರೋಗ್ಯ ರಾಜಕೀಯದಿಂದ ರೋಗ.

ಯಾವುದು ಬೇಕು ಇದನ್ನೂ ಸರ್ಕಾರವೆ ಮಾಡಬೇಕೆ? ಆಗುತ್ತದೆಯೆ? ನಮ್ಮ ಸಹಕಾರವಿದ್ದರೆ ಸಾಧ್ಯ.ಅಸಹಕಾರ ಅಜ್ಞಾನಕ್ಕೆ ಕೊಡಬೇಕಿತ್ತು.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕವಿರತ್ನ ಕಾಳಿದಾಸ ಪ್ರಶಸ್ತಿ ಪುರಸ್ಕೃತ ಯಲ್ಲಾಲಿಂಗ ವಾಳದಗೆ ಸತ್ಕಾರ

ಮೂಡಲಗಿ: ತಾಲೂಕಿನ ಶಿವಾಪುರ(ಹ) ಗ್ರಾಮದ ಯುವ ಮುಖಂಡ ಮತ್ತು ಸಮಾಜ ಸೇವಕ ಯಲ್ಲಾಲಿಂಗ ವಾಳದ ಗೆ ಕವಿರತ್ನ ಕಾಳಿದಾಸ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ರಾಮದುರ್ಗ ತಾಲೂಕಿನ ಸುರೇಬಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group