spot_img
spot_img

ಸಮಾಜದ ಏಳಿಗೆಯಲ್ಲಿ ಮಠಗಳ ಪಾತ್ರ ಬಹು ಮುಖ್ಯ – ರಮೇಶ ಜಿಗಜಿಣಗಿ

Must Read

- Advertisement -

ಸಿಂದಗಿ: ಹಿಂದಿನ ದಿನಮಾನದಲ್ಲಿ ಉತ್ತರ ಕರ್ನಾಟದಲ್ಲಿ ಮಠ-ಮಾನ್ಯಗಳಲ್ಲಿ ಕಂತಿ ಬಿಕ್ಷೆ ಮೂಲಕ ಊಟ ಮಾಡಿ ಶಿಕ್ಷಣ ಪಡೆಯುತ್ತಿದ್ದರು ಆದರೆ ಇಂದು ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ವಸತಿ ನಿಲಯಗಳ ಮೂಲಕ ಶಿಕ್ಷಣ ಸೌಲಭ್ಯ ಒದಗಿಸುತ್ತಿರುವುದು ಹರ್ಷ ತಂದಿದೆ. ಅಲ್ಲದೆ ಸಮಾಜದ ಏಳಿಗೆಯಲ್ಲಿ ಮಠಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಸಂಸದ ರಮೇಶ ಜಿಗಜೀಣಗಿ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಸಮಾಜ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಜಿಪಂ, ವಿಜಯಪುರ, ಸಮಾಜ ಕಲ್ಯಾಣ ಇಲಾಖೆ ರೂ. 4 ಕೋಟಿ ವೆಚ್ಚದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, 1973 ರಲ್ಲಿ ನಾನು ಕೂಡಾ ಮೃತ್ಯುಂಜಯ ಸ್ವಾಮಿಗಳ ಮಠದಲ್ಲಿ ಕಂತಿ ಬಿಕ್ಷೆ ಉಂಡು ಶಿಕ್ಷಣ ಸಿಕ್ಕಿದ್ದು ಜೀವನ ಸುಧಾರಣೆಗೆ ಪ್ರೇರಣೆಯಾಗಿದೆ ಎಂದು ಹೇಳಿದ ಅವರು, ನಾನು ಸಮಾಜ ಕಲ್ಯಾಣ ಸಚಿವನಿದ್ದಾಗ ಗಂಗಾ ಕಲ್ಯಾಣ ಯೋಜನೆಯ ಮೂಲಕ ನೀರಾವರಿ ಕಲ್ಪಿಸಿಕೊಟ್ಟಿದ್ದೇನೆ. ಅಲ್ಲದೆ ಕೇಂದ್ರ ಸಚಿವನಿದ್ದಾಗ ಈ ಜಿಲ್ಲೆಗೆ 65 ಸಾವಿರ ಕೋಟಿ ಅನುದಾನ ತಂದು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಈ ಕ್ಷೇತ್ರದಲ್ಲಿ ಜಲ ಜೀವನ ಮಶಿನ್ ಯೋಜನೆಯಡಿ 24 ಹಳ್ಳಿಗಳಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಇನ್ನೂ ಮುಂದಿನ ಬಾಗದಲ್ಲಿ ಕೆಲ ಹಳ್ಳಿಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿ, ನನ್ನ ಒಂದೂವರೆ ವರ್ಷದ ಅವಧಿಯಲ್ಲಿ 100 ರಿಂದ 150 ಕೋಟಿ ಅನುದಾನದ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯಬೇಕು ಎಂದು ಸರಕಾರ ಮಟ್ಟದಲ್ಲಿ ಬೆನ್ನು ಹತ್ತಿ ಅನುದಾನ ತಂದು ಪಟ್ಟಣದ 24 ಗಂಟೆಗಳ ಕಾಲ ನೀರಿನ ಸೌಲಭ್ಯ ಒದಗಿಸಲು ರೂ. 93 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಿದ್ದು ಅಲ್ಲದೆ ರೂ. 50 ಕೋಟಿ ವೆಚ್ಚದಲ್ಲಿ ಸಮಾಜ ಕಲ್ಯಾಣಾಧಿಕಾರಿಗಳ ಎಲ್ಲ ಕಾರ್ಯಾಲಯಗಳ ಕಟ್ಟಡ ನಿರ್ಮಾಣ, ರೂ 5 ಕೋಟಿ ವೆಚ್ಚದಲ್ಲಿ ಕನ್ನೋಳ್ಳಿಯಿಂದ ಬೂದಿಹಾಳದಿಂದ ಹಚ್ಯಾಳ ಗ್ರಾಮದವರೆಗೆ ರಸ್ತೆ ನಿರ್ಮಾಣ, ಮನಗೂಳಿ ಪಂಪನಿಂದ ಗಾಂಧಿ ಸರ್ಕಲ್ ವರೆಗೆ ಎರಡು ಬದಿಯಲ್ಲಿ ಫೂಟ್‍ಬಾತ್ ಗಾಂಧಿ ವೃತ್ತದಿಂದ ಟಿಪ್ಪು ಸುಲ್ತಾನ ಸರ್ಕಲ್‍ವರೆಗೆ ರಸ್ತೆ ಫೂಟ್‍ಪಾಥ್, ಡಾ.ಅಂಬೇಡ್ಕರ ಸರ್ಕಲ್‍ನಿಂದ ಬೈಪಾಸ್‍ವರೆಗೆ ಸಿಸಿ ರಸ್ತೆ ಮತ್ತು ಫೂಟ್‍ಪಾಥ್ ನಿರ್ಮಿಸಿ ಸಿಂದಗಿ ಪಟ್ಟಣವನ್ನು ಸೌಂದರ್ಯೀಕರಣ ಮಾಡಿ ಬೂಸನೂರ ಬಂದರೆ ಅಭಿವೃದ್ಧಿ ಆಗದು ಎನ್ನುವ ಅಪವಾದದಿಂದ ಮುಕ್ತನಾಗುತ್ತೇನೆ ಎಂದು ರಾಜಕೀಯ ಹಿಂದಿನ ನೆನಪು ಮೆಲಕು ಹಾಕಿದರು.

- Advertisement -

ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ರಾಮನಗೌಡ ಕನ್ನೋಳ್ಳಿ ಮಾತನಾಡಿದರು.

ತಹಶೀಲ್ದಾರ ಸಂಜೀವಕುಮಾರ ದಾಸರ, ತಾಪಂ ಇಓ ಕೆ.ಹೊಂಗಯ್ಯ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ, ಸಮಾಜ ಕಲ್ಯಾಣಾಧಿಕಾರಿ ಎನ್.ಎಸ್.ಬೂಸಗೊಂಡ, ಬಿ.ಎಚ್.ಬಿರಾದಾರ ವೇದಿಕೆ ಮೇಲಿದ್ದರು.

ಆರ್.ಎಸ್ ಬನ್ನೇಟ್ಟಿ ಸ್ವಾಗತಿಸಿ ನಿರೂಪಿದರು. ಶಿವಲಿಂಗ ಹಚಡದ ವಂದಿಸಿದರು.

- Advertisement -
- Advertisement -

Latest News

ಸಾವಿಲ್ಲದ ಶರಣರು -ಮಹಾ ದಾಸೋಹಿ ಎಲೆ ಮಲ್ಲಪ್ಪ ಶೆಟ್ಟರು

ಎಲೆ ಮಲ್ಲಪ್ಪ ಶೆಟ್ಟರ ಅವರ ಹಿರಿಯರು ಚಿಕ್ಕಮಗಳೂರಿನ ಹತ್ತಿರ ನಂದಿಹಳ್ಳಿ ಗ್ರಾಮದವರು. ರಾಜ ಮಹಾರಾಜರಿಗೆ ಸಮಾರಂಭ ಗಳಲ್ಲಿ ವೀಳ್ಯವನ್ನು ಸರಬರಾಜು ಮಾಡುವ ಕಾಯಕದವರು. ಶರಣ ಸಂಸ್ಕೃತಿಯ...
- Advertisement -

More Articles Like This

- Advertisement -
close
error: Content is protected !!
Join WhatsApp Group