ಸಮುದಾಯದ ಅಭಿವೃದ್ಧಿಯಲ್ಲಿ ರೆಡಿಯೋ ಕೇಂದ್ರಗಳ ಪಾತ್ರ ಬಹುಮುಖ್ಯ

Must Read

ಬೆಳಗಾವಿ: ಸರಕಾರದ ಯೋಜನೆಗಳನ್ನು ಗ್ರಾಮೀಣ ಭಾಗದ ಅತ್ಯಂತ ಹಿಂದುಳಿದ ಸಮುದಾಯಗಳನ್ನು ತಲುಪಿಸುವಲ್ಲಿ ಸಮುದಾಯ ಬಾನುಲಿ ಯಶಸ್ವಿಯಾಗುತ್ತಿದೆ ಎಂದು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ  ಡಾ ಸತೀಶ ಕುಮಾರ ಹೊಸಮನಿ ಅಭಿಪ್ರಾಯಪಟ್ಟರು.

 ಬೆಳಗಾವಿ ನಗರದಲ್ಲಿರುವ ಮಹಿಳಾ ಕಲ್ಯಾಣ ಸಂಸ್ಥೆಯ “ನಮ್ಮೂರ ಬಾನುಲಿ” ಸಮುದಾಯ ರೇಡಿಯೋ ಕೆಂದ್ರದ ವಿಕ್ಷಣೆ ಹಾಗೂ ಸಂದರ್ಶನ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡುತ್ತಾ, ಗ್ರಂಥಾಲಯ ಇಲಾಖೆ ಎಲ್ಲ ವರ್ಗದ ಜನರಲ್ಲಿ ಜ್ಞಾನವನ್ನು ಬಿತ್ತುವಲ್ಲಿ ವಿವಿದ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇಂದಿನ ಯುವ ಜನರು ಗ್ರಂಥಾಲಯಗಳಲ್ಲಿ ಹೆಚ್ಚಿನ ಸಮಯ ಕಳೆಯಬೇಕು ಗ್ರಂಥಾಲಯ ಡಿಜಿಟಲಿಕರಣಗೊಂಡ ಪುಸ್ತಕಗಳು, ನಿಯತಕಾಲಿಕೆಗಳು ಹಾಗೂ ಸಂಚಾರಿ ಗ್ರಂಥಾಲಯಗಳನ್ನು ಬಳಕೆ ಮಾಡಿಕೊಳ್ಳುವಂತೆ “ ನಮ್ಮೂರ ಬಾನುಲಿ” ಮೂಲಕ ವಿನಂತಿಸಿದರು.

ಈ ಸಂದರ್ಭದಲ್ಲಿ ಗ್ರಂಥಾಲಯ ಇಲಾಖೆಯ ಪ್ರಕಾಶ ಇಚಲಕರಂಜಿ, ಎ ಎ ಕಾಂಬಳೆ,ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೊಜಕರಾದ ಎಂ ಎಸ್ ಚೌಗಲಾ ಹಾಗೂ “ನಮ್ಮೂರ ಬಾನುಲಿ” ಕೇಂದ್ರದ ಚೇತನ ಕುಲಕರ್ಣಿ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group