ಕೇಂದ್ರದ ಯೋಜನೆಗಳನ್ನು ಗ್ರಾಮೀಣ ಭಾಗಕ್ಕೆ ತಲುಪಿಸಲು ಯುವ ಸಂಘನೆಗಳ ಪಾತ್ರ ಮುಖ್ಯ-ಸುಭಾಸ ಪಾಟೀಲ

Must Read

ಮೂಡಲಗಿ:-ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ನಮ್ಮ ಗ್ರಾಮೀಣ ಭಾಗದ ಜನರಿಗೆ ತಲುಪಿಸುವಲ್ಲಿ ಯುವ ಸಂಘಟನೆಗಳ ಪಾತ್ರ ಪ್ರಮುಖವಾಗಿದೆ ಎಂದು ಭಾರತಿ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸುಭಾಸ ಪಾಟೀಲ  ಹೇಳಿದರು.

ಅವರು ಮೂಡಲಗಿ ನಗರದ ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಭಾರತ ಸರ್ಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ ನನ್ನ ಭಾರತ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ಕರುನಾಡು ಸೈನಿಕ ತರಬೇತಿ ಕೇಂದ್ರ ಮೂಡಲಗಿ ಹಾಗೂ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ, ಹಳ್ಳೂರ ಇವರುಗಳ ಸಂಯುಕ್ತ ಆಶ್ರಯದಲ್ಲಿ  ಹಮ್ಮಿಕೊಂಡಿದ್ದ ಪ್ರಮುಖ ಯೋಜನೆಗಳ ಕುರಿತು ಕಾರ್ಯಗಾರ ಕಾರ್ಯಕ್ರಮವನ್ನು ಸಸಿಗೆ ನೀರು ಉಣಿಸಿ ಉದ್ಘಾಟಿಸಿ  ಮಾತನಾಡಿ,ನಮ್ಮ ದೇಶದ ಪ್ರಧಾನ ಮಂತ್ರಿಗಳು ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅವುಗಳನ್ನು ಯುವ ಕೇಂದ್ರಗಳ ಮೂಲಕ ಜನಜಾಗೃತಿ ಮೂಡಿಸಲು ಯುವಕರಿಗೆ ಕರೆ ನೀಡಿದರು. ಮತ್ತು ನಮ್ಮ ಭಾಗದಲ್ಲಿ ಕಲೆ ಸಂಸ್ಕೃತಿ,  ಯುವ ಸಂಘಟನೆ ಮತ್ತು ನಿರಂತರವಾಗಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಸಿದ್ದಣ್ಣ ದುರದುಂಡಿ ಕಾರ್ಯ ನಿಜವಾಗಲೂ ಶ್ಲಾಘನಿಯವಾಗಿದೆ ಎಂದರು.

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸಿದ್ದಣ್ಣ ದುರದುಂಡಿ ಮಾತನಾಡಿ, ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ ಯೋಜನೆಗೆ ಪ್ರತಿಯೊಬ್ಬರು ಕೈ ಜೋಡಿಸಿ ಸುಂದರ ಪರಿಸರ ನಿರ್ಮಾಣ ಮಾಡಿ ಅರೋಗ್ಯವಂತ ಜೀವನ ನಡೆಸಲು ಯುವ ಜನತೆಗೆ ಕರೆ ನೀಡಿದರು ಹಾಗೂ ನಮ್ಮ ಭಾಗದ ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ವಿವಿಧ ಸಂಘಟನೆಗಳನ್ನು ಬಲಪಡಿಸಲಾಗುತ್ತಿದೆ ಎಂದರು.

ಮೇರಾ ಯುವ ಭಾರತ ಕೇಂದ್ರದ ಸಿಬ್ಬಂದಿ ಮಲ್ಲಯ್ಯ ಕರಡಿ ಹಾಗೂ ಗ್ರಾಹಕರ ಸೇವಾ ಕೇಂದ್ರದ ಸುಭಾಸ್ ಗೊಡ್ಯಾಗೋಳ ಸರ್ಕಾರದ ಯೋಜನೆಗಳ ಕುರಿತು ಉಪನ್ಯಾಸ ಮಾಡಿ ಸಮಗ್ರ ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ಕರುನಾಡು ಸೈನಿಕ ತರಬೇತಿ ಕೇಂದ್ರದ ಅಧ್ಯಕ್ಷೆ ಸವಿತಾ ತುಕ್ಕಣ್ಣವರ ವಹಿಸಿದ್ದರು.
ಬಾಗಲಕೋಟೆ ಜಿಲ್ಲೆಯ ಡಿಡಿಪಿಐ ಅಜಿತ ಮನ್ನಿಕೇರಿ ಹಾಗೂ ಮಲೇಷಿಯಾದಲ್ಲಿ ಕಂಚಿನ ಪದಕ ಪಡೆದ ಕು. ಲಕ್ಷ್ಮಿ ರಡರಟ್ಟಿ ಅವರನ್ನು ಸನ್ಮಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅರಭಾವಿ ಮಂಡಲ ಅಧ್ಯಕ್ಷ ಮಹದೇವ ಶೆಕ್ಕಿ, ಮಾಜಿ ಸೈನಿಕ ಶಂಕರ ತುಕ್ಕಣ್ಣವರ, ಗೋಪಾಲ ಗಡ್ಡೆಕಾರ, ಕಸ್ತೂರಿ ಹೆಗ್ಗಾನಿ, ದುರ್ಗಪ್ಪ ಮ್ಯಾಗಾಡಿ, ಜ್ಯೋತಿ ಸಣ್ಣಕ್ಕಿ, ಸರಸ್ವತಿ ದುರದುಂಡಿ, ಆದರ್ಶ ಪೂಜೇರಿ ಮುತ್ತವ್ವ ಕೌಜಲಗಿ ಮುಂತಾದವರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group