spot_img
spot_img

ಕಾಯಕ ಶರಣರ ಜಯಂತಿ : ಶರಣರು ಸಮಾಜದಲ್ಲಿನ ಮೌಢ್ಯಗಳು ಹೋಗಲಾಡಿಸಿದರು

Must Read

spot_img
- Advertisement -

ಸಿಂದಗಿ: 12 ನೇ ಶತಮಾನದಲ್ಲಿ ಶರಣರು ಕಟ್ಟಿದ ಸಮಾಜದಲ್ಲಿ ಉಂಬಲ್ಲಿ, ಉಡುವಲ್ಲಿ, ಕೊಂಬಲ್ಲಿ, ಕೊಡುವಲ್ಲಿ ಕುಲವನರಸುವುದು ಹೋಗಿ ಜನಗಳಲ್ಲಿ ಶತ ಶತಮಾನಗಳಿಂದ ಬೆಳೆದು ಬಂದ ಮೌಡ್ಯತೆಗಳು ಮಾಯವಾದವು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು.

ತಹಶೀಲದಾರ ಕಾರ್ಯಾಲಯದಲ್ಲಿ ಕಾಯಕ ಶರಣರಾದ ಶ್ರೀ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಉರಲಿಂಗ ಪೆದ್ದಿ ಇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರು ನಮಗೆ ಅನ್ನಕ್ಕಿಂತ ಅರಿವು ಕೊಟ್ಟರು. ಆ ಅರಿವಿನಿಂದ ಪ್ರತಿಯೊಬ್ಬರೂ ಕಾಯಕದಲ್ಲಿ ಕಾಯಕದಲ್ಲಿ ತೊಡಗಿ ಬದುಕಿನಲ್ಲಿ ಹೊಸ ಬೆಳಕು ಕಂಡವರು ಶರಣರು ಎಂದರು.

ಪೂಜೆ ನೆರವೇರಿಸಿದ ತಹಶೀಲದಾರ ನಿಂಗಣ್ಣ ಬಿರಾದಾರ ಮಾತನಾಡಿ, ಶರಣರು ಕಟ್ಟಿದ ಸಮಾಜದಲ್ಲಿ ಎಲ್ಲ ಜಾತಿಯ, ವರ್ಗದ ಜನರಿಗೆ ಮುಕ್ತವಾದ ಪ್ರವೇಶವಿದ್ದಿತು. ಶರಣ ಧರ್ಮ ಕೇವಲ ಕೆಲವೇ ಜನರಿಗೆ ಮಾತ್ರ ಸೀಮಿತವಾಗಿ ಮಾಡದೆ ವ್ಯಾಪಕ ಸ್ವರೂಪವನ್ನು ಕೊಟ್ಟರು. ಸಮಾಜದಲ್ಲಿ ಕಂಡುಬರುವ ಮಡಿ, ಮೈಲಿಗೆ, ಮೇಲು, ಕೀಳು, ಉಚ್ಚ, ನೀಚ ಎಂಬ ತಾರತಮ್ಯವನ್ನು ನಿವಾರಣೆ ಮಾಡಿ ಸಮಾನತೆ ತಳಹದಿಮೇಲೆ ಆದರ್ಶ ಸಮಾಜ ರಚನೆಮಾಡುವಲ್ಲಿ ಕಾಯಕ ಶರಣರ ಕೊಡುಗೆ ಬಹಳಷ್ಟಿದೆ ಎಂದು ಹೇಳಿದರು.

- Advertisement -

ಈ ಸಂದರ್ಭದಲ್ಲಿ ಶಿರಸ್ತೇದಾರರಾದ ಸಿ ಬಿ ಬಾಬಾನಗರ, ಸುರೇಶ ಮ್ಯಾಗೇರಿ, ಶ್ರೀಮತಿ ಎಸ್ ಐ ಚವ್ಹಾಣ, ಕಂದಾಯ ನಿರೀಕ್ಷಕ ಐ ಎಮ್ ಮಕಾಂದಾರ, ಗ್ರಾಮಲೆಕ್ಕಾಧಿಕಾರಿ ರಾಮಪ್ಪ ರಾಂಪೂರ, ಗ್ರಾಮ ಸಹಾಯಕ ಸಂತೋಷ ವಾಲೀಕಾರ, ಸಮಾಜದ ಮುಖಂಡರಾದ ರಾಜಣ್ಣ ನಾರಾಯಣಕರ, ಸಾಯಬಣ್ಣ ಪುರದಾಳ, ಸಾಯಬಣ್ಣ ದೇವರಮನಿ, ಚಂದ್ರಕಾಂತ ಸಿಂಗೆ, ರಾಜು ಗುಬ್ಬೇವಾಡ, ರೇವಣಪ್ಪ ಮಗ್ರುಮಖಾನೆ, ರಾಜು ಭೋಸಗಿ, ಏಕನಾಥ ದಾಸ್ಯಾಳ, ಸಂತೋಷ ಕಾಂಬ್ಳೆ, ಶ್ರವಣ ಮಗ್ರುಮಖಾನೆ, ರವಿ ಕಟಕೆ ಸೇರಿದಂತೆ ಇತರರು ಭಾಗವಹಿಸಿದ್ದರು.

ಚಂದ್ರಶೇಖರ ದೇವೂರ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group