‘ಕಾಣದ ಕಡಲಿಗೆ’ ಕಿರುಚಿತ್ರದ ಚಿತ್ರೀಕರಣ ಮುಕ್ತಾಯ

Must Read

ಹುಬ್ಬಳ್ಳಿ: ನವ ಋತು ಕ್ರಿಯೇಶನ್ಸ್ ಅರ್ಪಿಸುವ ‘ಕಾಣದ ಕಡಲಿಗೆ’ ಕಿರುಚಿತ್ರದ ಚಿತ್ರೀಕರಣ ಹುಬ್ಬಳ್ಳಿ ಹಾಗೂ

ನುಗ್ಗಿಕೇರಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ವಾರಗಳ ಕಾಲ ನಡೆದು ಮುಕ್ತಾಯಗೊಂಡು ಇದೀಗ ಸಂಕಲನ ಕಾರ್ಯ ಆರಂಭಗೊಂಡಿದೆ. 

ಈ ಹಿಂದೆ ಊ.., ಮೈ ಸ್ಕೂಲ್ ಸೇರಿದಂತೆ ಸಾಕಷ್ಟು ಕಿರುಚಿತ್ರಗಳನ್ನು ನೀಡಿರುವ ನವೀನ ಶೆಟ್ಟರ ಅವರು    ಕವಿ, ಸಂಘಟಕ, ಚೇತನಾ ಪೌಂಡೇಶನ್ ಸಂಸ್ಥಾಪಕ  ಚಂದ್ರಶೇಖರ ಮಾಡಲಗೇರಿ ಅವರ ಕವಿತೆಗಳ  ಪ್ರೇಮದ ಎಳೆಯನ್ನಿಟ್ಟುಕೊಂಡು ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.   ಪ್ರೀತಿಸುವ ಪ್ರತಿಯೊಬ್ಬ ಹುಡುಗ-ಹುಡುಗಿಯರು  ನೋಡಲೇಬೇಕಾದ ಈ ಚಿತ್ರದಲ್ಲಿ  ನಾಯಕನಾಗಿ ಸೂರಜ್, ನಾಯಕಿಯಾಗಿ ಗಾಯಿತ್ರಿ ಅಭಿನಯಿಸಿದ್ದಾರೆ.

ತಾಂತ್ರಿಕ ವರ್ಗದಲ್ಲಿ ವರುಣ ಸಿಗ್ಗಿ ಅತ್ಯುತ್ತಮ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನ ಜೋಹೆಬ್ ಅಹ್ಮದ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ ಅವರದಿದೆ. ವರುಣ್ ಸಿಗ್ಲಿ ಕಥೆ ಹೆಣೆದಿದ್ದು, ಚಿತ್ರಕಥೆ ಜೊತೆಗೆ ನಿರ್ದೇಶನವನ್ನು   ನವೀನ ಶೆಟ್ಟರ ಮಾಡಿದ್ದಾರೆ. 

ಚೇತನ ಫೌಂಡೇಷನ್ ಸರ್ವ ಸಂಚಾಲಕರು ಹಾಗೂ ಅಭಿಮಾನಿಗಳು ಶುಭಕೋರಿದ್ದು ಈ ಕಿರುಚಿತ್ರ ಏಪ್ರೀಲ್ ತಿಂಗಳಲ್ಲಿ ಬಿಡುಗಡೆ ಮಾಡುವದಾಗಿ ಚಂದ್ರಶೇಖರ ತಿಳಿಸಿದ್ದಾರೆ.


ವರದಿ: ಡಾ.ಪ್ರಭು.ಗಂಜಿಹಾಳ

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group