Homeಸುದ್ದಿಗಳುಸ್ಟ್ರಾಂಗ್ ರೂಮ್‍ನಲ್ಲಿ ಭದ್ರವಾಗಿದೆ 59 ಅಭ್ಯರ್ಥಿಗಳ ಭವಿಷ್ಯ

ಸ್ಟ್ರಾಂಗ್ ರೂಮ್‍ನಲ್ಲಿ ಭದ್ರವಾಗಿದೆ 59 ಅಭ್ಯರ್ಥಿಗಳ ಭವಿಷ್ಯ

ಸಿಂದಗಿ: ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿ ಎರಡನೇ ಚುನಾವಣೆ ಎದುರಿಸುತ್ತಿರುವ ಆಲಮೇಲ ಪಟ್ಟಣ ಪಂಚಾಯತಿ ಒಟ್ಟು 19 ಜನ ಸದಸ್ಯರ ಆಯ್ಕೆಗೆ 59 ಜನರು ಸ್ಪರ್ಧಿಸಿದ್ದು ಡಿ. 27 ರಂದು 19 ಸದಸ್ಯರ ಆಯ್ಕೆಗೆ ಒಟ್ಟು 11572 ಜನ ಮತದಾರರು ಮತದಾನ ಮಾಡಿದ್ದಾರೆ. ಫಲಿತಾಂಶ ಪ್ರಕಟಗೊಳ್ಳುವವರೆಗೆ ಸಿಂದಗಿ ಆರ್ ಡಿ ಪಾಟೀಲ ಕಾಲೇಜಿನ ಸ್ಟ್ರಾಂಗ್‍ ರೂಮಿನಲ್ಲಿ ಅಭ್ಯರ್ಥಿಗಳ ಭವಿಷ್ಯ ಅಡಗಿ ಕುಳಿತಿದೆ ಯಾರಿಗೆ ವಿಜಯದ ಮಾಲೆ ಬೀಳುತ್ತದೆ ಎನ್ನುವುದೇ ಎಲ್ಲರಲ್ಲಿ ಕೂತುಹಲ ಮೂಡಿಸಿದೆ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಲಾ 17 ವಾರ್ಡುಗಳಿಗೆ ಮಾತ್ರ ಟಿಕೇಟ ನೀಡಿದ್ದು ಇನ್ನೆರಡು ಪಕ್ಷೇತರ ಅಭ್ಯರ್ಥಿಗಳು ಪ್ರಭಾವಿಗಳಾಗಿದ್ದಾರೆ. ಈ ಎರಡು ಪಕ್ಷಗಳ ನಡುವೆ ಬಿರುಸಿನ ಪ್ರಚಾರ ಕೈಕೊಂಡು ಚುನಾವಣೆ ಮುಗಿಸಿದೆ ಒಟ್ಟು 59 ಜನ ಅಭ್ಯರ್ಥಿಗಳಲ್ಲ್ಲಿ 19 ಜನರ ಭವಿಷ್ಯವನ್ನು 14116 ಜನರು ಮತದಾರರಲ್ಲಿ 11572 ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆದಿದ್ದು ಗುರುವಾರ ಡಿ.30 ರಂದು ಮತ ಎಣಿಕೆಯಲ್ಲಿ ವಿಜಯದ ಮಾಲೆ ಯಾರಿಗೆ ಎನ್ನುವುದು ಗೊತ್ತಾಗುತ್ತದೆ.

ಕಾಂಗ್ರೆಸ್ ನಾ? ಬಿಜೆಪಿನಾ?

ಹೌದು, ಕಳೆದ ಬಾರಿ ಬಿಜೆಪಿ ಪಕ್ಷದ ಹೆಚ್ಚು ಜನರು ಸದಸ್ಯರು ಆಯ್ಕೆಯಾಗಿದ್ದು 5 ವರ್ಷ ಪೂರ್ಣ ಅಧಿಕಾರ ನಡೆಸಿದರು ಆದರೆ ಈಗ ಬಿಜೆಪಿ ತೆಕ್ಕೆಯಲ್ಲಿ ಇದ್ದ ಪಟ್ಟಣ ಪಂಚಾಯತ ತನ್ನ ತೆಕ್ಕೆಗೆ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದಾರೆ, ಆದರೆ ಕಾಂಗ್ರೆಸ್‍ಗೆ ತಕ್ಕ ಉತ್ತರ ಕೊಡಲು ಬಿಜೆಪಿ ಕೂಡಾ ಪ್ರತಿತಂತ್ರ ರೂಪಿಸಿ ಬೆವರು ಹರಿಸಿದ್ದಾರೆ. ಎರಡೂ ಪಕ್ಷದ ನಾಯಕರ ತಂತ್ರಕ್ಕೆ ಮತದಾರರು ಯಾವ ರೀತಿ ಉತ್ತರ ನೀಡಿದ್ದಾರೆ ಎನ್ನುವುದು ಕಾದು ನೋಡಬೇಕು.

ಕಿಂಗ್‍ಮೇಕರ್ ಆಗತ್ತಾರಾ ಪಕ್ಷೇತರ ಅಭ್ಯರ್ಥಿಗಳು ?

ಕಳೆದ ಬಾರಿ 10 ಜನ ಬಿಜೆಪಿ ಸದಸ್ಯರು ಗೆದ್ದು ಓರ್ವ ಪಕ್ಷೇತರ ಸದಸ್ಯನನ್ನು ಸೆಳೆದುಕೊಂಡು ಅಧಿಕಾರ ನಡೆಸಿತ್ತು ಆದರೆ ಈಗ 3 ರಿಂದ 4 ಜನ ಪಕ್ಷೇತರ ಸದಸ್ಯರು ಆಯ್ಕೆಯಾಗಬಹುದು ಎಂದು ರಾಜಕೀಯ ಲೆಕ್ಕಾಚಾರ ಇದ್ದು, ಇದು ನಿಜವಾದರೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪಕ್ಷೇತರ ಅಭ್ಯರ್ಥಿಗಳಿಗೆ ಮಣೆ ಹಾಕುವುದು ತೀರ ಅವಶ್ಯಕ ಆಗುತ್ತದೆ ಆಗ ಪಕ್ಷೇತರ ಅಭ್ಯರ್ಥಿಗಳು ಕಿಂಗ್‍ಮೇಕರ್ ಆಗುವುದು ಖಚಿತ ಎನ್ನಲಾಗುತ್ತಿದೆ.

ಖಾತೆ ತೆರೆಯುತ್ತಾ ಜೆಡಿಎಸ್?

ಕಳೆದ ಬಾರಿ ಜೆಡಿಎಸ್ ಖಾತೆ ತೆರೆದಿರಲಿಲ್ಲ ಆದರೆ ಆಗ ಇನ್ನೂ ಮನಗೂಳಿ ಅವರು ಶಾಸಕರು ಆಗಿರಲಿಲ್ಲ, ಈಗ ಮನಗೂಳಿ ಅವರು ಶಾಸಕರಾಗಿ, ಸಚಿವರಾಗಿ ಆಲಮೇಲ ತಾಲೂಕು ಘೋಷಣೆ ಮಾಡಿದ್ದು, ಅಲ್ಲದೆ ಇಲ್ಲಿ ಕೋಟ್ಯಂತರ ಅನುದಾನ ತಂದಿದ್ದಾರೆ ಹೀಗಾಗಿ ಜನರು ಜೆಡಿಎಸ್ ಕೈ ಹಿಡಿಯುತ್ತಾರೆ ಎನ್ನುವುದು ಜೆಡಿಎಸ್ ಮುಖಂಡರ ಲೆಕ್ಕಾಚಾರದಲ್ಲಿ 8ರ ಸಂಖ್ಯೆಯಲ್ಲಿ 8 ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಇದರಲ್ಲಿ ಒಂದಾದರೂ ಖಾತೆ ತೆರೆಯಬಹುದಾ ಎಂಬ ಪ್ರಶ್ನೆಯಿದೆ.

ಒಟ್ಟಾರೆ 2023 ರ ವಿಧಾನಸಭಾ ಚುನಾವಣೆಯ ಲೆಕ್ಕಾಚಾರ ಇಟ್ಟುಕೊಂಡ ನಾಯಕರು ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿದು ಮುಂದಿನ ಚುನಾವಣೆಗೆ ಸುಲಭವಾಗಬಹುದು ಎನ್ನುವ ಲೆಕ್ಕಾಚಾರದಲ್ಲಿ 4 ರಿಂದ 5 ದಿನಗಳ ಕಾಲ ಪಟ್ಟಣದಲ್ಲಿ ಬೀಡು ಬಿಟ್ಟು ಅಭ್ಯರ್ಥಿಗಳ ಪರ ಪ್ರಚಾರ ಕೈಕೊಂಡಿದ್ದು ಮತದಾರರು ಯಾರಿಗೆ ಒಲವು ತೋರಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.


ವರದಿ: ಪಂಡಿತ ಯಂಪೂರ

RELATED ARTICLES

Most Popular

error: Content is protected !!
Join WhatsApp Group