ನಾಮಶಾಸ್ತ್ರದ ವ್ಯಾಪ್ತಿ ಅಧ್ಯಯನ ಕೂತೂಹಲಕಾರಕವಾಗಿದೆ – ಡಾ ಸರಜೂ ಕಾಟ್ಕರ

0
379

ಬೆಳಗಾವಿ – ಭಾಷಾ ಶಾಸ್ತ್ರ ಸಂಶೋಧನೆ ವ್ಯಾಪ್ತಿ ಬಲು ವಿಸ್ತಾರವಾದುದು ಅದರಲ್ಲಿ ನಾಮಶಾಸ್ತ್ರದ ವ್ಯಾಪ್ತಿ ಅಧ್ಯಯನ ಕೂತೂಹಲಕಾರಿಯಾಗಿದೆ ಎಂದು ಖ್ಯಾತ ಸಾಹಿತಿ ಡಾ ಸರಜೂ ಕಾಟ್ಕರ ಅವರು ಹೇಳಿದರು.

ಅವರು ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನವು ಶಿವಬಸವನಗರದ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಪ್ರೊ. ಬಿ ಎನ್ ಕಲ್ಲಣ್ಣವರ ಅವರು ರಚಿಸಿದ ‘ಕುಟುಂಬ ನಾಮಗಳು ಸ್ವರೂಪ ಮತ್ತು ವಿಶ್ಲೇಷಣೆ’ ಕೃತಿ ಬಿಡುಗಡೆಯ ಸಮಾರಂಭದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತಿದ್ದರು.

ಗದುಗಿನ ತೋಂಟದಾಯ೯ ಮಠದ ಪರಮಪೂಜ್ಯ ಜಗದ್ಗುರು ಡಾ ಸಿದ್ಧರಾಮ ಮಹಾಸ್ವಾಮಿಗಳು ಕೃತಿ ಬಿಡುಗಡೆ ಮಾಡಿ ಆಶೀವ೯ಚನ ನೀಡಿದರು ಕೃತಿ ಪರಿಚಯ ಮಾಡಿದ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ ಎಸ್ ಎಸ್ ಅಂಗಡಿ ಅವರು ಮಾತನಾಡಿ, ನಾಮಶಾಸ್ತ್ರ ನಮ್ಮ ಸಮಾಜ ನಾಡಿನ ಪರಂಪರೆಯ ಪ್ರತಿಕವಾದದ್ದು ಒಂದು ಜನಾಂಗದ ಸಾಂಸ್ಕೃತಿಕ ಅಧ್ಯಯನಕ್ಕೆ ಶ್ರೇಷ್ಟ ಆಕರಗಳಾಗಿವೆ ಎಂದು ನುಡಿದರು.

ಡಾ ರಾಮಕೃಷ್ಣ ಮರಾಠೆ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಕಲ್ಲಣ್ಣವರ ದಂಪತಿಗಳನ್ನು ಸನ್ಮಾನಿಸಲಾಯಿತು.

ಎ ಎ ಸನದಿ ಸವ೯ರನ್ನು ಸ್ವಾಗತಿಸಿದರು. ಎಂ ವೈ ಮೆಣಸಿನಕಾಯಿ ವಂದಿಸಿದರು ಬಿ ಎಂ ಬೂದಿಹಾಳ ನಿರೂಪಿಸಿದರು.

ಎ ಎಲ್ ಪಾಟೀಲ ಡಾ ಬಸವರಾಜ ಜಗಜಂಪಿ ,ಪಿ ಜಿ ಕೆಂಪಣ್ಣವರ, ಮೋಹನ ಗುಂಡ್ಲೂರ, ಡಾ ಎ ಬಿ ಘಾಟಗೆ, ಪ್ರಕಾಶ ಗಿರಿಮಲ್ಲನ್ನವರ ಶೀಗಿಹಳ್ಳಿ, ಎ ಕೆ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.