ಕನ್ನಡದ ಉಳಿವು ಯುವಕರ ಕೈಯಲ್ಲಿದೆ

Must Read

ಕನ್ನಡ ಸಾಹಿತ್ಯ ಪರಿಷತ್ತು, ಬೆಳಗಾವಿ ತಾಲೂಕಿನ ಘಟಕದಿಂದ ದಿನಾಂಕ 06.05 2023 ರಂದು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ 109 ನೇ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.

ಕನ್ನಡ ಅಸ್ಮಿತೆಯನ್ನು ಉಳಿಸುವಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ತನ್ನ  ಗುರಿ ಉದ್ದೇಶಗಳ ಮೂಲಕ ಮಹತ್ತರವಾದ ಪಾತ್ರವನ್ನು ವಹಿಸಿದೆ. ಪ್ರಾರಂಭದಿಂದ ಇಲ್ಲಿಯ ವರೆಗೆ ಸಾಹಿತ್ಯ ಪರಿಷತ್ ನಡೆದು ಬಂದ ದಾರಿಯನ್ನು ಅವಲೋಕಿಸಿದಾಗ, ಕನ್ನಡ ಉಳಿಸಿ ಬೆಳೆಸುವಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಂದಿನಿಂದ ಇಂದಿನವರೆಗಿನ ಅಧ್ಯಕ್ಷರು ಕಾಲದ ಅಗತ್ಯಕ್ಕೆ ಅನುಗುಣವಾಗಿ ಕನ್ನಡ ಕಟ್ಟುವ ಕೈಂಕರ್ಯವನ್ನು ಶೃದ್ಧೆಯಿಂದ ಮಾಡಿದ್ದರ ಫಲವಾಗಿ ಕನ್ನಡಿಗರ ಅಸ್ಮಿತೆಯಾಗಿ ಇಂದು ಸಾಹಿತ್ಯ ಪರಿಷತ್ ತನ್ನ 109 ನೇ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿರುವುದು ಕನ್ನಡಗರ ಹೆಮ್ಮೆ ಎಂದು  ನಿಮ೯ಲಾ ಬಟ್ಟಲ ಅವರು ಹೇಳಿದರು. 

ಎಸ್ ಜಿ ಸಿದ್ನಾಳ ಅವರು ಉದ್ಘಾಟಿಸಿದರು. ಇದೆ ಸಂದಭ೯ದಲ್ಲಿ ಈರಣ್ಣಾ ದೇಯಣ್ಣವರ ಗಿರೀಶ ಜಗಜಂಪಿ ಡಾ ಜಯಾನಂದ ಧನವಂತ ಅವರನ್ನು  ಸತ್ಕರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜಲತ್ಕುಮಾರ ಪುನಜಗೌಡ ಅವರು ಆಗಮಿಸಿದ್ದರು ಕನ್ನಡ ಭಾಷೆ   ಹಾಗೂ ಹಿಂದಿನ ಸಮ್ಮೇಳನಗಳು ಮಹನೀಯರನ್ನ ಸ್ಮರಿಸಿದರು. ಎಂ ವೈ ಮೆಣಸಿನಕಾಯಿ ಅವರು ಸದಸ್ಯರಾಗಿ ಅಂತರ್ಜಾಲದ ಕುರಿತು ಮಾಹಿತಿ ನೀಡಿದರು ನಾಡಗೀತೆಯನ್ನು ಸುಮಾ ಬೇವಿನಕೊಪ್ಪಮಠ ಪರುಶೆಟ್ಟಿ ಹಾಗೂ ಬಿ ಇ ಡಿ   ವಿದ್ಯಾಥಿಗಳು ಹಾಡಿದರು. ಸವ೯ರನ್ನು ಆಶಾ ಯಮಕನಮರಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಈರಣ್ಣಾ ದೇಯಣ್ಣವರ ಗಿರೀಶ ಜಗಜಂಪಿ ಮಾತನಾಡಿದರು. ಅಧ್ಯಕ್ಷತೆಯನ್ನು ಸುರೇಶ ಹಂಜಿ ಕ ಸಾ ಪ ತಾಲೂಕಿನ ಅಧ್ಯಕ್ಷರು ಮಾತನಾಡುತ್ತ ನೌಕರರ ಮಕ್ಕಳು ಸರಕಾರಿ ಶಾಲೆಯಲ್ಲಿ ಕಲಿಯಬೇಕು ಎಂದರು.   ಕೊನೆಯಲ್ಲಿ ರೂಪಾ ಅಕ್ಕಿ ವಂದಿಸಿದರು ಮತ್ತು ಕಾಯ೯ಕ್ರಮ ನಿರೂಪಿಸಿದರು ಸುರೇಶ ನಾವಲಗಿ, ಡಾ ಹೇಮಾ ಸೊನ್ನಳ್ಳಿ, ಅಕ್ಕ ಮಹಾದೇವಿ ತೆಗ್ಗಿ, ನಾಗಪ್ಪ ಕರವಿನಕೊಪ್ಪ, ಕಮತಿ ದೊಬಂಗಿ,   ಬನಶಂಕರಿ, ಸುನಿಲ್ ಸಾಣಿಕೊಪ್ಪ ಮತ್ತು ಡಾ. ಸಿದ್ದಣ್ಣ ವಾಲಿಶೆಟ್ಟಿ , ಸುನಿಲ್ ಪಾಣಿ ಸೊನಲ್ ಚಿನಿವಾಲ ಉಪನ್ಯಾಸಕರು ಮತ್ತು ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು  ಉಪಸ್ಥಿತರಿದ್ದರು.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group