spot_img
spot_img

ಸಿದ್ರಾಮಯ್ಯ ಮುಖ್ಯಮಂತ್ರಿಯಾಗಲಿಕ್ಕೆ ಕೈ ಗುರುತಿಗೆ ಮತ ನೀಡಿ

Must Read

- Advertisement -

ಮೂಡಲಗಿ: ಅರಭಾವಿ ಮತ ಕ್ಷೇತ್ರದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲವು ಸಾಧಿಸಲ್ಲಿವೆಂದರೆ ಮುಂದಿನ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಅರಭಾವಿ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರವಿಂದ ದಳವಾಯಿ ಹೇಳಿದರು.

ತಾಲೂಕಿನ ವಡೇರಟ್ಟಿ ಗ್ರಾಮದಲ್ಲಿ ಹಾಲುಮತ ಮತ್ತು ಇತರೆ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಅರಭಾವಿ ಕ್ಷೇತ್ರದಲ್ಲಿ ಹಾಲುಮತ, ಉಪ್ಪಾರ, ಮುಸ್ಲಿಂ ಸಮಾಜ ಸೇರಿದಂತೆ ಇತರೆ ಹಿಂದುಳಿದ ಸಮಾಜದ ಜನ ಅಧಿಕ ಸಂಖ್ಯೆಯಲ್ಲಿದರು ಅರಭಾವಿ ಮತ ಕ್ಷೇತ್ರದಲ್ಲಿ ಕಳೆದ ಐದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹಿಂದುಳಿದ ಸಮಾಜದ ಅಭ್ಯರ್ಥಿಗಳು ಆಯ್ಕೆಯಾಗದಿರುವುದು ವಿಪರ್ಯಾಸ, ಕಾಂಗ್ರೇಸ್ ಪಕ್ಷವು ಚುನಾವಣೆಯ ಪ್ರಣಾಳಿಕೆಯಲ್ಲಿನ ಆರು ಅಂಶಗಳನ್ನು ಅಧಿಕಾರಕ್ಕೆ ಬಂದ ದಿನವೆ ಜಾರಿಗೆ ತರುತ್ತದೆ, ಕಾರಣ ಹಿಂದುಳಿದ ಎಲ್ಲ ಸಮಾಜ ಬಾಂಧವರು ಕಾಂಗ್ರೆಸ್ ಗೆ ಮತ ನೀಡುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಮೇ.10 ರಂದು ನಡೆಯುವ ಚುನಾವಣೆಯಲ್ಲಿ  ಪಕ್ಷದ ಬಲಗೈ ಹಸ್ತದ ಚಿಹ್ನೆಗೆ ಮತ ನೀಡಿ ಆಶಿರ್ವದಿಸಬೇಕೆಂದರು.  

ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಧಾನ ಸೌಧದಲ್ಲಿ ಹಿಂದುಳಿದ ವರ್ಗದವರ ಬೇಡಿಕೆಗಳಿಗೆ ಎಂದೂ ಧ್ವನಿ ಎತ್ತಿಲ್ಲ ಹಾಗೂ ಹಿಂದುಳಿದ ವರ್ಗದವರ ಬೇಡಿಕೆಗಳಿಗೆ ಎಂದೂ ಸ್ಪಂದಿಸಿಲ್ಲ ಅವರು ತಮ್ಮ ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರ ಸಮಾವೇಶ ಮಾಡಲಿಕ್ಕೆ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

- Advertisement -

ಅರಭಾವಿ ಕ್ಷೇತ್ರದಲ್ಲಿ ಬದಲಾವಣೆಗಾಗಿ ಮತ್ತು ಸಿದ್ರಾರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿಕ್ಕೆ  ಹಾಗೂ ಅರಭಾವಿ ಕ್ಷೇತ್ರದಲ್ಲಿ ಅರವಿಂದ ದಳವಾಯಿ ತಮ್ಮ ಸೇವೆ ಮಾಡಲಿಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಆಶಿರ್ವದಿಸಬೇಕೆಂದರು. 

ವೇದಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅರವಿಂದ ದಳವಾಯಿ ಪತ್ನಿ ಸುರೇಖಾ ದಳವಾಯಿ ಅವರು ಸೆರಗೊಡ್ಡಿ ಮತಯಾಚಿಸಿದರು. 

ಮಾಜಿ ಸಂಸದ ಅಮರಸಿಂಹ ಪಾಟೀಲ, ಸುರೇಶ ಲಾತೂರ, ರವಿ ಮಾಳಗೇರ, ರಾಜದೀಪ ಕೌಜಲಗಿ, ಅನೀಲಕುಮಾರ ದಳವಾಯಿ ಮತ್ತಿತರರು ಮಾತನಾಡಿದರು.

- Advertisement -

ವೇದಿಕೆಯಲ್ಲಿ ಗುಂಡಪ್ಪ ಕಮತೆ, ವಿ ಪಿ ನಾಯ್ಕ ಎಸ್ ಆರ್ ಸೋನವಾಲ್ಕರ್,ಕೆಟಿ ಗಾಣಿಗೇರ ಸುರೇಶ್ ಮಗದುಮ್,ಪ್ರಕಾಶ ಅರಳಿ,ಮಕನಾಪುರದ ಗುರು ಸಿದ್ಧ ಪೀಠದ ಸೋಮೇಶ್ವರ ಶ್ರೀಗಳು, ಜೋಕಾನಟ್ಟಿಯ ಅಪ್ಪಾನಂದ ಶ್ರೀಗಳು, ಬಿಳಿಯಾನ ಸಿದ್ಧ ಶ್ರೀಗಳು, ಹಂದಿಗುಂದ ಶ್ರೀಮಂತ ಶ್ರೀಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

- Advertisement -
- Advertisement -

Latest News

ವಾಹನ ಸವಾರರಿಗೆ ಬೆಲೆ ಏರಿಕೆ ಬರೆ – ಈರಣ್ಣ ಕಡಾಡಿ

ಮೂಡಲಗಿ:ಲೋಕಸಭಾ ಚುನಾವಣೆ ನಂತರ ರಾಜ್ಯದ ವಾಹನ ಸವಾರರಿಗೆ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ 3 ರೂ, ಡೀಸೆಲ್ 3.50 ರೂ. ಏರಿಸುವ ಮೂಲಕ ಗ್ಯಾರಂಟಿ ಬರೆ ನೀಡಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group