ಅನ್ಯಾಯಗಳ ವಿರುದ್ದ ಹೋರಾಟ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು-ಪ್ರಕಾಶ ಮಾದರ

Must Read

ಮೂಡಲಗಿ: ಡಾ.ಬಾಬಸಾಹೇಬ ಅಂಬೆಡ್ಕರ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ದ ಹೋರಾಟ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ದಲಿತ ಮುಖಂಡ ಪ್ರಕಾಶ ಮಾದರ ಮಾತನಾಡಿದರು.

ಅವರು ಸ್ಥಳೀಯ ಗಂಗಾನಗರದ ಅಂಬೇಡ್ಕರ ಭವನದಲ್ಲಿ ಸೋಮವಾರ ನಡೆದ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ (ಸಂಯೋಜಕ) ಇದರ ಪದಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ಸಂಘಟನೆ ಘಟಕಗಳನ್ನು ಪ್ರಾರಂಭಿಸಬೇಕೆಂದರು.

ಜಿಲ್ಲಾ ಸಂಘಟನಾ ಸಂಚಾಲಕ ಯಶವಂತ ಮಂಟೂರ, ಮಹಿಳಾ ಸಂಘಟನಾ ಜಿಲ್ಲಾಧ್ಯಕ್ಷೆ ಸುನಂದಾ ಭಜಂತ್ರಿ ಮಾತನಾಡಿದರು.

ಪದಾಧಿಕಾರಿಗಳು: ಮೂಡಲಗಿ ತಾಲೂಕಾ ಸಂಘಟನಾ ಸಂಚಾಲಕರಾಗಿ ದಶರಥ ಡೊಳ್ಳಿ, ಖಜಾಂಚಿ ಹುಣಸಿಗಿಡದ, ಮಾನಿಂಗ ಮಾದರ, ಭರಮಪ್ಪ ಹರಿಜನ, ವಿದ್ಯಾರ್ಥಿ ಒಕ್ಕೂಟದ ರಮೇಶ ಹರಿಜನ, ಗ್ರಾಮೀಣ ಸಂಚಾಲಕ ಶಿವಾನಂದ ಮಗದುಮ್ ಮತ್ತು ಗೋಕಾಕ ತಾಲೂಕಾ ಸಂಚಾಲಕರಾಗಿ ದುರ್ಗಪ್ಪ ದಂಡಿನವರ, ಸಂಘಟನಾ ಸಂಚಾಲಕ ಮಂಜುನಾಥ ಹರಿಜನ, ಅಶೋಕ ಜಗನ್ನಾಥ ಅವರು ಆಯ್ಕೆಯಾದರು.

Latest News

ಕವನ : ಪ್ರೀತಿಸಿದ ತಪ್ಪಿಗೆ

ಪ್ರೀತಿಸಿದ ತಪ್ಪಿಗೆ... ಇಂದು ಈ ಮುಸ್ಸಂಜೆಯಲಿ.... ಯಾರೋ ಎಲ್ಲೋ ಪ್ರೀತಿಸುವ ಹೃದಯಕೆ ನೋವುಣಿಸಿರಬೇಕು... ಅಕಾಲದಲ್ಲಿ ಆಕಾಶ ಆರ್ಭಟಿಸಿ ಭೋರ್ಗರೆದು ಹೀಗೆ ಸುರಿಯಬೇಕಾದರೆ... ಸದ್ದಿಲ್ಲದೇ ಒಡೆದ ಎದೆ ತುಣುಕುಗಳು ಮುಗಿಲಲಿ ಶೋಕಗೀತೆ ನುಡಿಸುತಿವೆ....ಯಾರೋ ಎಲ್ಲೋ ಹೂವಂತ ಮನಸನು ಮಾತಿನ ಮುಳ್ಳುಗಳಿಂದ ಚುಚ್ಚಿ ನೋಯಿಸಿರಬೇಕು... ಹೆಪ್ಪುಗಟ್ಟಿದ ದುಃಖ ಕಪ್ಪು ಮೋಡದ ಒಡಲ ಬಗೆದು...

More Articles Like This

error: Content is protected !!
Join WhatsApp Group