- Advertisement -
ಬೀದರ – ಬ್ರೇಕ್ ಫೇಲ್ ಆಗಿ ಗೇಟ್ ಮುರಿದು ಒಳಗೆ ಬಂದ ಲಾರಿ ಹಳಿ ಮೇಲೆ ನಿಂತಾಗ ರೈಲು ಬಂದು ಡಿಕ್ಕಿ ಹೊಡೆದಿದ್ದು ಗೇಟ್ ಕೀಪರ್ ಮುನ್ನೆಚ್ಚರಿಕೆಯಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ.
ಭಾಲ್ಕಿ ತಾಲೂಕಿನ ಸಿದ್ದೇಶ್ವರ ರೈಲ್ವೆ ಕ್ರಾಸಿಂಗ್ ಬಳಿ ನಡೆದ ಘಟನೆ ಈ ಘಟನೆ ನಡೆದಿದೆ.
ಲಾರಿ ಬರುವ ಮುಂಚೆ ರೈಲ್ವೆ ಗೇಟ್ ಹಾಕಿದ್ದರೂ ಲಾರಿ ಬ್ರೇಕ್ ಫೇಲ್ ಆಗಿದ್ದರಿಂದ ಮೊದಲನೆಯ ಗೇಟ್ ಮುರಿದು ಲಾರಿ ಒಳಗೆ ಹೊಕ್ಕು ಹಳಿ ಮೇಲೆ ಬಂದು ನಿಂತಿದೆ.
- Advertisement -
ಅದೇ ಸಮಯಕ್ಕೆ ರೈಲು ಬರಲಿದ್ದರಿಂದ ಎಚ್ಚತ್ತ ಗೇಟ್ ಕೀಪರ್ ರೈಲಿಗೆ ಕೆಂಪು ನಿಶಾನೆ ತೋರಿಸಿದ ಮೇಲೆ ರೈಲು ಚಾಲಕ ಬ್ರೇಕ್ ಹಾಕಿದರು. ದೂರದಿಂದಲೆ ಬ್ರೇಕ್ ಹಾಕಲು ಯತ್ನಿಸಿದ್ದರೂ ನಿಲ್ಲದೆ ನಿಧಾನವಾಗಿ ಬಂದ ರೈಲು ಲಾರಿಗೆ ಡಿಕ್ಕಿಯಾಗಿ ನಿಂತಿತು. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ