ಆರೋಗ್ಯ ಕಾಪಾಡಿಕೊಂಡವನೇ ನಿಜವಾದ ಶ್ರೀಮಂತ – ಸುರೇಶ ಕೆರಿಗೊಂಡ

Must Read

ಸಿಂದಗಿ: ಎಲ್ಲ ಸಂಪತ್ತಿಗಿತಂಲೂ ಆರೋಗ್ಯ ಸಂಪತ್ತು ದೊಡ್ಡದು ಕಾರಣ ವಿದ್ಯಾರ್ಥಿಗಳ ಜೀವನದಲ್ಲಿ ಆರೋಗ್ಯ ಬಹಳಷ್ಟು ಪ್ರಾಮುಖ್ಯತೆ ವಹಿಸುತ್ತದೆ  ಆರೋಗ್ಯ ಕಾಪಾಡಿಕೊಂಡವನೆ ನಿಜವಾದ ಶ್ರೀಮಂತ ಎಂದು ತಾಲೂಕ ದೈಹಿಕ  ಶಿಕ್ಷಣ ಪರಿವಿಕ್ಷಕ ಸುರೇಶ ಕೆರಿಗೊಂಡ ಹೇಳಿದರು.

ತಾಲೂಕಿನ ಮೋರಟಗಿ ಗ್ರಾಮದ ಶ್ರೀ ಸಿದ್ದರಾಮೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ  ನಡೆದ ವಲಯ ಮಟ್ಟದ  ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟಕ್ಕೆ  ಚಾಲನೆ ನೀಡಿ ಮಾತನಾಡಿ,  ಜಗತ್ತಿನಲ್ಲಿ ದುಡ್ಡು ಇದ್ದರೆ ಏನಾದರು ಕೊಂಡುಕೊಳ್ಳಬಹುದು ಆದರೆ ಅರೋಗ್ಯ ಕೊಂಡುಕೊಳ್ಳಲು ಸಾಧ್ಯವಿಲ್ಲ ಮನುಷ್ಯ ಅರೋಗ್ಯವಂತನಾಗಿರಲು ಕ್ರೀಡೆ ಬಹಳಷ್ಟು ಮುಖ್ಯ ಪಾತ್ರ ವಹಿಸುತ್ತದೆ ಮೊದಲು ಆಟ ನಂತರ ಪಾಠ ಆಟದ ಜೊತೆಗೆ ಅಭ್ಯಾಸದ ಕಡೆ ಗಮನ ಹರಿಸಿ  ವಿದ್ಯಾರ್ಥಿಗಳಾದ ತಾವುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಮ್ಮ ರಾಜ್ಯದ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.

ಬಾಲಕರ ಕೋಕೋದಲ್ಲಿ ಎಚ್ ಪಿ ಎಸ್ ಯರಗಲ್ ಶಾಲೆ ಪ್ರಥಮ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಎಚ್ ಪಿ ಎಸ್ ಯರಗಲ್ ಪ್ರಥಮ ಸ್ಥಾನ,  ವಾಲಿಬಾಲ್  ಯುಬಿ ಎಸ್ ಪಿ ಎಸ್ ಮಲಘಾಣ ಪ್ರಥಮ, ಬಾಲಕರ ಕಬಡ್ಡಿ ಎಚ್ ಪಿ ಎಸ್ ಗಬಸಾವಳಗಿ ಪ್ರಥಮ, ಬಾಲಕಿಯರ ಕಬಡ್ಡಿ  ಎಚ್ ಪಿ ಎಸ್ ಸೋಮಜಾಳ ಪ್ರಥಮ ಸ್ಥಾನವನ್ನು ಪಡೆದು ತಾಲೂಕ ಮಟ್ಟಕೆ ಆಯ್ಕೆಯಾಗಿದ್ದಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿಲಾಯಿತು.

ಈ ಸಂದರ್ಭದಲ್ಲಿ ಸಿದ್ದರಾಮೇಶ್ವರ ಶಿಕ್ಷಣ ಸೇವಾ ಸಮಿತಿ ನಿರ್ದೇಶಕ ಸಿದ್ದನಗೌಡ ಜಿ ಪಾಟೀಲ್, ನೂರಂದೇಶ್ವರ ಪ್ರಾಥಮಿಕ ಶಾಲೆಯ ಮುಖ್ಯ ಗುರು ರಾಮನಗೌಡ ಮಸಳಿ, ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸೇವಾ ಸಮಿತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ರುದ್ರಗೌಡ ಬಿರಾದಾರ, ನಿವೃತ್ತ ದೈಹಿಕ ಶಿಕ್ಷಕ ಎಸ್ ಎಸ್ ಮಲ್ಲೇದ, ಆರ್ ಕೆ ಪಾಟೀಲ್,  ಹಾಗೂ ಆರ್ ಆರ್ ನಿಂಬಾಳ್ಕರ್ ಶರಣಗೌಡ ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group