spot_img
spot_img

ಸಚಿವರ ವಿರುದ್ಧವೇ ಗರಂ ಆದ ಪಶು ವೈದ್ಯಾಧಿಕಾರಿ

Must Read

spot_img
- Advertisement -

ಬೀದರ – ಪ್ರಗತಿ ಪರಿಶೀಲನ ಸಭೆ ನಡೆಯುವ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ. ಶಿಲ್ಪಾ ಅವರು ಪಶು ಸಂಗೋಪನಾ ಸಚಿವರ ಮೇಲೆಯೇ ಗರಂ ಆದ ಪ್ರಸಂಗ ನಡೆದಿದೆ.

ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಪ್ರಭು ಚವ್ಹಾಣ ಅವರು ಡಾ. ಶಿಲ್ಪ ಅವರಿಗೆ ಪ್ರಶ್ನೆ ಕೇಳಿದರು .ಡಾ ಶಿಲ್ಪ ಅವರು ಉತ್ತರ ನೀಡಿದರು. ಉತ್ತರದಿಂದ ಸಮಾಧಾನವಾಗದ ಸಚಿವರು ಗರಂ ಆಗಿ ನೀವು ತಪ್ಪು ಮಾಹಿತಿ ನಿಡುತ್ತೀರಿ ಎಂದು ಡಾ ಶಿಲ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಇದಕ್ಕೆ ಸಿಡಿದೆದ್ದ ಡಾ. ಶಿಲ್ಪ ಸಚಿವರ ವಿರುದ್ಧವೇ ತಿರುಗಿ ಬಿದ್ದರು. ನೀವು ಓದಿಕೊಂಡು ಬಂದು ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು.ನಿಮಗೆ ಏನು ಗೊತ್ತಿಲ್ಲ ಎಂದು ಸಚಿವರ ವಿರುದ್ಧ ತಿರುಗಿ ಬಿದ್ದಿದ್ದರಿಂದ ಸಭೆಯಲ್ಲಿ ಸ್ವಲ್ಪ ಗದ್ದಲದ ವಾತಾವರಣ ಆಗಿದೆ ಎಂದು ಹೇಳಬಹುದು.

ನಮ್ಮ ಮನೆಯಲ್ಲಿಯೂ ಮಂತ್ರಿ ಆಗಿದ್ದವರು ಇದ್ದಾರೆ. ನೀವು ನಮಗೆ ಏನು ಹೇಳೋದು. ಮಂತ್ರಿ ಸ್ಥಾನದಲ್ಲಿ ಇರುವ ನೀವು ಮಾತಾಡಲು ಕಲಿಯಿರಿ ಎಂದು ಡಾ. ಶಿಲ್ಪ ಸಚಿವರ ವಿರುದ್ಧ ಸಭೆಯಲ್ಲಿ ತಿರುಗಿ ಬಿದ್ದರು.

ಇದರಿಂದ ಪಶುಸಂಗೋಪನೆ ಸಚಿವರು ಸ್ವಲ್ಪ ಹೊತ್ತು ಕಕ್ಕಾಬಿಕ್ಕಿಯಾದಂತೆ ಕಂಡರೂ ಸಾವರಿಸಿಕೊಂಡರು. ಸಚಿವರ ವಿರುದ್ಧ ಮಾತನಾಡುವ ವೈದ್ಯಾಧಿಕಾರಿಯ ವೀಡಿಯೋ ಈಗ ವೈರಲ್ ಆಗಿದೆ.

- Advertisement -

ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group