ಸೊಡ್ಡಳ ಎಂಬ ಪದಕ್ಕೆ ಶಿವ,ಈಶ್ವರ ಎಂಬ ತಿರುಳು ಇದೆ

Must Read

ಬೆಳಗಾವಿ – ವಚನ ಪಿತಾಮಹ ಫಗುಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ 14.08.2025ರಂದು ಸೊಡ್ಡಳ ಬಾಚರಸರ ವಚನಗಳ ಕುರಿತುಉಪನ್ಯಾಸ ಕಾರ್ಯಕ್ರಮ ನಡೆಯಿತು.

ಆರಂಭದಲ್ಲಿ ಮಹಾದೇವಿ ಅರಳಿ ಅವರು ಪ್ರಾಥ೯ನೆ ನಡೆಸಿಕೊಟ್ಟರು.ಪೂಜ್ಯ ಕುಮಿದಿನಿ ತಾಯಿಯವರು ಸೊಡ್ಡಳ ಬಾಚರಸರ ವಚನ ಹೇಳಿದರು.ಪೂಜ್ಯ ವಾಗ್ದೇವಿ ತಾಯಿಯವರು ಮಾತನಾಡುತ್ತಾ ಕಲ್ಯಾಣದ ಶರಣರು ಕಾಯಕ ಬಿಡುತ್ತಿರಲ್ಲಿಲ್ಲ. ಸೊಡ್ಡಳ ಬಾಚರಸ ಬಸವಣ್ಣವರಿಗೆ ತುಂಬ ಆಪ್ತರು.ಕಲ್ಯಾಣ ನಗರದ ಬಿಜ್ಡಳನ ಅರಮನೆಯ ಕಣಜದಿಂದ ದಾನ್ಯವನ್ನು ಅಳೆದು ಕೊಡುವ ಮತ್ತು ಕೊಟ್ಟಿದ್ದರ ಲೆಕ್ಕವನ್ನು ಬರೆಯುವ ಕರಣಿಕರಾಗಿದ್ದರು.ಇವರ ಕಾಲ1160 ಆಗಿತ್ತು.ಸೊಡ್ಡಳ ಅಂಕಿತದಲ್ಲಿ 102,ವಚನಗಳು ಉಪಲಬ್ದವಾಗಿವೆ.ತತ್ವ ವಿವೇಚನೆ ನೀತಿಭೋದೆ ಅನ್ಯ ದೈವದೊಂದಿಗೆ ಶಿವಭಕ್ತಿ ನಿಷ್ಟೆ ಇವುಗಳಲ್ಲಿ ವ್ಯಕ್ತವಾಗಿವೆ.ಶಿವಶರಣ ಶರಣೆಯರ ವಚನದಲ್ಲಿ ಹೇಳಿರುವ ಒಳ್ಳೆಯ ನಡೆ ನುಡಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಾತಿನ ಚಪಲಕ್ಕಾಗಿಯೇ ಇಲ್ಲವೇ ಉದರ ಪಾಡಿಗಾಗಿಯೋ ವಚನದ ಸಂಗತಿಗಳನ್ನು ಇತರರ ಮುಂದೆ ಹಾಡಿ ಹೊಗಳುವ ವ್ಯಕ್ತಿಗಳು ಎಂದಿಗೂ ಶಿವನ ಒಲವಿಗೆ ಪಾತ್ರರಾಗಲಾರರು ಎಂದರು.

ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು.ಶರಣೆ ಶ್ರೀದೇವಿ ಕಾಡಣ್ಣವರ ದಾಸೋಹ ಸೇವೆಗೈದರು.ಶರಣೆ ಸುಲೋಚನಾ ವಸ್ತ್ರದ, ಕಾಶೆಕ್ಕ  ಯಮಕನಮರಡಿ, ಗುತ್ತಿಗೋಳಿ, ಮ೦ಗಳಾ ಕಾಗತಿಕರ,ಲೀಲಾವತಿ ರಾಚೋಟಿಮಠ, ರಾಜಶ್ರೀ ಖನಗಣಿ, ಶೋಭಾ ಅ೦ಗಡಿ, ಸುಜಾತಾ ಮತ್ತಿಕಟ್ಟಿ, ವಿದ್ಯಾ ಕರಕಿ, ಶಾಂತಾ ತಿಗಡಿ,ರತ್ನಾ ಬೆಣಚನಮರಡಿ,ಪ್ರೀತಿ ಗುರಯ್ಯ ಮಠದ,ಶೋಭಾ ದೇಯನ್ನವರ, ದೀಪಾ ಪಾಟೀಲ, ರತ್ನಾ ಬೆಣಚಿನಮರಡಿ, ಬಸವರಾಜ ಕರಡಿಮಠ,ಶಿವಾನಂದ ನಾಯಕ,ಶ೦ಕರ ಗುಡಗನಟ್ಟಿ,ವಿ.ಕೆ. ಪಾಟೀಲ,ಆನಂದ ಕರಕಿ,ಬಸವರಾಜ ಮತ್ತಿಕಟ್ಟಿ, ಮಹಾಂತೇಶ ಮೆಣಸಿನಕಾಯಿ,ಶರಣ ಶರಣೆಯರು ಉಪಸ್ಥಿತರಿದ್ದರು ಸುರೇಶ ನರಗುಂದ ಸ್ವಾಗತಿಸಿದರು ಸಂಗಮೇಶ ಅರಳಿ ನಿರೂಪಿಸಿದರು.ವಚನ ಮಂಗಲದೊಂದಿಗೆ ಸಂಪನ್ನಗೊಂಡಿತ್ತು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group