Homeಸುದ್ದಿಗಳುಸತ್ಪುರುಷರಲ್ಲಿ ತಿಂಥಿಣಿ ಮೌನೇಶ್ವರರ ಕಾಯಕ ಅನನ್ಯ- ಡಾ. ದಾನಮ್ಮ ಜಳಕಿ

ಸತ್ಪುರುಷರಲ್ಲಿ ತಿಂಥಿಣಿ ಮೌನೇಶ್ವರರ ಕಾಯಕ ಅನನ್ಯ- ಡಾ. ದಾನಮ್ಮ ಜಳಕಿ

ಲಿಂಗಾಯತ ಸಂಘಟನೆ ವತಿಯಿಂದ ಶ್ರಾವಣ ಸತ್ಸಂಗ ಕಾರ್ಯಕ್ರಮ  

ಶರಣರ ವಚನಗಳನ್ನು ಪಾಲಿಸುತ್ತ ಹಿಂದೂ,ಮುಸ್ಲಿಂ ಭಾವೈಕ್ಯತೆ ಹರಿಕಾರರಾಗಿ ಶರಣರ ನುಡಿಗಳನ್ನು ಪ್ರೇರಣೆಯಾಗಿ ಪಡೆದುಕೊಂಡು ಅರಿವಿನ ಜ್ಞಾನವನ್ನು ಮೂಡಿಸುತ್ತಾ ಅರಿವಿನ ಕಲೆಯಿಂದ ಬದುಕಿರಿ ಮತ್ತು ನೈತಿಕತೆಯ ಜೀವನ ಸಾಗಿಸಿ ಎಂದು, ಕಾಯಕ ನಿಷ್ಠೆ ಪಾಲಿಸುವುದರ ಜೊತೆಗೆ ಸರ್ವರನ್ನು ಒಂದೆಡೆ ಸೇರಿಸಿ ಸಮತಾಭಾವ ನಿರ್ಮಿಸುವಲ್ಲಿ ಮಹಾನ್ ಕಾರ್ಯ ಮಾಡಿದ ಸತ್ಪುರುಷರಲ್ಲಿ ತಿಂಥಿಣಿಯ ಮೌನೇಶ್ವರ ಶರಣರ ಕಾಯಕವೂ ಬಲು ದೊಡ್ಡದು ಎಂದು ಡಾ. ದಾನಮ್ಮ ಜಳಕಿ ಹೇಳಿದರು.

ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರ ದಿ. 10 ರಂದು ಹಮ್ಮಿಕೊಳ್ಳಲಾದ ಶ್ರಾವಣ ಸತ್ಸಂಗ ಕಾರ್ಯಕ್ರಮದಲ್ಲಿ ತಿಂಥಿಣಿ ಮೌನೇಶ್ವರ ಶರಣರ ಕುರಿತು ವಿವರಿಸುತ್ತಾ,  ನೈತಿಕತೆಗೆ ಎಲ್ಲರೂ ಬೆಲೆ ಕೊಡುವಂತಾಗಬೇಕು. ಕಾಯಕದಿಂದ ಜಾತಿಯನ್ನು ನಿರ್ಧರಿಸುವುದೇ ಮೇಲಾಗದೆ ಕಾಯಕತೆಯ ಪ್ರಾಮಾಣಿಕತೆಗೆ ಹೆಚ್ಚಿನ ಬೆಲೆ ಕೊಡುವ ಸಂಪ್ರದಾಯ ಬೆಳೆಯಲಿ ಎಂದು ಅವರ ಜೀವನ ಕ್ರಮ ಮತ್ತು ಶರಣರ ವಚನಗಳನ್ನು ಪರಿಪಾಲನೆ ಮಾಡುತ್ತಾ ಜೀವನವನ್ನು ಪಾವನಗೊಳಿಸೋಣ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಶರಣರ ಅನುಭವದ ನುಡಿಗಳನ್ನು ಜೀವನದಲ್ಲಿ ರೂಢಿಸಿ ಕೊಳ್ಳೋಣ ಎಂದರು.

ಕಾರ್ಯಕ್ರಮದಲ್ಲಿ ಸತೀಶ ಪಾಟೀಲ, ಶಶಿಭೂಷಣ ಪಾಟೀಲ, ಶಿವಾನಂದ ತಲ್ಲೂರ ಮಹದೇವ ಕೆಂಪಿಗೌಡರ, ಬಸವರಾಜ್ ಬಿಜ್ಜರಗಿ ಅನಿಲ ರಘಶೆಟ್ಟಿ, ವಿರೂಪಾಕ್ಷಿ ದೂಡ್ಡಮನಿ, ಬಸವರಾಜ ಕರಡಿಮಠ, ಸದಾಶಿವ ದೇವರಮನಿ, ಬಸವರಾಜ ಮತ್ತಿಕಟ್ಟಿ,ಕುಮಾರ ಪಾಟೀಲ, ಬಿ.ಪಿ.ಜೇವಣಿ, ಆನಂದ ಕಕಿ೯,ಪ್ರೀತಿ ಮಠದ, ಶಂಕರ ಗುಡಸ, ವಿ. ಕೆ. ಪಾಟೀಲ, ಆನಂದ ಕರ್ಕಿ, ಸುಜಾತ ಮತ್ತಿಕಟ್ಟಿ ಮಹಾದೇವಿ ಘಾಟೆ,ಶೋಭಾ ದೇಯನ್ನವರ, ವಿದ್ಯಾ ಕರ್ಕಿ ಸುವರ್ಣ ಗುಡಸ ಸೇರಿದಂತೆ ಶರಣ ಶರಣೆಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಸುರೇಶ ನರಗುಂದ ಸ್ವಾಗತಿಸಿದರು ಕಾರ್ಯದರ್ಶಿ ಸಂಗಮೇಶ ಅರಳಿ ನಿರೂಪಿಸಿದರು. ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group