spot_img
spot_img

ನನ್ನ 55 ವರ್ಷಗಳ ಜೀವನದಲ್ಲಿ ಒಂದೇ ಕಪ್ಪು ಚುಕ್ಕಿ ಇಲ್ಲ – ಭಗವಂತ ಖೂಬಾ

Must Read

- Advertisement -

ಬಿಜೆಪಿಯ ಪಕ್ಷದ ಪ್ರತಿಷ್ಠೆ ಹಾಳು ಮಾಡಲಿರುವ ಇಬ್ಬರು ನಾಯಕರ ಕಲಹ

ಬೀದರ: ನನ್ನ 55 ವರ್ಷಗಳ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಬರದ ಹಾಗೆ ಬದುಕಿದ್ದೇನೆ. ಶಾಸಕ ಚವ್ಹಾಣ್‌ ಮಾಡಿರುವ ಗಂಭೀರ ಆರೋಪಗಳಿಂದ ನನಗೆ ದಿಗ್ಭ್ರಮೆ ಆಗಿದೆ. ನಾನು ಒಂದು ವಾರದಿಂದ ಅಘಾತದಲ್ಲಿದ್ದೇನೆ.  ಪರಿವಾರದವರು, ಕಾರ್ಯಕರ್ತರ ಮನಸ್ಸಿಗೆ ಬಹಳ ನೋವಾಗಿದೆ. ಚವ್ಹಾಣ್‌ ನನ್ನ ವಿರುದ್ಧ ಆರೋಪಗಳ ಕುರಿತು ಪಕ್ಷದ ರಾಷ್ಟ್ರೀಯ ನಾಯಕರು, ರಾಜ್ಯ ಅಧ್ಯಕ್ಷರು, ಇತರೆ ನಾಯಕರ ಗಮನಕ್ಕೆ ತಂದಿದ್ದೇನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿದ ಪತ್ರದಲ್ಲಿ ತಿಳಿಸಿದ್ದಾರೆ

ಈ ಮುಂಚೆ ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದ ಇಬ್ಬರೂ ಬಿಜೆಪಿ ನಾಯಕರು ವಿಧಾನ ಸಭೆ ಚುನಾವಣೆ ನಂತರ ಬದ್ದ ವೈರಿಗಳಾಗಿದ್ದು ವಿಪರ್ಯಾಸಕರವಾಗಿದ್ದು, ಈ ಬಗ್ಗೆ  ರಾಷ್ಟ್ರೀಯ ನಾಯಕರು ತಮ್ಮ ರಾಜ್ಯದ ನಾಯಕರು ಈ ಇಬ್ಬರೂ ನಾಯಕರ ಜಗಳದ ಮಧ್ಯೆ ಯಾಕೆ ಪ್ರವೇಶ ಮಾಡುತ್ತಿಲ್ಲ ಎಂಬುದೇ ಕುತೂಹಲಕಾರಿಯಾಗಿದೆ.

- Advertisement -

ಔರಾದ ಶಾಸಕ ಪ್ರಭು ಚವ್ಹಾಣ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಆರೋಪ ಪ್ರತ್ಯಾರೋಪ ಮಾಡಿಕೊಂಡು ಎಸ್ಪಿ ಆಫೀಸ್ ಮೆಟ್ಟಿಲು ಹತ್ತಿದ್ದಾರೆ 

ಕೇಂದ್ರ ಸಚಿವ ಭಗವಂತ ಖೂಬಾ ಎಸ್ಪಿಯವರಿಗೆ ಬರೆದ ಪತ್ರದಲ್ಲಿ, ಔರಾದ್‌ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವಾಣ್‌ ಅವರು ನನ್ನ ವಿರುದ್ಧ ಮಾಡಿರುವ ಗಂಭೀರ ಸ್ವರೂಪದ ಆರೋಪಗಳೆಲ್ಲ ಸುಳ್ಳು. ನನಗೆ ಅವರ ಮೇಲೆ ಯಾವುದೇ ದ್ವೇಷ, ಅಸೂಯೆ ಇಲ್ಲ. ಈ ಸುಳ್ಳು ಆರೋಪಗಳ ಕುರಿತು ತನಿಖೆ ನಡೆಸಬೇಕು. ಭವಿಷ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದರೆ ಅದಕ್ಕೂ ನನಗೂ ಯಾವುದೇ ಸಂಬಂಧ ಇರುವುದಿಲ್ಲ. ಅದಕ್ಕೆ ನಾನು ಹೊಣೆಗಾರನಲ್ಲ’ ಎಂದು ಬರೆದಿದ್ದಾರೆ.

- Advertisement -

ಆ.15ರಂದೇ ಸಚಿವರು ಈ ಪತ್ರ ಬರೆದಿದ್ದಾರೆ. ಕೇಂದ್ರ ಸಚಿವರು ಬರೆದಿರುವದನ್ನು ಎಸ್ಪಿ ಚನ್ನಬಸವಣ್ಣ ಸುದ್ದಿ ವಾಹಿನಿಗಳಿಗೆ ಬಿಡುಗಡೆ ಮಾಡಿದ್ದಾರೆ.

ನನ್ನ 55 ವರ್ಷಗಳ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಬರದ ಹಾಗೆ ಬದುಕಿದ್ದೇನೆ. ಶಾಸಕ ಚವ್ಹಾಣ್‌ ಮಾಡಿರುವ ಗಂಭೀರ ಆರೋಪಗಳಿಂದ ನನಗೆ ದಿಗ್ಭ್ರಮೆ ಆಗಿದೆ. ನಾನು ಒಂದು ವಾರದಿಂದ ಅಘಾತದಲ್ಲಿದ್ದೇನೆ. ಚವಾಣ್‌ ಅವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವುದು ಅಕ್ಷಮ್ಯ ಅಪರಾಧ. ನನ್ನ ಚಾರಿತ್ರ್ಯ ತೇಜೋವಧೆ ಯಾವುದೇ ಕಾರಣಕ್ಕೂ ಸಲ್ಲದು. ಈ ರೀತಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಾವು ಕೂಡ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕೆಂದು ಎಸ್ಪಿಯವರಿಗೆ ಬರೆದಿರುವ ಪತ್ರದಲ್ಲಿ ಖೂಬಾ ತಿಳಿಸಿದ್ದಾರೆ.

ಮೊದಲೇ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಸೋತು ಹೈರಾಣಾಗಿರುವ ಭಾರತೀಯ ಜನತಾ ಪಕ್ಷದಲ್ಲಿ ಭುಗಿಲೆದ್ದಿರುವ ಇಬ್ಬರು ನಾಯಕರೊಳಗಿನ ಅಸಮಾಧಾನ, ದ್ವೇಷ ಪೂರಿತ ವಾತಾವರಣ ಬಿಜೆಪಿ ಪ್ರತಿಷ್ಠೆ ಹಾಳು ಮಾಡುವುದರಲ್ಲಿ ಸಂದೇಹವಿಲ್ಲ. ಕೇಂದ್ರ ಸಚಿವ ಮತ್ತು ಶಾಸಕರ ಜಗಳ ಯಾವ ಹಂತಕ್ಕೆ ಹೋಗುತ್ತದೆ ಎಂಬುದು ಕಾದು ನೋಡಬೇಕು. ಆದರೂ ಬಿಜೆಪಿಯ ಹಿರಿಯ ನಾಯಕರು ಈ ಇಬ್ಬರೂ ನಾಯಕರ ಕಲಹಕ್ಕೆ ಇಲ್ಲಿಯೇ ಬ್ರೇಕ್ ಹಾಕುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು ಎಂಬ ಅಭಿಪ್ರಾಯ ರಾಜ್ಯದ ಜನರಲ್ಲಿ ಮೂಡಿಬಂದಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group