ಬೀದರ – ಕಾಂಗ್ರೆಸ್ ನ ಪ್ರತಿಭಟನೆ ವೇಳೆ ರಾಜ್ಯಪಾಲರಿಗೆ ಅವಮಾನ ಖಂಡಿಸಿ ಮಾಜಿ ಸಚಿವ ಪ್ರಭು ಚೌಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಹಿಂದ ನಾಯಕ ಅಂತಾ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ ಆದರೆ ರಾಜ್ಯಾದ್ಯಂತ ಕೈ ನಾಯಕರು ಎಸ್‌ಸಿ ಸಮುದಾಯದ ರಾಜ್ಯಪಾಲರಿಗೆ ಅವಮಾನ ಮಾಡ್ತಾ ಇದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು
ಪ್ರತಿಭಟನೆಯ ಹೆಸರಿನಲ್ಲಿ ಚಪ್ಪಲಿಯಿಂದ ರಾಜ್ಯಪಾಲರ ಚಿತ್ರಕ್ಕೆ ಹೋಡೀತಾ ಇದ್ದೀರಿ. ಜಮೀರ್ ಅಹ್ಮದ್ ಸೇರಿದಂತೆ ಕೈ ನಾಯಕರು ರಾಜ್ಯಪಾಲರಿಗೆ ಅವಮಾನ ಮಾಡುತ್ತಿದ್ದಾರೆ. ಜಮೀರ್ ಅಹ್ಮದ್ ಅವರೇ ಇದೂ ಹಿಂದೂಸ್ತಾನ ಇದೆ, ಪಾಕಿಸ್ತಾನ ಅಲ್ಲ ಎಂದರು.
ಮುಂದುವರೆದು ಮಾತನಾಡಿದ ಅವರು, ರಾಜ್ಯಪಾಲರು ವಿಚಾರಣೆಗೆ ಹೇಳಿದ್ದಾರೆ, ಅದಕ್ಕೆ ಯಾಕೆ ಇಷ್ಟು ಹೆದರುತ್ತಾ ಇದ್ದೀರಿ. ರಾಜ್ಯಪಾಲರ ಮನೆ ಮೇಲೆ ಅಟ್ಯಾಕ್ ಮಾಡುತ್ತೇವೆ ಅಂತಾ ಐವಾನ್ ಡಿಸೋಜಾ ಹೇಳ್ತಾರೆ. ಒಬ್ಬ ಜನಪ್ರತಿನಿಧಿ ಆಗಿ, ಈ ರೀತಿ ಮಾತಾಡ್ತಾರೆ. ಅದನ್ನ ನಾವು ಖಂಡಿಸುತ್ತೇವೆ. ಐವಾನ್ ಡಿಸೋಜಾ ನೀವು ಬಾಂಗ್ಲಾಗೆ ಹೋಗಿ ಎಂದು ಸೂಚಿಸಿದ ಪ್ರಭು ಚವ್ಹಾಣ, ನಾಳೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತದೆ. ಸಿಎಂ ರಾಜೀನಾಮೆ ನೀಡುವವರೆಗೂ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಬೀದರ್‌ನಲ್ಲಿ ಕೈ ನಾಯಕರ ವಿರುದ್ದ ಮಾಜಿ ಸಚಿವ ಪ್ರಭು ಚೌಹಾಣ್ ಕಿಡಿ ಕಾರಿದರು
ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದಂತೆ ಕುಮಾರಸ್ವಾಮಿಗೂ ನೀಡಬೇಕು ಎಂಬ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಸಚಿವರು, ಸಿಎಂ ಕೇಸ್ ಬೇರೆ, ಕುಮಾರಸ್ವಾಮಿ ಅವರ ಕೇಸ್ ಬೇರೆ. ರಾಜ್ಯಪಾಲರು ಏಕಾಏಕಿ ಅನುಮತಿ ನೀಡಿಲ್ಲಾ, ಸಾಧಕ ಬಾಧಕ ನೋಡಿ ನೀಡಿದ್ದಾರೆ.ಕುಮಾರಸ್ವಾಮಿ ಅವರಿಗೂ ನೋಟೀಸು ನೀಡ್ತಾರೆ. ಮೊದಲೂ ಸಿಎಂ ಅವರ ತನಿಖೆ ಆಗಬೇಕು. ಸಿಎಂ ಅವರು ಯಾಕೆ ಹೆದರುತ್ತಿದ್ದಾರೆ. ತನಿಖೆ ಎದುರಿಸಲಿ ಎಂದರು.
ವರದಿ : ನಂದಕುಮಾರ ಕರಂಜೆ, ಬೀದರ