spot_img
spot_img

ತಿಮ್ಮಾಪೂರ ಗ್ರಾಮ ದೇವರ ರಥೋತ್ಸವ

Must Read

- Advertisement -

ತಿಮ್ಮಾಪೂರ: ಪ್ರತಿ ವರ್ಷದಂತೆ ಈ ವರ್ಷವು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲುಕಿನ ತಿಮ್ಮಾಪೂರ ಗ್ರಾಮದ ಆರಾಧ್ಯದೇವರಾದ ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು.

ಮಧ್ಯಾಹ್ನ ಕಳಸದ ಮೆರವಣಿಗೆಯು ಗ್ರಾಮದಲ್ಲಿ ಸಂಚರಿಸಿದ ನಂತರದ ಕಳಸವನ್ನು ರಥಕ್ಕೆ ಏರಿಸಲಾಯಿತು. ಭಕ್ತರು ರಥದ ಹಗ್ಗ ಎಳೆಯುವ ಮೂಲಕ ಭಕ್ತಿ ಭಾವದಲ್ಲಿ ಪರವಶರಾದರು. 

ರಥೋತ್ಸವದ ಪೂರ್ವದಲ್ಲಿ ಗ್ರಾಮದಲ್ಲಿ ಉಚ್ಚಯ್ಯ (ಸಣ್ಣ ತೇರು)ನ್ನು ಪಾದಗಟ್ಟೆಯವರೆಗೆ ಎಳೆಯಲಾಯಿತು.

- Advertisement -

ಕಳೆದ ೨೦೦೦ ನೇ ಇಸ್ವಿಯಲ್ಲಿ ಚಿತ್ತರಗಿ-ಇಲಕಲ್ಲಿನ ವಿಜಯ ಮಹಾಂತಶ್ರೀಗಳು, ಕೊಳೂರ ಶ್ರೀಗಳು, ಹಡಗಲಿ-ನಿಡಗುಂದಿಯ ರುದ್ರಮುನಿ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರಾರಂಭಗೊoಡು ಇಂದಿಗೆ ೨೨ ವರ್ಷಕ್ಕೆ ಪೂರೈಸಿ ೨೩ ವರ್ಷದ ರಥೋತ್ಸವ ಪಾದಾರ್ಪಣೆಗೊಂಡಿದ್ದು ಈ ವರ್ಷದ ರಥೋತ್ಸವಕ್ಕೆ ಹಡಗಲಿ-ನಿಡಗುಂದಿಯ ರುದ್ರಮುನಿ ಶ್ರೀಗಳು, ಆಳಂದ ನಂದವಾಡಗಿಯ  ಚನ್ನಬಸವ ಶ್ರೀಗಳು, ಗ್ರಾಮದ ವೆ.ಮೂ ಬಸಯ್ಯ ಹಿರೇಮಠ    ಸಾಮೂಹಿಕವಾಗಿ  ಚಾಲನೆ ನೀಡಿದರು  ಈ ಸಂಧರ್ಭದಲ್ಲಿ ಗ್ರಾಮದ ಹಿರಿಯರು ಇತರರು ಉಪಸ್ಥಿತರಿದ್ದರು.

ವಿವಿಧ ಬಣ್ಣದ ಧ್ವಜ ಬಾಳೆಕಂಬಗಳು ವಿವಿಧ ಬಗೆಯ ಹೂಗಳಿಂದ ಶೃಂಗಾರ ಮಾಡಿದ ಭವ್ಯವಾದ ರಥ ನೋಡುಗರ ಕಣ್ಮನ ಸೆಳೆಯಿತು. ರಥೋತ್ಸವದಲ್ಲಿ ತಿಮ್ಮಾಪೂರ, ಹಡಗಲಿ, ಚಿತ್ತರಗಿ, ಹುನಗುಂದ ಇಲಕಲ್ಲ ಅಮರಾವತಿ, ಬೇವೂರ, ಹಳ್ಳೂರ, ಭಗವತಿ, ಬೆಳಗಲ್ಲ, ಇದ್ದಲಗಿ, ಧನ್ನೂರ, ಕೂಡಲಸಂಗಮ, ಬೆಂಗಳೂರು, ಮಂಗಳೂರು ಸೇರಿದಂತೆ ಮಹಾರಾಷ್ಟ್ರದ ಕೊಲ್ಹಾಪೂರ ಪುಣೆಯ ಭಕ್ತರು ಸೇರಿದಂತೆ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು

- Advertisement -
- Advertisement -

Latest News

ವಿಮರ್ಶೆ ; ಹಾಸನದಲ್ಲಿ ಶಿವ ಸಂಚಾರ ತಂಡದ ಬಂಗಾರದ ಮನುಷ್ಯ ನಾಟಕ

ಹಾಸನದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಹೊರ ಆವರಣದಲ್ಲಿ ಶಿವಶಂಚಾರ ತಂಡದಿಂದ ಶನಿವಾರ ಪ್ರದರ್ಶಿತವಾದ ಬಂಗಾರದ ಮನುಷ್ಯ ನಾಟಕ ಹಲವು ಆಯಾಮಗಳಿಂದ ಗಮನ ಸೆಳೆಯಿತು. ಪ್ರಸಿದ್ದ...
- Advertisement -

More Articles Like This

- Advertisement -
close
error: Content is protected !!
Join WhatsApp Group