ಇದು ಭಾರತ ಜೋಡೋ ಅಲ್ಲ ಭಾರತ್ ತೋಡೋ ಯಾತ್ರೆ – ರವಿಕುಮಾರ್

Must Read

ಬೀದರ – ಕಾಂಗ್ರೆಸ್ ನವರು ಇಂದು ನಡೆಸುತ್ತಿರುವುದು ಭಾರತ  ಜೋಡೋ ಯಾತ್ರೆ ಅಲ್ಲ ಭಾರತ ತೋಡೋ ಯಾತ್ರೆ ಯಾಕೆಂದರೆ ಕಾಶ್ಮೀರದಲ್ಲಿ ೩೭೦ ಕಲಮನ್ನು ಮತ್ತೆ ಜಾರಿಗೆ ತರುವುದಾಗಿ ಕಾಂಗ್ರೆಸ್ ಹೇಳುತ್ತಿದೆ ಇದು ಭಾರತ ತೋಡೋ ಅಲ್ಲದೆ ಮತ್ತೇನು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.

ಭಾರತದಿಂದ ಪಾಕಿಸ್ತಾನವನ್ನು  ತೋಡೋ ಮಾಡಿದವರು ಇಂದು ಭಾರತ್ ಜೋಡೋ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ನ ಪಶ್ಚಾತ್ತಾಪದ ಪಾದಯಾತ್ರೆನಾ ಎಂದು ಅವರು ಪ್ರಶ್ನೆ ಮಾಡಿದರು.

ವಿಪರ್ಯಾಸವೆಂದರೆ ಸಣ್ಣ ರಾಜ್ಯಕ್ಕೆ 21 ದಿನ ಪಾದಯಾತ್ರೆ,   ದೊಡ್ಡ ಉತ್ತರ ಪ್ರದೇಶಕ್ಕೆ ಒಂದೇ ದಿನ ಪಾದಯಾತ್ರೆ ಇದು ಸರಿಯೇ. ಜೋಡೋ ಯಾತ್ರೆ ಹಾಸ್ಯಾಸ್ಪದವಾಗಿದೆ ಎಂದರು.

ಭಾರತ ತುಕ್ಡೆ ಮಾಡುವ ಕನ್ಹಯ್ಯಕುಮಾರನನ್ನು ಇಟ್ಟುಕೊಂಡು ನೀವು ಪಾದಯಾತ್ರೆ ಮಾಡುತ್ತಿದ್ದೀರಾ ಎಂದು ಕೇಳಿದ ಅವರು, ರಾಹುಲ್, ಸೋನಿಯಾಗಾಂಧಿ ಹಾಗೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಈ ದೇಶ, ರಾಜ್ಯಕ್ಕೆ ಕಂಟಕವಾಗಿದ್ದಾರೆ. ಕಾಂಗ್ರೆಸ್ ಪಕ್ಷವೇ ಈ ದೇಶಕ್ಕೆ ಒಂದು ಶಾಪವಿದ್ದಂತೆ ಎಂದು ರವಿಕುಮಾರ್ ಹೇಳಿದರು.

ಶ್ರೀ ರಾಮುಲು ಗೆ ಸಿದ್ದರಾಮಯ್ಯ ಪೆದ್ದ ಅಂದ  ವಿಚಾರ ಪ್ರಸ್ತಾಪಿಸಿದ ಅವರು,  ಸಿದ್ದರಾಮಯ್ಯ ಗೆ ಹೇಳುತ್ತೇನೆ ರಾಹುಲ್ ಗಾಂಧಿಯಷ್ಟು ನಮ್ಮ ರಾಮುಲು ಪೆದ್ದ ಅಲ್ಲ. ಶ್ರೀರಾಮಲು ಬಹಳಷ್ಟು ಒಳ್ಳೆಯ ಕೆಲಸಗಳನ್ಜು ರಾಜ್ಯಕ್ಕೆ ಮಾಡಿದ್ದಾರೆ.ರಾಹುಲ್ ಹೆಚ್ಚಾ ಅಥವಾ ರಾಮುಲು ಹೆಚ್ಚಾ ಚರ್ಚೆಗೆ ಬನ್ನಿ ಎಂದು ಸಿದ್ದರಾಮಯ್ಯ ಗೆ ಸವಾಲು ಹಾಕಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಸ್ವಾತಂತ್ರ ಹೋರಾಟಗಾರ, ಹೈ. ಕ. ವಿಮೋಚನಾ ರೂವಾರಿ ಚಂದ್ರಶೇಖರ ಪಾಟೀಲ ಮಹಾಗಾಂವ

ಚಂದ್ರಶೇಖರ ಸಂಗಶೆಟ್ಟಿ ಪಾಟೀಲ , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಹೋರಾಟಗಾರ ಮತ್ತು ರಾಜಕಾರಣಿ. ಸ್ವಾತಂತ್ರ ಹೋರಾಟಗಾರ ಹೈದ್ರಾಬಾದ...

More Articles Like This

error: Content is protected !!
Join WhatsApp Group