spot_img
spot_img

ಗ್ರಾಮ ವಾಸ್ತವ್ಯದಲ್ಲಿ ಅಹವಾಲು ಸಲ್ಲಿಸಲು ತಹಶೀಲ್ದಾರ ಸೂಚನೆ

Must Read

- Advertisement -

ಗುರ್ಲಾಪೂರ –  ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಗ್ರಾಮ ವಾಸ್ತವ್ಯದಲ್ಲಿ ತಾಲೂಕಾ ಆಡಳಿತ ಹಾಗೂ ತಾಲೂಕಿನ ಎಲ್ಲ ಅಧಿಕಾರಿಗಳ ಸಹಯೋಗದೊಂದಿಗೆ ಸಾರ್ವಜನಿಕರು ತಮ್ಮ ಕುಂದುಕೊರತೆ ಹಾಗೂ ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಲಿಖಿತ ರೂಪದಲ್ಲಿ ಸಂಬಂಧಪಟ್ಟ ಕಾರ್ಯಾಲಯಗಳ ಅಧಿಕಾರಿಗಳಿಗೆ ಸಲ್ಲಿಸಬೇಕೆಂದು ತಾಲೂಕಾ ದಂಡಾಧಿಕಾರಿ ಡಿ.ಜಿ. ಮಹಾತ ಹೇಳಿದರು.

ಅವರು ಶನಿವಾರ ಗುರ್ಲಾಪೂರ ಗ್ರಾಮದ ಶ್ರೀ ಬಸವಜ್ಯೋತಿ ಸಹಕಾರ ಕಲ್ಯಾಣ ಮಂಟಪದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ತಿಂಗಳು 3ನೇ ಶನಿವಾರದಂದು ಗ್ರಾಮ ವಾಸ್ತವ್ಯಕ್ಕೆ ತಾಲೂಕಿನಿಂದ ಆಯ್ಕೆಯಾದ ಹಳ್ಳಿಗಳಲ್ಲಿ ಎಲ್ಲ ಅಧಿಕಾರಿಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿ ಸಾಧ್ಯವಾದಷ್ಟು ಅದೇ ದಿನ ಸಮಸ್ಯೆ ಪರಿಹರಿಸಿ ಸಾಧ್ಯವಾಗದೇ ಇದ್ದಲ್ಲಿ ಆದ್ಯತೆ ಮೇರೆಗೆ ತೀವ್ರವಾಗಿ ಪರಿಗಣಿಸಿ ಸಮಸ್ಯೆ ನಿವಾರಣೆ ಮಾಡಲಾಗುವುದು. ಸಾರ್ವಜನಿಕರು ಲಿಖಿತ  ರೂಪದಲ್ಲಿ ಅರ್ಜಿ ಸಲ್ಲಿಸಿದರೆ ಅದು ಆಧಾರವಾಗುತ್ತದೆ. ಆಯಾ ಇಲಾಖೆ ಅಧಿಕಾರಿಗಳು ಸಮಸ್ಯೆಗಳು ತಾಲೂಕಾ ಮಟ್ಟದಲ್ಲಿ ಪರಿಹಾರವಾಗದೇ ಇದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಕೆಲವೊಂದನ್ನು ರಾಜ್ಯಕ್ಕೂ ಸಹ ಸಲ್ಲಿಸಲಾಗುವುದು. ಈ ಗ್ರಾಮ ವಾಸ್ತವ್ಯ ಗ್ರಾಮಸ್ಥರಿಗೆ ಸಾರ್ಥಕವಾಗಬೇಕು ಎಂದು ಹೇಳಿದರು.

ಗ್ರಾಮಸ್ಥರ ಪರವಾಗಿ ಎಸ್.ಜಿ. ಹಂಚಿನಾಳ, , ಆರ್.ಬಿ. ನೇಮಗೌಡರ ಅಭಿವೃದ್ಧಿಯ ಪರವಾಗಿ ಮಾತನಾಡಿ ನಮ್ಮ ಗ್ರಾಮವು ಮೂಡಲಗಿ ಪುರಸಭೆ ಖಾನಟ್ಟಿ ಗ್ರಾ.ಪಂ. ವ್ಯಾಪ್ತಿ ಹಾಗೂ ಹಳ್ಳೂರಗಳಲ್ಲಿ ಹಂಚಿಹೋಗಿದ್ದು ಇದರಿಂದ ನಮಗೆ ತೊಂದರೆಯಾಗಿದೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ರಾಷ್ಟ್ರೀಕೃತ ಬ್ಯಾಂಕು, ಚರಂಡಿ ರಸ್ತೆಗಳು, ಪಶು ಆಸ್ಪತ್ರೆ, ಗ್ರಂಥಾಲಯ, ಸಾರ್ವಜನಿಕ ಆಸ್ಪತ್ರೆಗಳ ಅವಶ್ಯಕತೆ ಇದ್ದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಕಾಗದ ಪತ್ರಗಳು ಬರುತ್ತಿವೆ, ಅದು ಗ್ರಾಮೀಣವಾಗಬೇಕು.

- Advertisement -

ಮೂಡಲಗಿ ಪುರಸಭೆಗೆ ಮೂಡಲಗಿ-ಗುರ್ಲಾಪೂರ ಪುರಸಭೆ ಎಂದು ನಾಮಕರಣವಾಗಬೇಕು ಮತ್ತು ಟ್ರ್ಯಾಕ್ಟರ್‍ದಲ್ಲಿ ಟೇಪರೆಕಾರ್ಡರ್ ಅಳತೆ ಮೀರಿ ಹಚ್ಚುವುದರಿಂದ  ಎಲ್ಲ ವಯೋಮಾನದವರಿಗೆ ತೊಂದರೆಯಾಗುತ್ತಿದ್ದು, ಪೋಲಿಸ್ ಇಲಾಖೆಯವರು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ತಾಲೂಕಾ ಅಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚನ್ನನ್ನವರ, ಸಿ.ಡಿ.ಪಿ.ಓ. ಯಲ್ಲಪ್ಪ ಚಣ್ಣನ್ನವರ, ಆರೋಗ್ಯ ಅಧಿಕಾರಿ ಖಣದಾಳೆ, ತೋಟಗಾರಿಕಾ ಅಧಿಕಾರಿ ಜನ್ಮಟ್ಟಿ, ಹೆಸ್ಕಾಂ ಅಧಿಕಾರಿ ಎಮ್.ಎಸ್. ನಾಗನ್ನವರ, ಶಾಖಾಧಿಕಾರಿ ಪಿ.ಆರ್. ಎಡಳ್ಳಿ, ಪ.ಪಂ. ತಾಲೂಕಾ ಅಧಿಕಾರಿ ಆಸಂಗಿ, ಪೋಲಿಸ್ ಇಲಾಖೆ ಎ.ಎಸ್.ಆಯ್. ಎಮ್.ವಿ. ಮುರನಾಳ, ಸಾರಿಗೆ ನಿಯಂತ್ರಕ ಬಿ.ಬಿ. ದಂಡಾಪೂರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಸನಗೌಡ ಈಶ್ವರಪ್ಪಗೋಳ, ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ. ಪಾಟೀಲ, ಇಂಜೀನಿಯರ್ ಡಿ.ಬಿ. ಪಠಾಣ ಮಾತನಾಡಿ ಗ್ರಾಮಕ್ಕೆ ನಮ್ಮ ಇಲಾಖೆಯಿಂದ ಗ್ರಾಮ ವಾಸ್ತವ್ಯದ ಪರವಾಗಿ ಸಮಗ್ರ ಸಹಕಾರ ನೀಡಿ ಅಭಿವೃದ್ಧಿಗೆ ಸಹಕರಿಸುತ್ತೇವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಲೆಕ್ಕಾಧಿಕಾರಿ ಬಾಗವಾನ, ಆರ್.ಸಿ. ಸತ್ತಿಗೇರಿ, ರಮೇಶ ನೇಮಗೌಡರ, ಮಹಾದೇವ ಮುಕ್ಕುಂದ, ಶಿವಬಸು ಮುಗಳಖೋಡ ಮಹಾಲಿಂಗ ಹಂಚಿನಾಳ ಮಹಾದೇವ ಮರಾಠೆ, ಶಿವಾನಂದ ಹಿರೇಮಠ,ಪ್ರಕಾಶ ಸುಳ್ಳನ್ನವರ ಜಯಪ್ರಕಾಶ ಗಾಣಿಗೇರ, ಶಿವಬೋಧ ಪಾಲಬಾಂವಿ, ಮುತ್ತಪ್ಪ ಡವಳೇಶ್ವರ, ಲಕ್ಷ್ಮಣ ನೇಮಗೌಡರ, ಒಂಕಾರ ಮರಾಠೆ ,ಸುಶೀಲವ್ವಾ ಬೆಳವಿ, ಲಕ್ಷ್ಮೀ ಮುಗಳಖೋಡ, ಮಹಾದೇವಿ ಮುಗಳಖೋಡ ಹಾಗೂ ಎಲ್ಲಾ  ಇಲಾಖೆಯ ಸಿಬ್ಬಂದಿಗಳು ಮತ್ತು  ಸಾರ್ವಜನಿಕ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -

ಎಲ್ಲಾ ತಾಲೂಕಾ ಅಧಿಕಾರಿಗಳಿಗೆ ಲಕ್ಷ್ಮೀ ಪಿ.ಕೆ.ಪಿ.ಎಸ್. ಹಾಗೂ ಪಿ.ಕೆ.ಪಿ.ಎಸ್. ವತಿಯಿಂದ ಸನ್ಮಾನಿಸಲಾಯಿತು.

- Advertisement -
- Advertisement -

Latest News

ಅಂಕೋಲೆಯ ಉಪ್ಪಿನ ಸತ್ಯಾಗ್ರಹಕ್ಕೆ ತೊಂಬತ್ನಾಲ್ಕು ವರ್ಷ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಬಹು ವರ್ಣರಂಜಿತ. ಈ ಬೃಹತ್ ಚರಿತ್ರೆಯಲ್ಲಿ ಅಂಕೋಲೆಗೆ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಈ ಅಧ್ಯಾಯ ಒದಗಿ ಬಂದದ್ದು ಇಡೀ...
- Advertisement -

More Articles Like This

- Advertisement -
close
error: Content is protected !!
Join WhatsApp Group