ಆರ್ಎಸ್ಎಸ್ ಬ್ಯಾನ್ ಮಾಡಿ ಎನ್ನುವವರನ್ನೇ ಮೊದಲು ಬ್ಯಾನ್ ಮಾಡಬೇಕು – ಎನ್. ರವಿಕುಮಾರ್

Must Read

ಸಿದ್ಧರಾಮಯ್ಯ ಕಾಲದಲ್ಲೇ ಹೆಚ್ಚು ಭ್ರಷ್ಟಾಚಾರ – ಅರುಣ ಸಿಂಗ್

ಕಲಬುರ್ಗಿ – ದೇಶದಾದ್ಯಂತ PFI ಸಂಘಟನೆಯನ್ನು ಕೇಂದ್ರ ಸರ್ಕಾರ 5 ವರ್ಷ ನಿಷೇಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ BJP ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರ PFI ನಿಷೇಧಿಸಿದ್ದು ಸ್ವಾಗತಾರ್ಹ. PFI ಬ್ಯಾನ್ ಮಾಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ಧರು. ಅದು ಒಂದು ಟೆರರಿಸ್ಟ್ ಸಂಘಟನೆಯಾಗಿತ್ತು, ದೇಶದಲ್ಲಿ ವಿದ್ವಂಸಕ ಕೃತ್ಯ ಎಸಗಲು ಮುಂದಾಗಿತ್ತು ಎಂದರು.

PFI ಬ್ಯಾನ್ ಮಾಡಲು ಸರ್ಕಾರಕ್ಕೆ ಸಾಕಷ್ಟು ಪುರಾವೆ ಸಿಕ್ಕಿದ್ದವು.ಸಮಾಜದಲ್ಲಿ PFI ನಿಂದ ಶಾಂತಿ ಕದಡುವ ಕೆಲಸ, ದ್ವೇಷ ಹುಟ್ಟಿಸುವ ಕಾರ್ಯ ನಡೆದಿತ್ತು.ಆದರೆ SDPI ಒಂದು ರಾಜಕೀಯ ಪಕ್ಷ, ಅದು ರಾಜಕೀಯ ಕಾರ್ಯದಲ್ಲಿ ಮಗ್ನವಾಗಿದೆ ಆದರೆ ಕೆಲವರು ಆರ್‌ಎಸ್‌ಎಸ್ ಕೂಡ ಬ್ಯಾನ್ ಮಾಡಬೇಕು ಅನ್ನುವವರು ಅಜ್ಞಾನದ ಅಂಧಕಾರದಲ್ಲಿದ್ದಾರೆ. ಆರ್‌ಎಸ್‌ಎಸ್ ಥರ ಸಂಘಟನೆ ಕಟ್ಟಬೇಕು ಎಂದು ಅನೇಕ ದೇಶಗಳೇ ಮುಂದಾಗಿವೆ. ಆರ್ಎಸ್ಎಸ್ ಬ್ಯಾನ್ ಎನ್ನುವವರನ್ನೇ ಮೊದಲು ಬ್ಯಾನ್ ಮಾಡಬೇಕು ಎಂದರು.

ಇತ್ತ ಕಲಬುರ್ಗಿ ನಗರದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆಯೊಂದನ್ನು  ನೀಡಿದ್ದು, ಸಿದ್ದರಾಮಯ್ಯ ಕಾಲದಲ್ಲೇ ಹೆಚ್ಚು ಭ್ರಷ್ಟಾಚಾರ ನಡೆದಿದೆ. ನೂರು ಇಲಿ ತಿಂದು ಬೆಕ್ಕು ಹಜ್‌ಗೆ ಹೋಗಿತ್ತಂತೆ ಅನ್ನೋ ಹಾಗಿದೆ ಸಿದ್ದರಾಮಯ್ಯರ ಆರೋಪ.

ಸಿದ್ದರಾಮಯ್ಯ ಸರ್ಕಾರದಲ್ಲಿ ಬಡವರ ಆಹಾರ ಧಾನ್ಯ ಹಂಚಿಕೆ ಹಗರಣ, ಶಿಕ್ಷಕರ ನೇಮಕಾತಿ ಹಗರಣ ಸೇರಿದಂತೆ ಅನೇಕ ಹಗರಣಗಳು ನಡೆದಿವ ಸಿದ್ದರಾಮಯ್ಯ ಸರ್ಕಾರ ಹಗರಣಗಳ ಸರ್ಕಾರವಾಗಿತ್ತು ಎಂದು ಹೇಳಿದ್ದಾರೆ.

ಸಿಎಂ ಬೊಮ್ಮಾಯಿ, ಕಾಮನ್ ಮ್ಯಾನ್ ಆಗಿದ್ದಾರೆ. ಅವರು ಸಾಮಾನ್ಯ ವ್ಯಕ್ತಿಗಳನ್ನು ಪ್ರತಿನಿಧಿಸುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ರಾಜ್ಯದ ಗೌರವವನ್ನು ಹಾಳು ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ದೇಶದ ವಿವಿಧೆಡೆ ಕಾಂಗ್ರೆಸ್ ನಲ್ಲಿ ಜಗಳವಾಗುತ್ತಿವೆ. ಅದೇ ರೀತಿ ಕರ್ನಾಟಕ ದಲ್ಲಿ ಕೂಡಾ ಕಾಂಗ್ರೆಸ್ ನಾಯಕರ ನಡುವೆ ಜಗಳವಾಗುತ್ತದೆ. ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದು ಅರುಣ ಸಿಂಗ್ ಹೇಳಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group