ರಾಜಣ್ಣ ಹೇಳಿಕೆಗೆ ಪ್ರಚೋದನೆ ನೀಡಿದವರೆ ರಾಜಣ್ಣನ ಬೆಂಬಲಕ್ಕೆ ನಿಲ್ಲಲಿಲ್ಲ : ಈರಣ್ಣ ಕಡಾಡಿ

Must Read

ಘಟಪ್ರಭಾ:- ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳಲಿಕ್ಕೆ ಅವಕಾಶವಿರುವುದಿಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯ ಹೇಳಲಿಕ್ಕೆ ಅವಕಾಶ ನೀಡಬೇಕು.ಸಹಕಾರ ಸಚಿವ ರಾಜಣ್ಣನವರನ್ನು ಯಾವುದೇ ಕಾರಣ ನೀಡದೆ ರಾಜನಾಮೆಗೂ ಅವಕಾಶ ನೀಡದೆ ಸಂಪುಟದಿಂದ ವಜಾ ಮಾಡಿರುವುದು ಪರಿಶಿಷ್ಠ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಈ ಹಿಂದೆ ನಾಗೇಂದ್ರ ಅವರನ್ನು ಪರಿಶಿಷ್ಠ ಸಮುದಾಯದ ಹಣ ಲೂಟಿ ಮಾಡಿದ್ದಾರೆಂದು ಸಂಪುಟ ದಿಂದ ಕೈ ಬಿಡಲಾಗಿತ್ತು. ಆದರೆ ಲೂಟಿ ಮಾಡಿದ ಹಣವನ್ನು ಕಾಂಗ್ರೆಸ್ ಪಕ್ಷ ಚುನಾವಣೆಗೆ ಉಪಯೋಗಿಸಿ ಹಿಂದುಳಿದ ವರ್ಗದ ಸಚಿವರನ್ನು ಕೈ ಬಿಟ್ಟು ಎಸ್.ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಈ ಹಿಂದೆ ರಾಜಣ್ಣ ಸತ್ಯವನ್ನೆ ಪ್ರತಿಪಾದನೆ ಮಾಡಿದ್ದಾರೆ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಇರಬೇಕು, ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು, ನನ್ನನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನ್ನಾಗಿ ಮಾಡುವುದಾದರೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಇದೆಲ್ಲಾ ಕಾಂಗ್ರೆಸ್ ಪಕ್ಷದ ನಿರ್ಣಯವೇ ಆಗಿದೆ ಮುಖ್ಯವಾಗಿ ತೆರೆಯ ಹಿಂದೆ ಯಾರು ನಿಂತು ಇದನ್ನೆಲ್ಲಾವನ್ನು ರಾಜಣ್ಣನವರಿಂದ
ಹೇಳಿಸಿದ್ದಾರೋ ಅವರೆ ಇಂದು ರಾಜಣ್ಣನವರ ಬೆನ್ನಿಗೆ ನಿಲ್ಲದಿರುವುದು ಆ ಸಮುದಾಯದ ದುರ್ದೈವ ಎಂದು ಪರೋಕ್ಷವಾಗಿ ಸತೀಶ ಜಾರಕಿಹೊಳಿಯವರಿಗೆ ಅವರು ಟಾಂಗ್ ನೀಡಿದರು.

ಅವರು ಇಂದು ಘಟಪ್ರಭಾದ ರಾಘವೇಂದ್ರ ಮಠದಲ್ಲಿ ಸಂಸದರ ಸ್ಥಳೀಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ ಸಾಂಸ್ಕೃತಿ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿ ದೇಶವನ್ನು ಒಂದುಗೂಡಿಸುವ ವ್ಯವಸ್ಥೆ ಇರುವುದು ದೇವಸ್ಥಾನಗಳಲ್ಲಿ ಮಾತ್ರ ಏಕೆಂದರೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಜನರು ತೀರ್ಥಯಾತ್ರೆಗಾಗಿ ತೆರಳುತ್ತಾರೆ. ಇದರಿಂದ ದೇಶದ ಸಾಂಸ್ಕೃತಿಕ, ಧಾರ್ಮಿಕ ಶಕ್ತಿ ಹೆಚ್ಚಾಗುತ್ತದೆ ನಾವೆಲ್ಲರು ಒಂದೇ ಎನ್ನುವ ಭಾವನೆ ಬೆಳೆಯುತ್ತದೆ ಧಾರ್ಮಿಕ ಕೇಂದ್ರಗಳು ಹೆಚ್ಚಾಗಿ ಬೆಳೆಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀಕಾಂತ ಕುಲಕರ್ಣಿ, ಶ್ರೀಕಾಂತ ಮಹಾಜನ, ಪರಶುರಾಮ ಕಲಕುಟಗಿ, ರಾಜು ಕತ್ತಿ, ಅರುಣ ದೇಶಪಾಂಡೆ, ಮಹಾದೇವ ದೇಶಪಾಂಡೆ, ಮುರಳಿದರ ಜತ್ತಕರ್, ಸಂತೋಷ ದೇಶಪಾಂಡೆ, ರಘವೀರ ಪಾಟೀಲ, ರಾಘವೇಂದ್ರ ದೇಶಪಾಂಡೆ, ಮಹಾಂತೇಶ ಉದಗಟ್ಟಿಮಠ, ಆನಂದ ಪೂಜಾರಿ, ಭೀಮಶಿ ಬಂಗಾರಿ, ವಿಠ್ಠಲ ಹುಕ್ಕೇರಿ, ಡಾ. ವಿಲಾಸ ನಾಯಿಕವಾಡಿ, ಹಾಜರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group