ಬಿಂಜವಾಡಗಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ ತಿಮ್ಮಾಪುರ ಶಾಲೆಯ ಮಕ್ಕಳು

Must Read

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ತಿಮ್ಮಾಪೂರ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಮರಾವತಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆಂದು ಶಾಲೆಯ ಮುಖ್ಯ ಗುರುಮಾತೆ ಕೆ.ಎಚ್.ಬೆಲ್ಲದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಧನೆ ಮಾಡಿದ ವಿದ್ಯಾರ್ಥಿ ವಿದ್ಯಾರ್ಥಿನಿಯರ ವಿವರ ಈ ಕೆಳಗಿನಂತಿದೆ

ಬಾಲಕಿಯರ ವಿಭಾಗದಲ್ಲಿ ರಿಲೇ-ಪ್ರಥಮ ಸ್ಥಾನ

100-ಮೀ ರನ್ನಿಂಗ್ ಪ್ರಥಮ(ಲಕ್ಷ್ಮೀ ರಾಮಪ್ಪ ಮಾದರ)
200- ಮೀಟರ್ ರನ್ನಿಂಗ್ ಪ್ರಥಮ ( ಪ್ರಿಯಾಂಕ ಮಾದರ)
400-ಮೀಟರ್ ರನ್ನಿಂಗ್ ದ್ವಿತೀಯ (ಸ್ನೇಹಾ ಮಡಿವಾಳರ)
600- ಮೀಟರ್ ರನ್ನಿಂಗ್ ಪ್ರಥಮ & ದ್ವಿತೀಯ (ಲಕ್ಷ್ಮೀ ಮಾದರ& ಸ್ನೇಹಾ ಮಡಿವಾಳರ)
ಉದ್ದ ಜಿಗಿತ- ದ್ವಿತೀಯ (ಲಕ್ಷ್ಮೀ ಮಾದರ) ಇವರುಗಳು ಸಾಧನೆ ಮಾಡಿದ್ದಾರೆ.

ಬಾಲಕರ ವಿಭಾಗ ದಲ್ಲಿ  4×100 ರಿಲೇ ದ್ವಿತೀಯ

200 -ರನ್ನಿಂಗ್ ದ್ವಿತೀಯ ( ಸಾಗರ ತಳವಾರ)
400- ಮೀಟರ್ ರನ್ನಿಂಗ್ ದ್ವಿತೀಯ (ಸಾಗರ ತಳವಾರ)
ಉದ್ದ ಜಿಗಿತ- ದ್ವಿತೀಯ( ಅಜಯ ಮಾದರ)
ಎತ್ತರ ಜಿಗಿತ-ದ್ವಿತೀಯ( ಅಜಯ ಮಾದರ)
ಹೀಗೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದ ಬಾಲಕ ಹಾಗೂ ಬಾಲಕಿಯರನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಹನುಮಂತ ಚಲವಾದಿ ಉಪಾಧ್ಯಕ್ಷೆ ಶ್ರೀಮತಿ ರೂಪಾ ಮಡಿವಾಳರ ಹಾಗೂ ಸದಸ್ಯರು,ಮುಖ್ಯ ಗುರುಮಾತೆಯರಾದ ಕೆ ಹೆಚ್ ಬೆಲ್ಲದ ಹಾಗೂ ಸಹ ಶಿಕ್ಷಕರಾದ ಶ್ರೀಮಂಜುನಾಥ್ ಟಕ್ಕಳಕಿ,ಬಿ.ಎಸ್. ತೋಟಗೇರ, ಶ್ರೀಮತಿ ಕೆ.ಕೆ.ಮಿಚನಾಳ,ಶ್ರೀಮತಿ ಶಾರದಾ ಹೂಲಗೇರಿ, ಶ್ರೀಮತಿ ಎಂ.ಬಿ.ಮನಿಯಾರ,ಶ್ರೀಮತಿ ಗೀತಾ ತಾರಿವಾಳ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಸೇರಿದಂತೆ ತಿಮ್ಮಾಪುರದ ಗ್ರಾಮಸ್ಥರು ಅಭಿನಂದಿಸಿದ್ದಾರೆ.

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group