ಇಂದು ಹುಣ್ಣಿಮೆ: ಇದರ ವಿಶೇಷ ತಿಳಿಯಿರಿ

0
310

ಹಿಂದೂ ಧರ್ಮದಲ್ಲಿ ಚೈತ್ರ ಮಾಸದ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಈ ಬಾರಿ ಚೈತ್ರ ಪೂರ್ಣಿಮೆ ಏಪ್ರಿಲ್ 16 ರಂದು ಬಂದಿದೆ. ಈ ಚೈತ್ರ ಪೂರ್ಣಿಮೆಯ ದಿನದಂದು ಲಕ್ಷ್ಮಿಯನ್ನು ಆರಾಧಿಸುವ ಮೂಲಕ ಕೆಲವು ವಿಶೇಷ ಆಶೀರ್ವಾದ ಪಡೆಯಬಹುದು.

 ಚೈತ್ರ ಪೂರ್ಣಿಮಾ ವ್ರತ:

ಈ ಬಾರಿ ಚೈತ್ರ ಪೂರ್ಣಿಮೆಯ ದಿನವದಂದೇ ಹನುಮ ಜಯಂತಿ ಬಂದಿದೆ. ಈ ದಿನ ಆಂಜನೇಯನ ವಿಶೇಷವಾಗಿ ಪೂಜಿಸುವುದರಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದು. ಈ ದಿನ ಓಂ ನಮೋ ಭಗವತೇ ಹನುಮಂತೇ ನಮಃ ಎಂಬ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಬೇಕು. ಇದರಿಂದ ಸಂಸಾರದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಚೈತ್ರ ಪೂರ್ಣಿಮೆಯಂದು ಲಕ್ಷ್ಮಿ ದೇವಿಯನ್ನು ವಿಶೇಷವಾಗಿ ಆರಾಧಿಸುವುದರಿಂದ ಮನೆಯ ಆರ್ಧಿಕ ಸಮಸ್ಯೆ ಪರಿಹಾರಗೊಳ್ಳಲಿದೆ

ಚೈತ್ರ ಪೂರ್ಣಿಮೆಯ ರಾತ್ರಿ ಚಂದ್ರೋದಯದ ಸಮಯದಲ್ಲಿ, ಹಾಲಿನೊಂದಿಗೆ ಅಕ್ಕಿ ಬೆರೆಸಿ ಮತ್ತು ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ. ಈ ವೇಳೆ ‘ಓಂ ಸ್ರಂಶ್ರೀಂ ಸ್ರೋಂ ಸ: ಚಂದ್ರಮಸ್ಸೇ ನಮಃ’ ಅಥವಾ ‘ಓಂ ಐಂ ಕ್ಲೀಂ ಸೋಮೇ ನಮಃ’ ಎಂಬ ಮಂತ್ರವನ್ನು ಪಠಿಸಿ. ಇದರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಹುಣ್ಣಿಮೆಯ ದಿನದಂದು ಲಕ್ಷ್ಮಿ ದೇವಿಯು ಅರಳಿ ಮರದಲ್ಲಿ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಈ ದಿನದಂದು ಸ್ನಾನದ ನಂತರ, ದೇವರಿಗೆ ಸಿಹಿತಿಂಡಿಯನ್ನು ಅರ್ಪಿಸಿ ಮರಕ್ಕೂ ನೈವೇದ್ಯ ಇಡಿ. ಇದರಿಂದಾಗಿ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ವೈವಾಹಿಕ ಜೀವನ ಸುಖಮಯವಾಗಿರಲು ಹುಣ್ಣಿಮೆಯ ತಿಥಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಗಂಡ ಮತ್ತು ಹೆಂಡತಿ ಒಟ್ಟಿಗೆ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿದರೆ, ಅವರ ದಾಂಪತ್ಯ ಜೀವನದಲ್ಲಿ ಸುಖ ಇರಲಿದೆ.

ಪೂಜಾ ವಿಧಿ ಮತ್ತು ಸಾಮಗ್ರಿಗಳು:

ಚೈತ್ರ ಪೂರ್ಣಿಮೆಯ ದಿನದಂದು ನೀವು ಲಕ್ಷ್ಮಿ ಜೊತೆಗೆ ಗಣೇಶನ ಪೂಜಿಸುವುದರಿಂದ ಹಣದ ಸ್ಥಿರತೆ ಮೂಡಲಿದೆ. ಈ ದಿನ ಲಕ್ಷ್ಮಿಯನ್ನು ಕಮಲದ ಹೂವು ಅಥವಾ ಕೆಂಪು ಗುಲಾಬಿಯಿಂದ ಪೂಜಿಸಬೇಕು. ಜೊತೆಗೆ ವೀಳ್ಯದೆಲೆಯನ್ನು ಅರ್ಪಿಸಿ. ಇದರಿಂದ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387