ಇಂದು ವೈಶಾಖ ಶುದ್ದ ಪಂಚಮಿ‌ ಶ್ರೀ ಆದಿ ಶಂಕರಾಚಾರ್ಯರ ಜಯಂತಿ

Must Read

ಶ್ರೀ ಶಂಕರಾಚಾರ್ಯರು ಜನಿಸಿದ ದಿನ ವೈಶಾಖ ಶುಕ್ಲ ಪಂಚಮಿಯ ದಿನವಾದ್ದರಿಂದ ಪ್ರತೀ ವರ್ಷ ಇದೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿ 06/05/2022 ರಂದು ಶ್ರೀ ಆದಿ ಶಂಕರಾಚಾರ್ಯರ ಜಯಂತಿಯನ್ನು ಆಚರಿಸಲಾಗುತ್ತದೆ.

ಶ್ರೀ ಆದಿ ಶಂಕರಾಚಾರ್ಯರು ಕೇರಳದ ಕಾಲಟಿ ಎಂಬ ಹಳ್ಳಿಯಲ್ಲಿ ಬ್ರಾಹ್ಮಣ ದಂಪತಿಗೆ ಜನಿಸಿದರು. ಅವರು ಕೇವಲ 32 ವರ್ಷ ವಯಸ್ಸಿನವರಾಗಿದ್ದಾಗ ನಿಧನರಾದರು. ಅವರು ಜೀವಿಸಿದ ಅಲ್ಪಾವಧಿಯಲ್ಲೆ ಅವರು ನೀಡಿದ ಕೊಡುಗೆ ಅಪಾರವಾದದ್ದು..

ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ಶ್ರೇಷ್ಠ ಮಹಾಪುರಷರೆಂದು ಗುರುತಿಸಲ್ಪಟ್ಟವರಲ್ಲಿ ಶ್ರೀ ಶಂಕರಾಚಾರ್ಯರು ಪ್ರಮುಖರು. ಪ್ರಾಚೀನ ಕಾಲದ ಸಂರ್ಭದಲ್ಲಿ ಪ್ರಯಾಣ ಎಂಬುದು ಕಷ್ಟಕರವಾಗಿತ್ತು. ಆ ಪರಿಸ್ಥಿತಿಯಲ್ಲಿಯೇ ದೇಶಾದ್ಯಂತ ಸಂಚರಿಸಿ ಜನಮನ ಗೆದ್ದರು. ಸನಾತನ ಧರ್ಮ ಮತ್ತು ರಾಷ್ಟ್ರೀಯ ಏಕತೆಗೆ ಭಾರೀ ಅಪಾಯ ಬಂದಿದ್ದ ಕಾಲಘಟ್ಟದಲ್ಲಿ ಹಾಗೂ ಅಂತಹ ದುಃಸ್ಥಿತಿಯ ಸಂದರ್ಭದಲ್ಲಿ ದೇಶವನ್ನು ಸಂರಕ್ಷಿಸಿ, ಧರ್ಮ ಸಂಸ್ಥಾಪನೆ ಮಾಡಲು ಪರಮೆಶ್ವರನೇ ಧರೆಗಿಳಿದು ಬರಬೇಕಾಯಿತು. ಅಂತಹ ಪರಮಾವತಾರವೇ ಶ್ರೀಶಂಕರರು.

ಶ್ರೀ ಆದಿ ಶಂಕರಾಚಾರ್ಯರು ಒಬ್ಬ ಮಹಾನ್ ದಾರ್ಶನಿಕನಲ್ಲದೆ, ಅವರು ಒಬ್ಬ ಮಹಾನ್ ಕವಿಯೂ ಆಗಿದ್ದರು ಮತ್ತು ಅವರ ಜೀವಿತಾವಧಿಯಲ್ಲಿ ಹಲವಾರು ಭಕ್ತಿ ಪ್ರಾರ್ಥನೆಗಳನ್ನು ರಚಿಸಿದರು. ಸೌಂದರ್ಯ ಲಹರಿ, ನಿರ್ವಾಣ ಶಾಲ್ಕಂ ಮತ್ತು ಶಿವಾನಂದ ಲಹರಿ ಅವರ ಗಮನಾರ್ಹ ಸಂಯೋಜನೆಗಳಾಗಿವೆ. ಅಷ್ಟೇ ಅಲ್ಲ, ಆದಿ ಶಂಕರರು ಉಪನಿಷತ್ತುಗಳ, ಭಗವದ್ಗೀತೆ ಮತ್ತು ಬ್ರಹ್ಮ ಸೂತ್ರಗಳ ಬಗ್ಗೆ ತಮ್ಮ ತಿಳಿವಳಿಕೆಯನ್ನು ಬರೆದಿದ್ದಾರೆ. ದ್ವಾರಕಾ, ಕಾಶ್ಮೀರ, ಶೃಂಗೇರಿ ಮತ್ತು ಪುರಿಯಲ್ಲಿ ನೆಲೆಗೊಂಡಿರುವ ಪ್ರಮುಖ ಮಠಗಳನ್ನು ಭಾರತದಲ್ಲಿ ನಿರ್ಮಿಸಿದ ಕೀರ್ತಿ ಶ್ರೀ ಶಂಕರಾಚಾರ್ಯರಿಗೆ ಸಲ್ಲುತ್ತದೆ.

ನಾವೆಲ್ಲರೂ ಶ್ರೀ ಆದಿ ಶಂಕರಚಾರ್ಯರ ಜಯಂತಿಯನ್ನು ಶ್ರಧ ಭಕ್ತಿಯಿಂದ ಆಚರಿಸೋಣ.


ಹರ-ಲೀಲಾವತಾರಾಯ ಶಂಕರಾಯ ಪರೌಜಸೇ|
ಕೈವಲ್ಯ ಕಲನಾ ಕಲ್ಪತರವೇ ಗುರವೇ ನಮಃ||
ವಕ್ತಾರಮಾಸಾದ್ಯ ಯಮೇವ ನಿತ್ಯಾ ಸರಸ್ವತೀ ಸ್ವಾರ್ಥಸಮನ್ವಿತಾ ಸೀತ್||
ನಿರಸ್ತ ದುಸ್ತರ್ಕ ಕಳಂಕಪಂಕಂ ನಮಾಮಿ ತಂ ಶಂಕರಮರ್ಚಿತಾಂಘ್ರಿ||
ಶ್ರುತಿ-ಸ್ಮೃತಿ-ಪುರಾಣಾನಾಂ ಆಲಯಂ ಕರುಣಾಲಯಂ|
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ||

ಶ್ರೀ ಶಂಕರಾಚಾರ್ಯ ವರ್ಯಂ

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group