Homeಸುದ್ದಿಗಳುಚನ್ನಮಲ್ಲಪ್ಪ ದೇಗಿನಾಳ ಅವರಿಗೆ ಶೃದ್ಧಾಂಜಲಿ

ಚನ್ನಮಲ್ಲಪ್ಪ ದೇಗಿನಾಳ ಅವರಿಗೆ ಶೃದ್ಧಾಂಜಲಿ

ಸಿಂದಗಿ: ಇಂಡಿ ತಾಲೂಕಿನ ಜೆಡಿಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಚನ್ನಮಲ್ಲಪ್ಪ ದೇಗಿನಾಳ ಅವರು ಬೆಂಗಳೂರಿನಲ್ಲಿ ಹೃದಯಘಾತದಿಂದ ನಿಧನರಾಗಿದ್ದು ಜೆಪಿ ಭವನದ ಜೆಡಿಎಸ್ ಪಕ್ಷದ ಕಾರ್ಯಲಯದಲ್ಲಿ ಜನನಾಯಕ ಬಿ.ಡಿ.ಪಾಟೀಲ, ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಹಂಗರಗಿ ಇವರು ಚನ್ನಮಲ್ಲಪ್ಪ ದೇಗಿನಾಳ ಅವರಿಗೆ ಶೃದ್ಧಾಂಜಲಿ ಸಲ್ಲಿಸಿ ಆತ್ಮಕ್ಕೆ ಶಾಂತಿ ಕೋರಿದರು.

ಈ ಸಮಯದಲ್ಲಿ ಮಾತನಾಡಿ, 2018 ರ ಸಾರ್ವತ್ರಿಕ ಚುನಾವಣೆಯಿಂದ ಬಹಳ ಸಕ್ರಿಯವಾಗಿ ಪಕ್ಷದ ಚಟುವಟಕೆಯಲ್ಲಿ ತೊಡಗಿದ್ದರು ಅಂತೆಯೇ ಪಕ್ಷದ ಅಭ್ಯರ್ಥಿ ಯಾಗಿ 2ನೇ ಸ್ಥಾನದಲ್ಲಿ ಮತ ಪಡೆದುಕೊಂಡಿದ್ದರು ಇಂತಹ ಮೆಧಾವಿ ರಾಜಕಾರಣಿಯ ಅಗಲಿಕೆಯಿಂದ ಪಕ್ಷಕ್ಕೆ ತುಂಬಲಾರದ ನಷ್ಟ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಹಾಗೂ ವಿಜಯಪುರ ಜಿಲ್ಲೆಯ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group