ಇಂದಿನ ಸಮಾಜ ಜ್ಞಾನಕ್ಕೆ ಹೆಚ್ಚು ಮಹತ್ವ ಕೊಡುತ್ತದೆ – ಲ.ಎಸ್ ಎಸ್ ಪಾಟೀಲ

Must Read

ಸಿಂದಗಿ: ಸತತ ಅಧ್ಯಯನ ಮತ್ತು ಪರಿಶ್ರಮದಿಂದಲೇ ಬದುಕು ಯಶಸ್ವಿಯಾಗುತ್ತದೆ. ಇಂದಿನ ಸಮಾಜ ಜ್ಞಾನಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಲಯನ್ ಎಸ್.ಎಸ್. ಪಾಟೀಲ ಹೇಳಿದರು.

ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಲಾಯನ್ಸ್ ಕ್ಲಬ್ ಸಿಂದಗಿ ಹಾಗೂ ಮಾತೋಶ್ರೀ ಗುರುಬಸಮ್ಮ ಹ. ಸೋಮಾಪುರ ಸೇವಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೆ.ಎಚ್. ಸೋಮಾಪುರರವರ ಕೃತಿಗಳ ಉಚಿತ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮೊಬೈಲ್ ಸಂಸ್ಕೃತಿ ವಿಜೃಂಭಿಸುತ್ತಿರುವ ಇಂದಿನ ಕಾಲದಲ್ಲಿ ಪುಸ್ತಕ ಸಂಸ್ಕೃತಿ ಹಿಂದುಳಿಯುತ್ತಿರುವುದು ದೇಶಕ್ಕೆ ಮಾರಕವೆಂದು ವಿಷಾದ ವ್ಯಕ್ತಪಡಿಸಿದರು.

ನಿವೃತ್ತ ಪ್ರಾಧ್ಯಾಪಕ ಶಾಂತು ಹಿರೇಮಠ ಮಾತನಾಡಿ, ಪುಸ್ತಕ ಓದುವುದರಿಂದ ನೆಮ್ಮದಿ, ಆತ್ಮಸ್ಥೈರ್ಯ, ವಿಶ್ವಾಸ, ಸಾಧನೆಯ ಗುರಿ ಹಾಗೂ ಸಮಾಜಮುಖಿ ಬದುಕು ಮೂಡುತ್ತದೆ. ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕುಗ್ಗುತ್ತಿರುವುದು ದೊಡ್ಡ ದುರಂತ. ಓದು ಬದುಕನ್ನು ಬೆಳಗಿಸುವ ಶಕ್ತಿ ಹೊಂದಿದೆ. ಸುಮಾರು ಹತ್ತು ಕೃತಿಗಳ ಸಂಪಾದಕರಾಗಿರುವ ಕೆ.ಎಚ್. ಸೋಮಾಪುರರು ದೈಹಿಕ ಉಪನ್ಯಾಸಕರಾಗಿದ್ದರೂ ಸಾಹಿತ್ಯ ಲೋಕದಲ್ಲಿ ಸಮಗ್ರ ಅಧ್ಯಯನ ಮಾಡಿ ಅನೇಕ ಕೃತಿಗಳನ್ನು ನೀಡಿದ್ದಾರೆ. ಇವುಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವ ಕಾರ್ಯ ಶ್ಲಾಘನೀಯ ಎಂದರು.

ಜಿ.ಪಿ. ಪೋರವಾಲ ಕಲಾ ಮಹಾವಿದ್ಯಾಲಯದ ದೈಹಿಕ ನಿರ್ದೇಶಕರಾದ ಡಾ. ರವಿ ಗೋಲಾ ಮಾತನಾಡಿ, ಶಿಕ್ಷಕ ವೃತ್ತಿ ಪಾವನ ವೃತ್ತಿ. ಶಿಕ್ಷಕರು ಕೇವಲ ಪಠ್ಯ ವಿಷಯಗಳಲ್ಲದೆ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡು ನಿರಂತರ ಅಧ್ಯಯನ ಶೀಲರಾಗಬೇಕು ಎಂದರು.

ಈ ವೇಳೆ ಕೃತಿಯ ಕರ್ತೃ ಕೆ.ಎಚ್. ಸೋಮಾಪುರ, ಆರ್.ಡಿ. ಪಾಟೀಲ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಎಂ. ಸಿಂಗನಹಳ್ಳಿ, ಮಹಾವಿದ್ಯಾಲಯದ ಪ್ರಾಚಾರ್ಯ ಜೆ.ಸಿ. ನಂದಿಕೋಲ ಮಾತನಾಡಿದರು.

ಕಾರ್ಯಕ್ರಮದಲ್ಲಿ ಐ.ಬಿ. ಬಿರಾದಾರ, ಪಿ.ಎಂ. ಮಡಿವಾಳರ, ಎಸ್.ಬಿ. ಚಾಕಶೆಟ್ಟಿ, ಎನ್.ಬಿ. ಪೂಜಾರಿ, ಡಾ. ಶರಣಬಸವ ಜೋಗುರ, ಡಾ. ಅಂಬರೀಶ ಬಿರಾದಾರ, ಶರಣು ಬೂದಿಹಾಳ, ಸುಧಾಕರ ಚವ್ಹಾಣ,ಪ್ರಶಾಂತ ಕುಲಕರ್ಣಿ, ಭಾಗ್ಯಜ್ಯೋತಿ ದಸ್ಮಾ, ಚನ್ನು ಕತ್ತಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಭುವನೇಶ್ವರಿ ನಾವದಗಿ ನಿರೂಪಿಸಿದರು. ದಾನಯ್ಯ ಮಠಪತಿ ಸ್ವಾಗತಿಸಿದರು. ಆರ್.ಏ. ಹಾಲಕೇರಿ ವಂದಿಸಿದರು

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group