ಇದು ಖಾಕಿ ಕಿರಾತಕನ ಡಿ-ಬಾಸ್ ಸ್ಟೈಲ್ ಟಾರ್ಚರ್..!
ಬೀದರ – ಇದ್ರೆ ನೆಮ್ಮದಿಯಾಗಿರಬೇಕು ಸೂ…ಮು…ಮಗಳೇ ಎಂದು ದರ್ಶನ್ ಡೈಲಾಗ್ ಹೊಡೆಯುತ್ತ ವರದಕ್ಷಿಣೆಗೆ ಡಿಮ್ಯಾಂಡ್ ಮಾಡುತ್ತ, ಮಕ್ಕಳಾಗ್ತಿಲ್ಲ ಎಂದು ಪತ್ನಿಯ ಮೇಲೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಪೊಲೀಸಪ್ಪನ ಕತೆಯಿದು.
ಮದುವೆಗೆ 30 ಲಕ್ಷ ಖರ್ಚು ಮಾಡಿದ್ರೂ ತೀರದ ದಾಹ, ಮತ್ತೆ ಹಣಕ್ಕಾಗಿ ಪೀಡನೆ ಕೊನೆಗೆ ಬೇಸತ್ತು ಪತಿ ಮಚೇಂದ್ರ ವಿರುದ್ಧ ಪತ್ನಿ ಸೀನಾ ಆರೋಪ ಮಾಡಿದ್ದು ಬೀದರ್ ಜಿಲ್ಲೆ ಚಿಟಗುಪ್ಪ ಮೂಲದ ಪೊಲೀಸ್ ಕಾನ್ಸ್‌ಟೇಬಲ್ ಮಚೇಂದ್ರ ವಿರುದ್ಧ ದೂರು ದಾಖಲಾಗಿದೆ.
ಮಚೇಂದ್ರ ಬೆಂಗಳೂರಿನ ಮೈಕೋ ಲೇಔಟ್ ಟ್ರಾಫಿಕ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಔರಾದ್ ತಾಲೂಕಿನ ಸೀನಾ ಹಾಗೂ ಚಿಟಗುಪ್ಪ ಮೂಲದ ಮಚೇಂದ್ರನಿಗೆ ಡಿ.14, 2022 ರಂದು ಮದುವೆಯಾಗಿದೆ. ಪತಿ-ಪತ್ನಿ ಸುಮಾರು 19 ತಿಂಗಳ ಕಾಲ ಬೆಂಗಳೂರಿನಲ್ಲಿ ಸುಖ ಸಂಸಾರ ಮಾಡಿದ್ದಾರೆ. ನಂತರ ಪತ್ನಿ ಸೀನಾ ಹಾಗೂ ಪತಿ ಮಚೇಂದ್ರನ ನಡುವೆ ವರದಕ್ಷಿಣೆ ಹಾಗೂ ಮಕ್ಕಳಾಗದ್ದಕ್ಕೆ ಸಂಘರ್ಷ ಉಂಟಾಗಿದೆ.ಆಗ ಪತಿ ಮಚೇಂದ್ರ ಹುಷಾರಿಲ್ಲ ಅಂತ ಪತ್ನಿ ಸೀನಾಳನ್ನು ತವರುಮನೆಯಲ್ಲಿಯೇ ಬಿಟ್ಟಿದ್ದಾನೆ. ಸುಮಾರು 15 ತಿಂಗಳು ಕಳೆದ್ರು ಪತ್ನಿ ಸೀನಾಳನ್ನು ವಾಪಸ್ ಕರೆದುಕೊಂಡೆ ಹೋಗಿಲ್ಲ. ವರದಕ್ಷಿಣೆ ಕೊಡಿ, ಆಗ ಮಾತ್ರ ವಾಪಸ್ ಕರೆದುಕೊಂಡು ಹೋಗ್ತಿನಿ ಅಂತ ಹೇಳಿರುವ ಆರೋಪ ಎದುರಿಸುತ್ತಿದ್ದಾನೆ.
ಮಚೇಂದ್ರ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆಗೆ ನಿತ್ಯವೂ ಟಾರ್ಚರ್ ನೀಡುತ್ತಿದ್ದರು ಜೊತೆಗೆ ಪತಿ ಮಚೇಂದ್ರ ಅಶ್ಲೀಲವಾಗಿ ಮೆಸೇಜ್ ಮಾಡಿ ಮಾನಸಿಕ ಹಿಂಸೆ, ಜೀವ ಬೆದರಿಕೆ ಹಾಕಿದ್ದಾನೆ. ಇದಲ್ಲದೇ ಪತ್ನಿ ಸೀನಾಳಿಗೆ ಡೈವೋರ್ಸ್ ಕೊಟ್ಟು, ಮಚೇಂದ್ರನಿಗೆ ಅಕ್ಕನ ಮಗಳ ಜೊತೆ ಮದುವೆಗೆ ಪ್ಲಾನ್ ಮಾಡಿರುವ ಆರೋಪ ಇದೆ.
ಆದರೆ ವರದಕ್ಷಿಣೆ ಕಿರುಕುಳದ ಬಗ್ಗೆ ದೂರು ನೀಡಿದರೂ, ಪೊಲೀಸರು ದೂರು ಸ್ವೀಕರಿಸಲಿಲ್ಲ ಎನ್ನಲಾಗಿದೆ. ಈಗಾಗಲೇ 26 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿದ್ದೇವೆ. ಮದುವೆಯ 30 ಲಕ್ಷ ರೂ. ಸಾಲ ಹಾಗೆ ಇದೆ, ಈಗ ಮತ್ತೆ ವರದಕ್ಷಿಣೆ ಕೇಳ್ತಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ಕೇಸ್ ದಾಖಲಿಸುತ್ತಿಲ್ಲ, ನಮಗೆ ನ್ಯಾಯ ಕೊಡಿ ರಕ್ಷಣೆ ನೀಡಿ ಎಂದು ಸಂತ್ರಸ್ತೆ ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ

