ಕಾಯಿಪಲ್ಯ ಮಾರಾಟಗಾರರು ರಸ್ತೆಯ ಎರಡೂ ಬದಿಯಲ್ಲಿ ಕೂರುವದರಿಂದ ಗ್ರಾಹಕರು ಹಾಗೂ ದ್ವಿಚಕ್ರ ವಾಹನದವರು ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವುದರಿಂದ ರಸ್ತೆ ಬ್ಲಾಕ್ ಆಗುತ್ತದೆ ಇದರಿಂದ ಜನರಲ್ಲಿ ಜಗಳಗಳೂ ಆಗಿವೆ.
ಶಾಲಾ ಪ್ರಾರಂಭ ದಿನಗಳಲ್ಲಿ ಶಾಲಾ ವಾಹನ ಮತ್ತು ಖಾಸಗಿ ವಾಹನಗಳು, ಮತ್ತು ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗುತ್ತವೆ. ಬೆಳೆಯುತ್ತಿರುವ ನಗರದ ಟ್ರಾಫಿಕ್ ನಿಭಾಯಿಸಬೇಕಾದ ಪುರಸಭೆಯವರು ಕಣ್ಣು ಮುಚ್ಚಿರುವುದರಿಂದ ಇಂಥ ಆಭಾಸ ಉಂಟಾಗಿದ್ದು ನಗರಕ್ಕೆ ಕಳಂಕ ತರುತ್ತಿದೆ.
ರಸ್ತೆ ಬದಿಯಲ್ಲಿ ಕಾಯಿಪಲ್ಯ ಮಾರುವವರನ್ನು ಸುರಕ್ಷಿತ
ಸ್ಥಳಕ್ಕೆ ಸ್ಥಳಾಂತರ ಮಾಡಬೇಕು, ದ್ವಿಚಕ್ರ ವಾಹನ ಸವಾರರು ನೀಟಾಗಿ ಒಂದು ಪಕ್ಕದಲ್ಲಿ ವಾಹನ ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು, ಶಾಲಾ ವಾಹನಗಳು ಸಮಯಕ್ಕೆ ಸರಿಯಾಗಿ ಹೋಗಬೇಕಾಗಿರುವುದರಿಂದ ಅವುಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಇವೇ ಮುಂತಾದ ಕ್ರಮಗಳಿಂದ ಪುರಸಭೆಯವರು ಕಾಯಿಪಲ್ಯ ಮಾರ್ಕೇಟಿನ ಟ್ರಾಫಿಕ್ ಸಮಸ್ಯೆ ನಿವಾರಿಸಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.