ಕರ್ನಾಟಕ ಸರ್ಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ISRA ಸಿಬ್ಬಂದಿಗಳ ಪಾತ್ರ ಹಾಗೂ ಜವಾಬ್ದಾರಿಗಳ ಕುರಿತು ಎರಡು ದಿನಗಳ ತರಬೇತಿ ಕಾರ್ಯಗಾರ ದಿನಾಂಕ 30 ಹಾಗೂ 01-10-2022 ರಂದು ಲಾರ್ಡ್ ಇಕೋ ಇನ್ ಹೋಟೆಲ್ ಬೆಳಗಾವಿ ಯಲ್ಲಿ ಜರುಗಿತು.
ಕಾರ್ಯಗಾರದ ಉದ್ಘಾಟನೆಯನ್ನು ಶ್ರೀಮತಿ ಶೀತಲ್ ಸಿಂಗ್ ಮಾನ್ಯ ನಿರ್ದೇಶಕರು ISA ಬೆಂಗಳೂರು ನೆರವೇರಿಸಿ ಜಲಜೀವನ್ ಮಿಷನ್ ಯೋಜನೆ ಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗಳು ತಮ್ಮ ಪಾತ್ರ ಜವಾಬ್ದಾರಿ ಅರಿತು, ನೀರಿನ ಸಂರಕ್ಷಣೆ, ಸಮುದಾಯವಂತಿಕೆ ಸಂಗ್ರಹಣೆ ಹಾಗೂ ನೈರ್ಮಲ್ಯದ ಕುರಿತು ಜನರ ಮನೋಭಾವದಲ್ಲಿ ಬದಲಾವಣೆ ತಂದು ಸಮುದಾಯ ಸಜ್ಜುಗೊಳಿಸುವಿಕೆಯ ಕೆಲಸ ಮಾಡಬೇಕೆಂದು ಸಿಬ್ಬಂದಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎ ಎಸ್ ಬಣಗಾರ ಕಾರ್ಯನಿರ್ವಾಹಕ ಅಭಿಯಂತರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗ ಮಾತನಾಡಿ, ಜಲಜೀವನ್ ಮಿಷನ್ ಯೋಜನೆ ಯಶಸ್ವಿಗೆ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಮೂಲಕ ಆಧಾರ್ ಕಾರ್ಡ ಸಂಗ್ರಹಣೆ, ಹರ್ ಘರ್ ಜಲ್ ಗ್ರಾಮ ಸಭೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಶಿಕಾಂತ ನಾಯಕ ಕಾರ್ಯನಿರ್ವಾಹಕ ಅಭಿಯಂತರು,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಳಗಾವಿ ವಿಭಾಗ ಮಾತನಾಡಿ, ಜಲಜೀವನ್ ಮಿಷನ್ ಯೋಜನೆ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಅನುಷ್ಠಾನ ಸಂಸ್ಥೆಗಳ ಸಿಬ್ಬಂದಿಗಳ ಪಾತ್ರ ಬಹಳ ಪ್ರಮುಖವಾಗಿದ್ದು, ಎರಡು ದಿನದ ತರಬೇತಿಯಲ್ಲಿ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಎಲ್ಲಾ ಮಾಹಿತಿಯನ್ನು ಪಡೆದುಕೊಂಡು ಯೋಜನೆ ಯಶಸ್ವಿಗೆ ಪೂರಕವಾಗಿ ಎಲ್ಲರೂ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಜಗದೀಶ್ ಸಿ ಎಚ್ ಆರ್ ಡಿ ರಾಜ್ಯ ಸಮಾಲೋಚಕರು, ವಿ ಎಚ್ ರಾಮಾಂಜನೇಯ ಐ ಇ ಸಿ ರಾಜ್ಯಸಮಾಲೋಚಕರು. ಶ್ರೀಮತಿ ನಿತೀಶಾ ಸಾದಿಯ WQMIS ರಾಜ್ಯ ಸಮಾಲೋಚಕರು, ಜೋಸೆಫ್ ರೆಬೆಲೊ ಸಂಪನ್ಮೂಲ ವ್ಯಕ್ತಿಗಳು, ಶ್ರೀಮತಿ ನೀಲಮ್ಮ ಕಮತೇ ಜಿಲ್ಲಾ ಯೋಜನಾ ವ್ಯವಸ್ಥಾಪಕರು ಬೆಳಗಾವಿ ವಿಭಾಗ ಶ್ರೀಮತಿ ಮಂಜುಳಾ ಜಿಲ್ಲಾ ಯೋಜನೆ ವ್ಯವಸ್ಥಾಪಕರು ಧಾರವಾಡ ಜಿಲ್ಲೆ, ಬೆಳಗಾವಿ ಚಿಕ್ಕೋಡಿ, ಧಾರವಾಡ ಜಿಲ್ಲೆಯ ISRA ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ದೀಪಕ್ ಕಾಂಬಳೆ ಜಿಲ್ಲಾ ಯೋಜನಾ ವ್ಯವಸ್ಥಾಪಕರು ಚಿಕ್ಕೋಡಿ ಮಾತನಾಡಿದರು.
ಶಿವರಾಜ್ ISRA ತಂಡದ ನಾಯಕರು ಚಿಕ್ಕೋಡಿ ಸ್ವಾಗತಿಸಿದರು, ಎಂ ಕೆ ಕುಂದರಗಿ ISA ತಂಡದ ನಾಯಕರು ಬೆಳಗಾವಿ ವಿಭಾಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅಕ್ಕಮ್ಮ ಕಾರ್ಯಕ್ರಮದ ಪ್ರಾರ್ಥನೆ ನಡೆಸಿಕೊಟ್ಟರು.