spot_img
spot_img

ನಾಲ್ವರಿಗೆ ಬೆಳಕು ನೀಡಿದ ವೇದಾಂತ ಫೌಂಡೇಶನ್

Must Read

- Advertisement -

ಸಾಮಾಜಿಕ ಸೇವೆಯಲ್ಲಿ ಸದಾ ಮುಂಚೂಣಿ ಯಲ್ಲಿರುವ ವೇದಾಂತ ಫೌಂಡೇಶನ್ ಸೇವಾಸಂಸ್ಥೆಯ ಸಹಕಾರದಿಂದ ಗ್ರಾಮೀಣ ಭಾಗದ ನಾಲ್ಕು ಮಂದಿಗೆ ಉಚಿತವಾಗಿ ಕಣ್ಣಿನ ಮೋತಿಬಿಂದು ಶಸ್ತ್ರಚಿಕಿತ್ಸೆಯನ್ನು ಮಾಡಿಸಲಾಯಿತು.

ವೇದಾಂತ ಫೌಂಡೇಶನ್ ನ ಪ್ರಮುಖ ಮಾರ್ಗದರ್ಶಕರಾದ ರೊಟೇರಿಯನ್  ಅಶೋಕ ನಾಯಿಕ್ ರವರು ಈ ಶಸ್ತ್ರಚಿಕಿತ್ಸೆ ಗೆ  ಆರ್ಥಿಕಸಹಾಯ ಮಾಡಿದರು.

ಬೆಳಗಾವಿ ತಾಲೂಕಿನ  ಬೆಳವಟ್ಟಿಯ ಮಾರುತಿ ನಲವಡೆ ಮತ್ತು ಶ್ರೀಮತಿ ಗಂಗೂಬಾಯಿ ಪಾಟೀಲ, ಖಾನಾಪುರ ತಾಲ್ಲೂಕಿನ ಬೀಡಿ- ಗೋಲ್ಯಾಳಿ ಯ ಶ್ರೀಮತಿ ರಾಮಕ್ಕ ಸಾತನ್ನವರ ಹಾಗೂ ಮಹಾರಾಷ್ಟ್ರದ ಚಂದಗಡ ತಾಲೂಕಿನ ತುಡಯೆ ಗ್ರಾಮದ ಲಕ್ಷ್ಮಿ ಹುಲಜಿ ಇವರಿಗೆ ಕಣ್ಣಿನ ಮೋತಿಬಿಂದುವಿನ ಸಮಸ್ಯೆಯಿತ್ತು. ಈ ವಿಚಾರ ತಿಳಿದ ವೇದಾಂತ ಫೌಂಡೇಶನ್ ಸಂಸ್ಥೆಯು ಇವರ ಶಸ್ತ್ರಚಿಕಿತ್ಸೆಗೆ ಸಹಕಾರ ನೀಡಲು ಸಹಮತಿ ನೀಡಿತು. ಅದರಂತೆ ವೇದಾಂತ ಫೌಂಡೇಶನ್ ನ ಪ್ರಮುಖ ಮಾರ್ಗದರ್ಶಕರಾದ ರೋಟರಿಯನ್ ಅಶೋಕ ನಾಯಿಕ್ ಅವರನ್ನು ಸಂಪರ್ಕಿಸಲಾಯಿತು. ಅವರ ಮುಂದಾಳತ್ವದಲ್ಲಿ, ಅವರಿಂದ ಆರ್ಥಿಕ ಸಹಾಯ ಪಡೆದು ನಾಲ್ಕು ಮಂದಿಯ ಶಸ್ತ್ರಚಿಕಿತ್ಸೆಯನ್ನು ಡಾ. ಕೋಡಕಿಣಿ ಆಸ್ಪತ್ರೆಯಲ್ಲಿ ಮಾಡಿಸಲಾಯಿತು.

- Advertisement -

ವೇದಾಂತ ಫೌಂಡೇಶನ್ ನ ಅಧ್ಯಕ್ಷರಾದ ಸತೀಶ ಪಾಟೀಲ, ಉಪಾಧ್ಯಕ್ಷರಾದ ಸುನೀಲ ದೇಸುರಕರ, ಫೌಂಡೇಶನ್ ನ ಸಂಚಾಲಕರಾದ ಕಣಬರ್ಗಿ ಮರಾಠಿ ಶಾಲೆಯ ಮುಖ್ಯಾಧ್ಯಾಪಕರಾದ ಸುರೇಶ ಅಷ್ಟಗಿ, ಶ್ರೀ ವಿಶ್ವನಾಥ ಪಾಟೀಲ, ಚಿಂತಾಮಣ ರಾವ್ ಹೈಸ್ಕೂಲ್ ನ  ಯುವರಾಜ ರತ್ನಾಕರ, ಸಾತೇರಿ  ಚೌಗುಲೆ, ಸೂರಜ್ ಪಾಟೀಲ, ರವಿ ಹರಗುಡೆ, ಶ್ರೀಮತಿ ಸವಿತಾ ಚಂದಗಡಕರ, ಶ್ರೀಮತಿ ಆಸ್ಮಾ ನಾಯಿಕ, ಶ್ರೀಮತಿ ಜಯಶ್ರೀ ಪಾಟೀಲ, ಶೈಲಜಾ ಬಿ. ಇವರು ಈ ಕಾರ್ಯಕ್ಕಾಗಿ ವಿಶೇಷ ಪರಿಶ್ರಮ ವಹಿಸಿದರು.

ಉಚಿತ ಮೋತಿಬಿಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಾಲ್ಕೂ ಮಂದಿ ವೇದಾಂತ ಫೌಂಡೇಶನ್ ಮತ್ತು ಅದರ ಸದಸ್ಯರಾದ ಶಿಕ್ಷಕರು, ಸಮಾಜಸೇವಕರು  ಹಾಗೂ ಆರ್ಥಿಕ ಸಹಾಯ ನೀಡಿದ ಫೌಂಡೇಶನ್ ನ ಮಾರ್ಗದರ್ಶಕರಾದ ರೋಟರಿಯನ್ ಅಶೋಕ ನಾಯಿಕ ರವರ ಸಹಕಾರಕ್ಕೆ ಆಭಾರಿಯಾಗಿರುವುದಾಗಿ ಹೇಳಿದ್ದಾರೆ.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group